ಭೋಪಾಲ್: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷವಾಗಿದೆ ಎಂದು ಹೆಮ್ಮೆಪಡುತ್ತೇವೆ. ಭಾರತೀಯರು ಚಂದ್ರನ ಅಂಗಳಕ್ಕೆ ಕಾಲಿಟ್ಟಿದ್ದಾರೆ, ದೇಶವೀಗ ಅಭಿವೃದ್ಧಿ ಹೊಂದಿದೆ ಎಂದೆಲ್ಲ ವಾದಿಸುತ್ತೇವೆ. ಆದರೆ, ದೇಶದ ಹಲವೆಡೆ ಬಡವರಿಗೆ ಇನ್ನೂ ಕನಿಷ್ಠ ಮೂಲ ಸೌಕರ್ಯವೂ ಸಿಗುತ್ತಿಲ್ಲ ಎಂಬ ಪರಿಸ್ಥಿತಿಯು ಎಲ್ಲ ಹೆಮ್ಮೆ, ಸಂತಸವನ್ನು ಖುಗ್ಗಿಸುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ಬಾಲಕನೊಬ್ಬ ಆಂಬುಲೆನ್ಸ್ ಸಿಗದೆ ತನ್ನ ತಂದೆಯನ್ನು ತಳ್ಳುವ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಈ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಆರು ವರ್ಷದ ಬಾಲಕನು ಹಣ್ಣು-ತರಕಾರಿ ಮಾರಾಟ ಮಾಡುವ ತಳ್ಳುವ ಗಾಡಿಯಲ್ಲಿ ತಂದೆಯನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾನೆ. ವಿಡಿಯೊ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಹಳ್ಳಿಗಳ ಜನರಿಗೆ ಆಂಬುಲೆನ್ಸ್ ಸೌಲಭ್ಯ ಸಿಗುವುದು ಯಾವಾಗ ಎಂದು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Anand Mahindra: ನಟ ರಾಮ್ ಚರಣ್ ಜತೆ ‘ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆನಂದ್ ಮಹೀಂದ್ರಾ, ವಿಡಿಯೊ ವೈರಲ್