Site icon Vistara News

ಪೋಲಿ ಚಿತ್ರ ನೋಡೋದು, ಲೈಕ್‌ ಮಾಡೋದು ಅಪರಾಧ ಅಲ್ಲ; ಕೋರ್ಟ್‌ ಮಹತ್ವದ ಆದೇಶ

Obscene Post

Liking Obscene Post On Social Media No Crime, Sharing Is: Allahabad High Court

ಪ್ರಯಾಗರಾಜ್:‌ ಸಾಮಾಜಿಕ ಜಾಲತಾಣಗಳಲ್ಲಿ (Social Media) ಪೋಲಿ ಹಾಗೂ ಅಶ್ಲೀಲ ಫೋಟೊಗಳು ಮತ್ತು ವಿಡಿಯೊಗಳನ್ನು (Obscene Post) ಅಪ್‌ಲೋಡ್‌ ಮಾಡುವುದನ್ನು ನಿಷೇಧಿಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿರುತ್ತವೆ. ಕೆಲವೊಮ್ಮೆ ಅತಿರೇಕದ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವ ಕಾರಣ ಇಂತಹ ಆಗ್ರಹಗಳು ಜೋರಾಗುತ್ತವೆ. ಇದರ ಬೆನ್ನಲ್ಲೇ, “ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೊಗಳನ್ನು ಲೈಕ್‌ ಮಾಡುವುದು ತಪ್ಪಲ್ಲ” ಎಂದು ಅಲಹಾಬಾದ್‌ ಹೈಕೋರ್ಟ್‌ (Allahabad High Court) ಮಹತ್ವದ ಆದೇಶ ಹೊರಡಿಸಿದೆ.

ಆಗ್ರಾದ ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಎಂಬ ವ್ಯಕ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಲೈಕ್‌ ಮಾಡಿದ್ದಕ್ಕಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿದೆ. ಇದನ್ನು ಪ್ರಶ್ನಿಸಿ ವ್ಯಕ್ತಿಯು ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದು, ನ್ಯಾಯಮೂರ್ತಿ ಅರುಣ್‌ ಕುಮಾರ್‌ ದೇಶ್ವಾಲ್‌ ಅವರು ವ್ಯಕ್ತಿ ವಿರುದ್ಧದ ಕೇಸ್‌ ರದ್ದುಗೊಳಿಸಲು ಆದೇಶಿಸಿದರು. ಇದೇ ವೇಳೆ ಅವರು, “ಜಾಲತಾಣಗಳಲ್ಲಿ ಪೋಸ್ಟ್‌ ಮಾಡಲಾದ ವಿಡಿಯೊಗಳನ್ನು ಲೈಕ್‌ ಮಾಡುವುದು ಅಪರಾಧವಲ್ಲ” ಎಂದರು.

ಅಲಹಾಬಾದ್‌ ಹೈಕೋರ್ಟ್

ಯಾವುದು ಅಪರಾಧ?

ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆದ ಫೋಟೊ ಅಥವಾ ವಿಡಿಯೊವನ್ನು ನೋಡಿ, ಲೈಕ್‌ ಮಾಡಿದರೆ ಯಾವುದೇ ತೊಂದರೆ ಇಲ್ಲ. ಆದರೆ, “ಫೇಸ್‌ಬುಕ್‌ನಲ್ಲಿ ವಿಡಿಯೊ ಅಥವಾ ಫೋಟೊವನ್ನು ಶೇರ್‌ ಮಾಡುವುದು, ಎಕ್ಸ್‌ ಜಾಲತಾಣದಲ್ಲಿ ಅದನ್ನು ರಿಪೋಸ್ಟ್‌ ಮಾಡುವುದು ಅಪರಾಧ” ಎಂಬುದಾಗಿ ಅಲಹಾಬಾದ್‌ ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಶ್ಲೀಲ ಪೋಸ್ಟ್‌ಗಳನ್ನು ಶೇರ್‌ ಮಾಡಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 67ರ ಪ್ರಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

ಇದನ್ನೂ ಓದಿ: ಶಾರ್ಟ್ ಸ್ಕರ್ಟ್ ಧರಿಸಿ ಡ್ಯಾನ್ಸ್‌ ಮಾಡುವುದು ಅಶ್ಲೀಲವಲ್ಲ ಎಂದ ಬಾಂಬೆ ಹೈಕೋರ್ಟ್

ಸುಮಾರು 600-700 ಮುಸ್ಲಿಮರು ಅನುಮತಿ ಇಲ್ಲದೆಯೇ ಒಂದೆಡೆ ಸೇರಿದ ವಿಡಿಯೊ ಅಥವಾ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆಗಿತ್ತು. ಇದನ್ನು ಮೊಹಮ್ಮದ್‌ ಇಮ್ರಾನ್‌ ಕಾಜ್ಮಿ ಅವರು ಲೈಕ್‌ ಮಾಡಿದ್ದರು. ಆದರೆ, ಇದೇ ಕಾರಣಕ್ಕೆ ಅವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿತ್ತು. “ಐಟಿ ಕಾಯ್ದೆಯ ಸೆಕ್ಷನ್‌ 67 ಪ್ರಕಾರ ಯಾವುದೇ ಅಸಮಂಜಸ, ಅಶ್ಲೀಲ ಪೋಸ್ಟ್‌ಅನ್ನು ಶೇರ್‌ ಮಾಡುವುದು ಅಪರಾಧವಾಗಿದೆಯೇ ಹೊರತು, ಲೈಕ್‌ ಮಾಡುವುದಲ್ಲ” ಎಂದು ಅಲಹಾಬಾದ್‌ ಹೈಕೋರ್ಟ್‌ ತಿಳಿಸಿತು.

Exit mobile version