ನವದೆಹಲಿ: ದೇಶದ ಉನ್ನತ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಕೊಲಿಜಿಯಂನ ಮಾಜಿ ಸದಸ್ಯರೇ ಹೇಳಿಕೆ ನೀಡಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆಯು ಪಾರದರ್ಶಕವಾಗಿದೆ. ಇದರ ಕುರಿತು ಹೇಳಿಕೆ ನೀಡುವ ಮೂಲಕ ವ್ಯವಸ್ಥೆಯ ಹಾದಿ ತಪ್ಪಿಸದಿರಿ” ಎಂದು ಹೇಳಿದೆ.
೨೦೧೮ರಲ್ಲಿ ನಡೆದ ಕೊಲಿಜಿಯಂ ಸಭೆಯ ನಿರ್ಣಯಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ (RTE) ಮಾಹಿತಿ ನೀಡಬೇಕು ಎಂದು ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಎಂಬುವರ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಸಿ.ಟಿ.ರವಿಕುಮಾರ್ ಅವರ ನೇತೃತ್ವದ ನ್ಯಾಯಪೀಠವು, “ಕೊಲಿಜಿಯಂ ಮಾಜಿ (ನಿವೃತ್ತ ನ್ಯಾಯಮೂರ್ತಿಗಳು) ಸದಸ್ಯರಿಗೆ ಕೊಲಿಜಿಯಂ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿತು.
“ಕೊಲಿಜಿಯಂ ಸಭೆಯಲ್ಲಿ ಮೌಖಿಕವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆಯೇ ಹೊರತು, ಯಾವುದೇ ಲಿಖಿತ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಕೆಲವು ವಿಷಯಗಳು ಸಭೆಯಲ್ಲಿ ಚರ್ಚೆಯಾಗಿವೆ. ನಮ್ಮದು ಅತ್ಯಂತ ಹೆಚ್ಚು ಪಾರದರ್ಶಕ ವ್ಯವಸ್ಥೆಯಾಗಿದೆ. ಇದರ ಕುರಿತು ಮಾತನಾಡುವ ಮೂಲಕ ಯಾರೂ ದಾರಿ ತಪ್ಪಿಸಬಾರದು” ಎಂದು ನ್ಯಾಯಪೀಠ ಹೇಳಿತು. ೨೦೧೮ರ ಕೊಲಿಜಿಯಂ ಸಭೆಯಲ್ಲಿ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ಬಡ್ತಿ ನೀಡುವ ಕುರಿತು ಚರ್ಚಿಸಲಾಗಿತ್ತು.
ಇದನ್ನೂ ಓದಿ | Judges Appointement | ಕಾನೂನು ಸಚಿವ ರಿಜಿಜು ಹೇಳಿಕೆಗೆ ಸುಪ್ರೀಂ ಗರಂ! ನೇಮಕಾತಿಗೆ ತಡವೇಕೆ?