ಮೋರೆನಾ, ಮಧ್ಯಪ್ರದೇಶ: ಖಾಸಗಿ ಶಾಲೆಯೊಂದರ ಪ್ರಿನ್ಸಿಪಾಲ್ ಕಚೇರಿಯಲ್ಲಿ ಮದ್ಯ ಮತ್ತು ಕಾಂಡೋಮ್ ಸೇರಿದಂತೆ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾದ ಬೆನ್ನಲ್ಲೇ, ಶಾಲೆಗೆ ಬೀಗ ಜಡಿಯಲಾಗಿದೆ. ಈ ಘಟನೆ ಮಧ್ಯಪ್ರದೇಶದ ಮೋರೆನಾ ಜಿಲ್ಲೆಯಲ್ಲಿ ನಡೆದಿದೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ನಿವೇದಿತಾ ಶರ್ಮಾ, ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಎ ಕೆ ಪಾಠಕ್ ಅವರೊಂದಿಗೆ ಸಾಮಾನ್ಯ ತಪಾಸಣೆಗಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಾಲೆಗೆ ಆಗಮಿಸಿದ್ದ ವೇಳೆ ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಶಾಲೆಗೆ ಬೀಗ ಜಡಿಯಲಾಗಿದೆ(Madhya Pradesh).
ನಾವು ಎಂದಿನ ತಪಾಸಣೆಗಾಗಿ ಇಲ್ಲಿಗೆ ಆಗಮಿಸಿದೆವು. ಆದರೆ ನಾವು ಯಾವಾಗ ಶಾಲಾ ಕ್ಯಾಂಪಸ್ ಜಾಲಾಡಿದಾಗ, ಆಶ್ಚರ್ಯವಾಯಿತು. ಶಾಲೆಯ ಆವರಣವನ್ನು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಪರಿಶೀಲಿಸಿದಾಗ, ಎರಡೂ ಮೂಲೆಗಳನ್ನು ಒಳಗಿನಿಂದ ಹೇಗೆ ಜೋಡಿಸಲಾಗಿದೆ ಎಂದು ತಿಳಿದು ನಮಗೆ ಆಶ್ಚರ್ಯವಾಯಿತು. ನಮ್ಮನ್ನು ಅಲ್ಲಿಗೆ ಕರೆದೊಯ್ಯಲು ಯಾರೂ ಸಿದ್ಧರಿರಲಿಲ್ಲ. ಆದ್ದರಿಂದ ನಾವು ಮುಂದೆ ಹೋಗಿ ಪರಿಶೀಲಿಸಿದೆವು. ಕಟ್ಟಡವನ್ನು ಪ್ರವೇಶಿಸಿದಾಗ, ಅದು ವಸತಿ ವ್ಯವಸ್ಥೆಯಾಗಿತ್ತು. ಪರೀಕ್ಷೆ ನಡೆಯುತ್ತಿರುವುದು ಗೊತ್ತಾಗುತ್ತಿದ್ದಂತೆ ವಾಸಿಸುತ್ತಿದ್ದ ಹೆಚ್ಚಿನ ಜನರು ಕಟ್ಟಡದಿಂದ ಹೊರಬಂದರು. ಶಾಲೆಯನ್ನು ವಸತಿಗಾಗಿಯೂ ಬಳಸಲಾಗುತ್ತಿತ್ತು ಎಂದು ನಿವೇದಿತಾ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: Indecent behavior : ಮದ್ಯ ಸೇವಿಸಿ ಶಾಲೆಗೆ ನುಗ್ಗಿ ಹಳೆ ವಿದ್ಯಾರ್ಥಿಯ ಕಾಟ, ಬೇಸತ್ತ ಶಿಕ್ಷಕ ವೃಂದ
ಮತ್ತೊಂದೆಡೆ, ಶಾಲೆಯ ಮುಖ್ಯೋಪಾಧ್ಯಯರ ಕಚೇರಿಯಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಜತೆಗೆ, ಕಾಂಡೋಮ್ಸ್ ಕೂಡ ಸಿಕ್ಕಿವೆ. ನಿಯಮಗಳ ಪ್ರಕಾರ, ಶಾಲೆಯ ಆವರಣದಲ್ಲಿ ಮದ್ಯವನ್ನು ತರುವಂತೆಯೇ ಇಲ್ಲ. ಅಲ್ಲದೇ, ಅಡುಗೆ ಮಾಡಲು ಗ್ಯಾಸ್ ಸಿಲೆಂಡರ್ ಕೂಡ ದೊರೆತಿದೆ. ಕ್ಯಾಂಪಸ್ ಪೂರ್ತಿ ನಾನು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ಆರೋಪವನ್ನು ಶಾಲಾ ಮಂಡಳಿ ತಳ್ಳಿ ಹಾಕಿದೆ. ಏತನ್ಮಧ್ಯೆ, ಜಿಲ್ಲಾಧಿಕಾರಿಯ ಆದೇಶ ಅನುಸಾರ ಶಾಲೆಗೆ ಬೀಗ ಜಡಿಯಲಾಗಿದೆ.