ವಿಜಯನಗರ
Indecent behavior : ಮದ್ಯ ಸೇವಿಸಿ ಶಾಲೆಗೆ ನುಗ್ಗಿ ಹಳೆ ವಿದ್ಯಾರ್ಥಿಯ ಕಾಟ, ಬೇಸತ್ತ ಶಿಕ್ಷಕ ವೃಂದ
ವಿಜಯ ನಗರದ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿಯೊಬ್ಬ ನಿತ್ಯ ಮದ್ಯ ಸೇವಿಸಿ ಶಾಲೆಗೆ ಬಂದು ಕಾಟ ಕೊಡುತ್ತಿದ್ದಾನೆ. (Indecent behavior) ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಮಸ್ಯೆ ಸೃಷ್ಟಿಸಿದ್ದಾನೆ. ಏನಿದು ಪ್ರಕರಣ? ಇಲ್ಲಿದೆ ವಿವರ.
ವಿಜಯ ನಗರ: ವಿಜಯನಗರ ಜಿಲ್ಲೆಯ ಶಾಲೆಯೊಂದರಲ್ಲಿ ಹಳೆ ವಿದ್ಯಾರ್ಥಿಯೊಬ್ಬ ಮದ್ಯ ಸೇವಿಸಿ ಬಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆ ನೀಡಿದ ಘಟನೆ ನಡೆದಿದೆ.
ರಾಮು ಎಂಬ ಹಳೆ ವಿದ್ಯಾರ್ಥಿ ಮದ್ಯ, ಗಾಂಜಾ ಸೇವಿಸಿ, ಶಾಲೆಯ ಆವರಣ ಪ್ರವೇಶಿಸಿ, ತರಗತಿಗೂ ನುಗ್ಗಿ ಪಠ್ಯ ಪ್ರವಚನಗಳಿಗೆ ತೊಂದರೆ ನೀಡುತ್ತಿದ್ದಾನೆ. ನನಗೂ ಪಾಠ ಮಾಡಿ ಎನ್ನುತ್ತಾನೆ.
ಹಳೆಯ ವಿದ್ಯಾರ್ಥಿಯ ಕಾಟಕ್ಕೆ ಶ್ರೀಮತಿ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ರೋಸಿ ಹೋಗಿದ್ದಾರೆ.
ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರುವ ಶಾಲೆಯಲ್ಲಿ 1 ರಿಂದ 10 ತರಗತಿಯವರೆಗೆ 300 ಮಕ್ಕಳು ಓದುತ್ತಿದ್ದಾರೆ. ಆದರೆ ನಿತ್ಯವೂ ಈ ಹಳೆ ವಿದ್ಯಾರ್ಥಿಯ ಕಾಟ ಉಂಟಾಗಿದೆ ಎಂದು ಶಿಕ್ಷಕ ವೃಂದ ದೂರಿದೆ. ಈ ಶಾಲೆಗೆ ಸೂಕ್ತ ಭದ್ರತೆಯ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳು ಪಾಠ ಕೇಳುವ ಹೊತ್ತಲ್ಲೇ ಡೆಸ್ಕ್ ನಲ್ಲಿ ಕುಳಿತುಕೊಳ್ಳುತ್ತಾನೆ. ಪೊಲೀಸರಿಗೆ ದೂರು ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
ಕರ್ನಾಟಕ ಎಲೆಕ್ಷನ್
Karnataka Election: ಮತದಾರರಿಗೆ ಆಮಿಷ; ಶಾಸಕ ಶಾಮನೂರು ಮತ್ತು ಪುತ್ರನ ಮೇಲೆ ದಾಖಲಾಯ್ತು ದೂರು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಎಸ್.ಮಲ್ಲಿಕಾರ್ಜುನ್ ಮೇಲೆ ದೂರು ದಾಖಲಾಗಿದೆ.
