Site icon Vistara News

Lithium reserves : ರಾಜಸ್ಥಾನದಲ್ಲಿ ಭಾರಿ ಲಿಥಿಯಂ ಪತ್ತೆ ವರದಿಯನ್ನು ನಿರಾಕರಿಸಿದ ಜಿಎಸ್‌ಐ

Lithium reserves GSI denied the report of massive lithium discovery in Rajasthan

ಜೈಪುರ: ರಾಜಸ್ಥಾನದಲ್ಲಿ ಭಾರಿ ಪ್ರಮಾಣದಲ್ಲಿ ಲಿಥಿಯಂ ಪತ್ತೆಯಾಗಿರುವುದರ ಬಗ್ಗೆ ಬಹಿರಂಗವಾಗಿರುವ ವರದಿಗಳನ್ನು ಭಾರತೀಯ ಭೌಗೋಳಿಕ ಸರ್ವೇಕ್ಷಣಾಲಯ (Geological Survey of India-GSI ) ನಿರಾಕರಿಸಿದೆ. ಈ ಕುರಿತ ವರದಿಗಳು ನಿರಾಧಾರವಾಗಿವೆ (baseless) ಹಾಗೂ ದಿಕ್ಕುತಪ್ಪಿಸುವಂಥದ್ದು ಎಂದು ತಿಳಿಸಿದೆ. ರಾಜಸ್ಥಾನದ ನಾಗೌರ್‌ ಜಿಲ್ಲೆಯ ಡೆಗಾನಾ ಎಂಬಲ್ಲಿ ದೇಶದ 80% ಬೇಡಿಕೆಯನ್ನು ಪೂರೈಸಬಲ್ಲ ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿತ್ತು.

ಜಿಎಸ್‌ಐನ ಕೇಂದ್ರೀಯ ಅಥವಾ ಸ್ಥಳೀಯ ಕಚೇರಿ ರಾಜಸ್ಥಾನದಲ್ಲಿ ಭಾರಿ ಲಿಥಿಯಂ ಪತ್ತೆ ಬಗ್ಗೆ ವರದಿ ನೀಡಿಲ್ಲ ಎಂದು ಜಿಎಸ್‌ಐ ತಿಳಿಸಿದೆ. ಜಿಎಸ್‌ಐ ರಾಜಸ್ಥಾನದ ಡೆಗಾನಾ ಪ್ರದೇಶದಲ್ಲಿ 2019-20ರಿಂದೀಚೆಗೆ ಟಂಗ್‌ಸ್ಟನ್‌, ಲಿಥಿಯಂ ಮತ್ತು ಅಪರೂಪದ ಖನಿಜಗಳಿಗೆ ಅನ್ವೇಷಣೆ ನಡೆಸಿತ್ತು. ಈಗಲೂ ಕೆಲಸ ನಡೆಯುತ್ತಿದೆ ಎಂದು ಜಿಎಸ್‌ಐ ತಿಳಿಸಿದೆ.

ಲಿಥಿಯಂ ಏಕೆ ಬೇಕು?: ಎಲೆಕ್ಟ್ರಿಕ್‌ ವಾಹನ ತಯಾರಿ, ಸ್ಮಾರ್ಟ್‌ ಫೋನ್‌, ಲ್ಯಾಪ್‌ ಟಾಪ್‌, ಚಾರ್ಜೆಬಲ್‌ ಬ್ಯಾಟರಿ ಉತ್ಪಾದನೆ ಸೇರಿದಂತೆ ಹಲವು ಇಂಡಸ್ಟ್ರಿಗಳಿಗೆ ನಿರ್ಣಾಯಕವಾಗಿರುವ ಲೋಹ ಇದಾಗಿದೆ.

ಇದನ್ನೂ ಓದಿ: Lithium reserves : ರಾಜಸ್ಥಾನದಲ್ಲಿ ಅತಿ ದೊಡ್ಡ ಲಿಥಿಯಂ ನಿಕ್ಷೇಪ, ಆಟೊಮೊಬೈಲ್‌ ಇಂಡಸ್ಟ್ರಿಗೆ ಬಂಪರ್ ಲಾಭ

ಕೇಂದ್ರ ಸರ್ಕಾರ ಗಣಿಗಳು ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ-1957 ಗೆ ತಿದ್ದುಪಡಿ ತರಲು ಉದ್ದೇಶಿಸಿದೆ. (Mining Act) ಇದರಿಂದ ಭೂಗರ್ಭದ ತಳದಲ್ಲಿರುವ ಚಿನ್ನ, ಬೆಳ್ಳಿ, ತಾಮ್ರ, ಸತು ( Mines and Minerals development and regulation act) ಮೊದಲಾದ ಅಮೂಲ್ಯ ಹಾಗೂ ಅಪರೂಪದ ಲೋಹಗಳ ಶೋಧ ಮತ್ತು ಗಣಿಗಾರಿಕೆಗೆ ಅನುಕೂಲವಾಗಲಿದೆ.

ಕೇಂದ್ರ ಸಚಿವ ಸಂಪುಟ ಸಭೆ ತಿದ್ದುಪಡಿ ವಿಧೇಯಕ ಮಂಡನೆಗೆ ಅನುಮೋದನೆ ನೀಡುವ ನಿರೀಕ್ಷೆ ಇದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಉದ್ದೇಶಿತ ತಿದ್ದುಪಡಿಯ ಪ್ರಕಾರ ಅಪರೂಪದ ಖನಿಜಗಳ ಶೋಧ ಮತ್ತು ಗಣಿಗಾರಿಕೆಗೆ ಲೈಸೆನ್ಸ್‌ ವಿತರಣೆಯಾಗಲಿದೆ. ಇದಕ್ಕಾಗಿ ನಿಕ್ಷೇಪಗಳ ಹರಾಜು ನಡೆಯಲಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಇದು ಸಹಕಾರಿಯಾಗಲಿದೆ. ಉದ್ಯೋಗ ಸೃಷ್ಟಿಸಲಿದೆ. ಇದು 2014ರ ಬಳಿಕ ಗಣಿಗಾರಿಕೆ ಕಾಯಿದೆಯ 5ನೇ ತಿದ್ದುಪಡಿಯಾಗಲಿದೆ.

Exit mobile version