Site icon Vistara News

Former PM Manmohan Singh: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ಗೆ ಜೀವಮಾನ ಸಾಧನೆ ಗೌರವ, ಏನಿದು ಪ್ರಶಸ್ತಿ?

Lifetime Achievement Honour for Former PM Manmohan Singh in UK

ಲಂಡನ್: ಆರ್ಥಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೋರಿದ ಅಪ್ರತಿಮ ಸಾಧನೆಗಾಗಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Former PM Manmohan Singh) ಅವರು ಇಂಡಿಯಾ-ಇಂಗ್ಲೆಂಡ್ ಅಚೀವರ್ಸ್ ಹಾನರ್ಸ್‌ನ ಜೀವಮಾನ ಸಾಧನೆ ಗೌರವ(Lifetime Achievement Honour)ವನ್ನು ನೀಡಲಾಗಿದೆ. ಕಳೆದ ವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವವನ್ನು ಘೋಷಿಸಲಾಯಿತು. ಇಂಗ್ಲೆಂಡ್‌ನ ರಾಷ್ಟ್ರೀಯ ಭಾರತೀಯ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಒಕ್ಕೂಟ (NISAU) ದಿಲ್ಲಿಯಲ್ಲಿ ಡಾ. ಸಿಂಗ್ ಅವರಿಗೆ ಶೀಘ್ರವೇ ಹಸ್ತಾಂತರಿಸಲಿದೆ.

ಭಾರತದಲ್ಲಿರುವ ಬ್ರಿಟಿಷನ್ ಕೌನ್ಸಿಲ್ ಮತ್ತು ಇಂಟರ್‌ನ್ಯಾಷನಲ್ ಟ್ರೇಡ್ ಇಲಾಖೆ ಸಹಭಾಗಿತ್ವದಲ್ಲಿ ಎನ್‌ಐಎಸ್‌ಯುಕೆ ಈ ಗೌರವನ್ನು ಪ್ರದಾನ ಮಾಡುತ್ತದೆ. ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ಭಾರತೀಯ ವಿದ್ಯಾರ್ಥಿಗಳ ಸಾಧನೆಗಳನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತದೆ. ಡಾ. ಮನಮೋಹನ್ ಸಿಂಗ್ ಅವರು ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳಲ್ಲಿ ಓದಿದ್ದಾರೆ.

ಇದನ್ನೂ ಓದಿ: Nitin Gadkari | ಈ ದೇಶ ಡಾ. ಮನಮೋಹನ್ ಸಿಂಗ್‌ಗೆ ಋಣಿಯಾಗಿದೆ! ಗಡ್ಕರಿ ಹೀಗೆ ಹೇಳಿದ್ದು ಏಕೆ?

ನಮ್ಮ ದೇಶದ ಭವಿಷ್ಯ ಮತ್ತು ನಮ್ಮ ಎರಡು ದೇಶಗಳ ನಡುವಿನ ಬಾಂಧವ್ಯದ ಯುವಜನರಿಂದ ಬರುವ ವಿಶೇಷವಾಗಿ ಅರ್ಥಪೂರ್ಣವಾದ ಈ ಗೆಸ್ಚರ್‌ನಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ ಎಂದು ಡಾ. ಮನಮೋಹನ್ ಸಿಂಗ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Exit mobile version