ದಾವಣಗೆರೆ: ಮತದಾರರಿಗೆ ಆಮಿಷ ಒಡ್ಡಿರುವ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಮೇಲೆ ದೂರು ದಾಖಲು
ಚುನಾವಣಾ ನೀತಿ ಸಂಹಿತೆಗೂ ಮುನ್ನವೇ ಈ ಪ್ರಕರಣ ದಾಖಲಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್. ಎಸ್.ಮಲ್ಲಿಕಾರ್ಜುನ್ ಮೇಲೆ ದೂರು ದಾಖಲಾಗಿದೆ. ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿ ಬಳಗದ ಹೆಸರಿನಲ್ಲಿ ಹಂಚುತ್ತಿದ್ದ ಗಿಫ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
7.19 ಲಕ್ಷ ರೂ. ಮೌಲ್ಯದ ದೋಸೆ ಹಂಚು ಮತ್ತಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಜನರಿಗೆ ಆಮಿಷ ತೋರಿಸಿ ಗಿಫ್ಟ್ ಹಂಚುತ್ತಿದ್ದ ಬಗ್ಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎ1, ಎಸ್.ಎಸ್.ಮಲ್ಲಿಕಾರ್ಜುನ್ ಎ2 ಆರೋಪಿಗಳನ್ನಾಗಿಸಿ ದಾವಣಗೆರೆಯ ಕೆಟಿಜೆ ನಗರದ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲು ಮಾಡಲಾಗಿದೆ.
ಅನಧಿಕೃತ ಹಣ ಜಪ್ತಿ ಮಾಡಿದ ವಿಜಯನಗರ ಜಿಲ್ಲಾಡಳಿತ
ವಿಜಯನಗರ: ವಿಜಯನಗರ ಜಿಲ್ಲೆಯಲ್ಲಿ ಚುನಾವಣೆಗೆ ಮುನ್ನ ಅಕ್ರಮ ಹಣ, ಡ್ರಗ್ಸ್, ಅಕ್ರಮ ಬೆಳ್ಳಿ ಬಂಗಾರದ ಹವಾ ಜೋರಾಗಿದ್ದು, ಕೋಟಿ, ಕೋಟಿ ಅನಧಿಕೃತ ಹಣವನ್ನು ವಿಜಯನಗರ ಜಿಲ್ಲಾಡಳಿತ ಸೀಜ್ ಮಾಡಿದೆ.
ಚುನಾವಣೆ ನೀತಿ ಸಂಹಿತೆ ಜಾರಿ ಮುನ್ನವೇ ವಿಜಯನಗರ ಜಿಲ್ಲಾಡಳಿತದಿಂದ ಭರ್ಜರಿ ಬೇಟೆ ನಡೆದಿದೆ. 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆದಿದೆ. ಕಳೆದ 15 ದಿನಗಳಲ್ಲಿ ಬರೋಬ್ಬರಿ 3 ಕೋಟಿ 44 ಲಕ್ಷ, 23 ಸಾವಿರ ರೂ ಮೌಲ್ಯದ ಅಕ್ರಮ ಹಣ, ವಸ್ತುಗಳು ಸೀಜ್ ಆಗಿವೆ. 3 ಕೋಟಿ 15 ಲಕ್ಷದ 5 ಸಾವಿರದ 200 ರೂ. ಅಕ್ರಮ ಹಣ, 40 ಸಾವಿರ ಮೌಲ್ಯದ ಅಕ್ರಮ ಮದ್ಯ, 32,0940 ಮೌಲ್ಯದ ಡ್ರಗ್ಸ್, 35 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಬೆಳ್ಳಿ- ಬಂಗಾರ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Karnataka Budget 2023: ಬಡವರು, ಯುವಕರು, ಮಹಿಳೆಯರು, ಕಾರ್ಮಿಕರಿಗೆ ನೆರವು ನೀಡದ ಬಜೆಟ್: ಶಾಮನೂರು ಶಿವಶಂಕರಪ್ಪ
ಕರ್ನಾಟಕ
Earthquake: ಹೊಸಪೇಟೆ ಸಮೀಪ ಲಘು ಭೂಕಂಪನ; ಆತಂಕಗೊಂಡ ಸ್ಥಳೀಯರು
