ನೋಯ್ಡಾ, ಉತ್ತರ ಪ್ರದೇಶ: ನೋಯ್ಡಾದ ಬಹುಮಹಡಿ ಕಟ್ಟಡದ (High Rise building) ಲಿಫ್ಟ್ ಅನಿರೀಕ್ಷಿತವಾಗಿ (Lift Crash in Noida) ಬಿದ್ದು ಒಂಬತ್ತು ಐಟಿ ಉದ್ಯೋಗಿಗಳು ಗಾಯಗೊಂಡಿದ್ದಾರೆ(Techie Injured). ನೋಯ್ಡಾ ಸೆಕ್ಟರ್ 125ರ ರಿವರ್ ಸೈಡ್ ಟವರ್‌ನಲ್ಲಿರುವ ಲಿಫ್ಟ್ 8ನೇ ಮಹಡಿಯಿಂದ ಕುಸಿದಿದ್ದು, ತೀವ್ರವಾಗಿ ಗಾಯಗೊಂಡಿರುವ 9 ಟೆಕ್ಕಿಗಳ ಪೈಕಿ ಐವರು ತೀವ್ರ ನಿಗಾಘಟಕದಲ್ಲಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು(UP Police) ತಿಳಿಸಿದ್ದಾರೆ.
ಎರಾಸ್ಮಿತ್ ಟೆಕ್ನಾಲಜೀಸ್‌ನ ಉದ್ಯೋಗಿಗಳು 8ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸಂಜೆ 5.45ಕ್ಕೆ ಈ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 9 ಜನರ ಪೈಕಿ ಐವರಿಗೆ ಕಾಲು ಮತ್ತು ಕೈಗಳಿಗೆ ತೀವ್ರ ಗಾಯಗಳಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ನಿಗಾ ಘಟಕದಲ್ಲಿದ್ದ ಐವರು ಪೈಕಿ ನಾಲ್ವರನ್ನು ಜನರಲ್ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಾಸ್ಮಿತ್ ಟೆಕ್ನಾಲಜೀಸ್ ಐಟಿ ಡೆವಲಪರ್ ಕಂಪನಿಯಾಗಿದೆ ಮತ್ತು ಅದರ ಕಚೇರಿ ಕಟ್ಟಡದ ಎಂಟನೇ ಮಹಡಿಯಲ್ಲಿದೆ. ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಖಾಸಗಿ ಜೇಪೀ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಲ್ಲಿ ಇಬ್ಬರು ಆರೋಗ್ಯವಾಗಿದ್ದಾರೆ, ಇತರರು ಚಿಕಿತ್ಸೆ ಪಡೆಯುತ್ತಿದ್ದಾರೆ. ಎಂದು ಉಪ ಪೊಲೀಸ್ ಆಯುಕ್ತ (ನೋಯ್ಡಾ) ಹರೀಶ್ ಚಂದರ್ ಅವರು ತಿಳಿಸಿದ್ದಾರೆ.
ಗಾಯಗೊಂಡವರನ್ನು ಪಿಯೂಷ್ ಶರ್ಮಾ (22), ಅಭಿಷೇಕ್ ಪಂಡಿತ್ (23), ಅಭಿಷೇಕ್ ಗುಪ್ತಾ (24), ಸೌರಭ್ ಕಟಿಯಾ (28), ರಜತ್ ಶರ್ಮಾ (29), ಶುಭಂ ಭಾರದ್ವಾಜ್ (22), ಯಶು ಶರ್ಮಾ (23), ಸಾಗರ್ (23) ಮತ್ತು ಅಭಿಜಿತ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಅವಘಡಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನೋಯ್ಡಾದಲ್ಲಿ ಸಾಕಷ್ಟು ಬಹುಮಡಿಯ ಕಟ್ಟಡಗಳಿದ್ದು, ಈ ವರ್ಷದಲ್ಲಿ ಲಿಫ್ಟ್ ಕುಸಿದ ಪ್ರಕರಣಗಳು ವರದಿಯಾಗಿವೆ. ಕೆಲವು ಪ್ರಕರಣಗಳಲ್ಲಿ ಸಾವುಗಳು ಕೂಡ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Lift Collapses | ಗುಜರಾತ್ನಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿತ; 7 ಕಾರ್ಮಿಕರು ಸಾವು