Earthquake: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಜಯನಗರ: ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಮಂಗಳವಾರ ಲಘು ಭೂಕಂಪನ (Earthquake) ಸಂಭವಿಸಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಗ್ರಾಮದ ಸುತ್ತಮುತ್ತ 15 ರಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ಭೂಕಂಪನದ ಮಾಹಿತಿ ಪಡೆದು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಿಕ್ಟರ್ ಮಾಪನದಲ್ಲಿ 2.9 ರಷ್ಟು ತೀವ್ರತೆ ದಾಖಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಭೂಕಂಪನ ತೀವ್ರತೆ ಕಡಿಮೆ ಇದ್ದು, ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಭೂಮಿ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಅನುಭವವಾಗಿದೆ. ಜನರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸವಾರ ಸಾವು, ಮತ್ತೊಬ್ಬರಿಗೆ ಗಾಯ
ಕೊಪ್ಪಳ: ತಾಲೂಕಿನ ಹೊಸನಿಂಗಾಪುರ ಬಳಿ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಕೆರೆಹಳ್ಳಿಯ ದೇವರಾಜ (24) ಮೃತ ಯುವಕ. ಐಆರ್‌ಬಿ ಪೊಲೀಸ್ ಶಂಕರಪ್ಪ ಗಾಯಾಳುವಾಗಿದ್ದಾರೆ. ಶಂಕರಪ್ಪ ಪರೇಡ್ ಮುಗಿಸಿಕೊಂಡು ಹೋಗುವಾಗ ಎದುರಿಗೆ ಬೈಕ್‌ನಲ್ಲಿ ಬಂದು ಡಿಕ್ಕಿ ಹೊಡೆದ ದೇವರಾಜ ದೇವರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಲಹೊಂಗಲದ ಇಂಚಲ ಗ್ರಾಮದಲ್ಲಿ ಅಗ್ನಿದುರಂತ: 20ಕ್ಕೂ ಅಧಿಕ ರೈತರ ಬಣವೆ ಭಸ್ಮ, ಟ್ರ್ಯಾಕ್ಟರ್, ಕೃಷಿ ಸಲಕರಣೆ ಕರಕಲು
ಬೈಲಹೊಂಗಲ (ಬೆಳಗಾವಿ) : ತಾಲೂಕಿನ ಇಂಚಲ ಗ್ರಾಮದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ (Fire tragedy) ರೈತರ ಇಪ್ಪತ್ತಕ್ಕೂ ಹೆಚ್ಚು ಬಣವೆಗಳು ಸುಟ್ಟು ಬೂದಿಯಾಗಿವೆ. ಒಂದು ಟ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳು ಸುಟ್ಟು ಕರಕಲಾಗಿವೆ. ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ.
ರೈತರು ಬೆಳೆಗಳ ರಾಶಿ ಮುಗಿಸಿ ಗ್ರಾಮದ ಹೊರವಲಯದಲ್ಲಿ ಬಣವೆಗಳ ಮೂಲಕ ದನ ಕರುಗಳ ಮೇವು ಸಂಗ್ರಹಣೆ ಮಾಡಿದ್ದರು. ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಬಣವೆಗಳು, ಕೃಷಿ ಸಲಕರಣೆ ಬೆಂಕಿಗೆ ಆಹುತಿಯಾಗಿವೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಎರಡು ವಾಹನ, ಪಕ್ಕದ ಜಮೀನಿನ ರೈತರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಲು ಶ್ರಮಿಸಿದರೂ ನಿಯಂತ್ರಣಕ್ಕೆ ಬರಲಿಲ್ಲ. ಬೆಳಗಾವಿ, ಗೋಕಾಕ, ಸವದತ್ತಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ನೆರವಾದರು.
ಇದನ್ನೂ ಓದಿ | Attack on women : ಕುರಿಗಾಹಿ ಮಹಿಳೆಯರ ಮೇಲೆ ನಾಲ್ವರು ಪುಂಡರಿಂದ ಆಕ್ರಮಣ, ಜಾತಿ ನಿಂದನೆ ಆರೋಪ
ರೈತರು ತಮ್ಮ ಬೋರ್ ವೆಲ್ ಮೂಲಕ ನೀರು ತಂದು ಬೆಂಕಿ ನಂದಿಸಲು ಶ್ರಮಿಸಿದರು. ಬಣವೆ ಸುತ್ತಮುತ್ತ ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಗೋವಿನ ಜೋಳದ ಬೆಳೆ, ಜೋಳ ಹಾನಿಯಾಗಿದೆ. ಬಿಸಿಎಂ ಹಾಸ್ಟೆಲ ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಅರಿತು ಕಣದಲ್ಲಿರುವ ಎತ್ತುಗಳ ಕಣಿ ಬಿಚ್ಚಿದ ಪರಿಣಾಮ ಎತ್ತಗಳು ಸುರಕ್ಷಿತವಾಗಿ ಉಳಿದವು.
ಸತತ 6 ಗಂಟೆಗಳ ಕಾಲ ನಿರಂತರವಾಗಿ ಆಗ್ನಿಶಾಮಕದಳದ ಸಿಬ್ಬಂದಿ, ರೈತರು, ನೂರಾರು ನಾಗರೀಕರು ಬೆಂಕಿ ನಂದಿಸಲು ನೆರವಾದರು. ದನಕರುಗಳಿಗೆ ಸಂಗ್ರಹಿಸಿಟ್ಟದ್ದ ಬಣವೆಗಳಿಗೆ ಏಕಾಎಕಿ ಬೆಂಕಿ ತಗುಲಿ ಅಪಾರ ನಷ್ಟವಾಗಿದ್ದು ಸರ್ಕಾರ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕರ್ನಾಟಕ
SC ST Reservation: 2B ಪ್ರವರ್ಗ ಹಿಂತೆಗೆತಕ್ಕೆ ಸಿಡಿದ ಮುಸ್ಲಿಮರು; ರಾಜ್ಯದ ಹಲವು ಕಡೆ ಬೃಹತ್ ಪ್ರತಿಭಟನೆ
2B category: ಮುಸ್ಲಿಂ ಸಮುದಾಯಕ್ಕಿದ್ದ 2ಬಿ ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿರುವ ಕ್ರಮವನ್ನು ಖಂಡಿಸಿ ಮುಸ್ಲಿಂ ಸಮುದಾಯದವರು ರಾಜ್ಯದ ಹಲವು ಕಡೆ ಪ್ರತಿಭಟನೆಗೆ ಇಳಿದಿದ್ದಾರೆ. ಅಲ್ಲದೆ, ಈ ಹಿಂದಿನ ಮೀಸಲಾತಿ ಪದ್ಧತಿಯೇ ಇರಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು: ಎಸ್‌ಸಿ-ಎಸ್‌ಟಿ ಮೀಸಲಾತಿ (SC ST Reservation) ಜಾರಿಯಲ್ಲಿ ಒಳ ಮೀಸಲಾತಿ ನಿಗದಿಪಡಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಎಸ್‌ಸಿ ಸಮುದಾಯದ ಒಳಮೀಸಲಾತಿಗೆ ಬಂಜಾರ ಸಮುದಾಯದವರು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗ ಒಳ ಮೀಸಲಾತಿ ಮಾಡುವ ವೇಳೆ ಮುಸ್ಲಿಂ ಸಮುದಾಯಕ್ಕೆ ಇದ್ದ 2ಬಿ (2B) ಪ್ರವರ್ಗವನ್ನು ತೆಗೆದು ಹಾಕಿರುವ ಸಂಬಂಧ ಮುಸ್ಲಿಂ ಸಮುದಾಯದವರು ತಿರುಗಿಬಿದ್ದಿದ್ದು, ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಹಳೇ ಮೀಸಲಾತಿ ಪದ್ಧತಿಯೇ ಜಾರಿಯಲ್ಲಿರಲಿ ಎಂದು ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮುಸ್ಲಿಮರ ಆಕ್ರೋಶ
ಬೆಳಗಾವಿ: ಮುಸ್ಲಿಂ ಸಮುದಾಯಕ್ಕಿದ್ದ 2ಬಿ ಪ್ರವರ್ಗದಡಿ ಇದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ ಎಂದು ಆರೋಪಿಸಿ ಬೆಳಗಾವಿಯಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ವತಿಯಿಂದ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಲಾಗಿದೆ. ತಕ್ಷಣವೇ ಸಚಿವ ಸಂಪುಟ ಸಭೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಗಿದೆ. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ
ಚಿತ್ರದುರ್ಗದಲ್ಲಿ ರಸ್ತೆ ಮೇಲೇ ಕುರ್ಚಿ ಹಾಕಿ ಪ್ರತಿಭಟನೆ
ಚಿತ್ರದುರ್ಗ: ರಾಜ್ಯ ಸರ್ಕಾರವು 2ಬಿ ಮೀಸಲಾತಿ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಲಾಗಿದೆ. ನಗರದ ಡಿಸಿ ಸರ್ಕಲ್ ಬಳಿ ಪ್ರತಿಭಟನೆಗೆ ವೇದಿಕೆಯನ್ನು ಹಾಕಲಾಗಿತ್ತು. ಆದರೆ, ಅನುಮತಿ ಪಡೆಯದ ಹಿನ್ನೆಲೆಯಲ್ಲಿ ವೇದಿಕೆಯನ್ನು ಬಳಸದಂತೆ ಎಸ್‌ಡಿಪಿಐ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಕೆಲ ಕಾಲ ವಾಗ್ವಾದ ನಡೆದಿದೆ. ಬಳಿಕ ಪೊಲೀಸರು ಕಾರ್ಯಕ್ರಮದ ವೇದಿಕೆಯನ್ನು ತೆರವುಗೊಳಿಸಿದ್ದಾರೆ. ವೇದಿಕೆ ತೆರವು ಹಿನ್ನೆಲೆಯಲ್ಲಿ ರಸ್ತೆ ಮೇಲೆಯೇ ಕುರ್ಚಿ ಹಾಕಿ ಕುಳಿತ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆಯನ್ನು ಮುಂದುವರಿಸಿದರು.
ಮಂಡ್ಯದಲ್ಲಿ ಮುಸ್ಲಿಮರ ಆಕ್ರೋಶ
ಮಂಡ್ಯ: ಮುಸ್ಲಿಂ ಸಮುದಾಯದವರಿಗೆ 2ಬಿ ಮೀಸಲಾತಿ ರದ್ದು ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಭುಗಿಲೆದ್ದ ಸಮುದಾಯದವರ ಆಕ್ರೋಶ ಭುಗಿಲೆದ್ದಿದೆ. ಎಸ್‌ಡಿಪಿಐ ನೇತೃತ್ವದಲ್ಲಿ ಹಲವು ಮುಸ್ಲಿಂ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ಮುಸ್ಲಿಂ ಸಮುದಾಯದವರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿದರು. ಹೊಸ ಮೀಸಲಾತಿ ಕ್ರಮವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Karnataka Elections : ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಂಜುನಾಥ್ ಕುನ್ನೂರುಗೆ ಇಲ್ಲ, ವಿನಯ ಕುಲಕರ್ಣಿಯೇ ಪಕ್ಕಾ?
ಹೊಸಪೇಟೆಯಲ್ಲಿಯೂ ಮುಸ್ಲಿಂರ ಆಕ್ರೋಶ
ಒಳ ಮೀಸಲಾತಿ ರದ್ದುಪಡಿಸಿರುವ ರಾಜ್ಯ ಸರ್ಕಾರ ಕ್ರಮವನ್ನು ಪ್ರಶ್ನಿಸಿ ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ ನಡೆಸಲಾಗಿದೆ. ಹೊಸಪೇಟೆಯ ತಹಸೀಲ್ದಾರ್ ಕಚೇರಿ ಎದುರು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಕರ್ನಾಟಕ
Salam Police : ರೈಲಿನಡಿ ಬೀಳುವ ಅಪಾಯದಲ್ಲಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೆ ಪೊಲೀಸ್; ಸರ್ವತ್ರ ಸೆಲ್ಯೂಟ್
ಹೊಸಪೇಟೆ ರೈಲು ನಿಲ್ದಾಣದಲ್ಲಿ ಪೊಲೀಸ್ (Salam Police) ಸಿಬ್ಬಂದಿಯೊಬ್ಬರು ರೈಲಿನಿಂದ ಬೀಳುವ ಆಪಾಯದಲ್ಲಿದ್ದ ಪ್ರಯಾಣಿಕನನ್ನು ರಕ್ಷಿಸಿದ್ದಾರೆ. ಅದಕ್ಕಿಂತಲೂ ಆ ಪ್ರಯಾಣಿಕ ಹೀಗೇಕೆ ಮಾಡಿದ ಎನ್ನುವುದು ಇಂಟರೆಸ್ಟಿಂಗ್.
ವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ಆಯತಪ್ಪಿ ರೈಲಿನ ಗಾಲಿಗೆ ಸಿಲುಕುವ ಅಪಾಯದಲ್ಲಿದ್ದ ಪ್ರಯಾಣಿಕರೊಬ್ಬರನ್ನು ರೈಲ್ವೇ ಪೊಲೀಸ್ ಕಾನ್‌ಸ್ಟೆಬಲ್ ಸಂತೋಷ್ ರಾಠೋಡ್ ಅವರು ರಕ್ಷಿಸುವ ಮೂಲಕ ಸಾಹಸ ಮೆರೆದಿದ್ದಾರೆ. ಅವರ ಸಮಯಪ್ರಜ್ಞೆ ಮತ್ತು ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ (Salam Police) ವ್ಯಕ್ತವಾಗಿದೆ.
ಈ ಘಟನೆ ನಡೆದಿರುವುದು ಮಾರ್ಚ್ 23ರಂದು ಸಂಜೆ 7.32ಕ್ಕೆ. ಹೊಸಪೇಟೆ ರೈಲು ನಿಲ್ದಾಣದಲ್ಲಿ. ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಪೇದೆ ರೈಲಿನ ಅಡಿಗೆ ಬೀಳುತ್ತಿದ್ದವನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ.
ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ. ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಹೋದರೆ 5 ರೂ. ಕೊಡಬೇಕು. ಅದನ್ನು ಉಳಿಸಲೆಂದು ಪ್ಲ್ಯಾನ್ ಮಾಡಿದ ಆತ ಅದೇ ವೇಳೆಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ!
ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ಹೊರಟಿತ್ತು. ಆಗ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಸ್ವಲ್ಪದರಲ್ಲೇ ಕಾಲು ಜಾರಿ ರೈಲಿನ ಅಡಿಗೆ ಸಿಲುಕುವ ಅಪಾಯ ಎದುರಾಯಿತು. ಅದೇ ವೇಳೆಗೆ ಅಲ್ಲೆ ಇದ್ದ ಪೊಲೀಸ್ ಪೇದೆ ಸಂತೋಷ್ ರಾಠೋಡ್ ಪ್ರಯಾಣಿಕ ಕೈ ಹಿಡಿದು ಮೇಲೆತ್ತಿದ್ದಾರೆ. ಜತೆಗಿದ್ದ ರೈಲ್ವೇ ಪೊಲೀಸ್ ಗುರುರಾಜ್ ಅವರು ಕೂಡ ಕೊನೆಯಲ್ಲಿ ಸಹಕರಿಸಿ ಜೀವ ಉಳಿಸಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ರೈಲ್ವೇ ಇಲಾಖೆ ತನ್ನ ವೆಬ್ಸೈಟ್ ನಲ್ಲಿ ಈ ಕಥೆ ಹೇಳಿ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪ್ರೀತಿಯ ಅಪ್ಪು ಸರ್, ನಿಮ್ಮ ಸಿನಿಮಾ, ಬದುಕು, ನಡವಳಿಕೆಗಳು ಸರ್ವಕಾಲಕ್ಕೂ ಸ್ಫೂರ್ತಿ
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ12 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ13 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್10 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ14 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ14 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!