Site icon Vistara News

Ram Mandir : ರಾಮ ಮಂದಿರ ಉದ್ಘಾಟನೆಗೆ ಕೊನೆಗೂ ಆಡ್ವಾಣಿ ಬರುವುದಿಲ್ಲ!

LK Advani

ನವದೆಹಲಿ: ರಾಮ ಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಆಡ್ವಾಣಿ (LK Advani) ಅವರು ತೀವ್ರ ಶೀತ ಹವಾಮಾನದಿಂದಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು ನಡೆಯಲಿರುವ ರಾಮ ಲಲ್ಲಾನ ‘ಪ್ರಾಣ ಪ್ರತಿಷ್ಠಾ’ (Ram Mandir) ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. 96 ವರ್ಷದ ಅಡ್ವಾಣಿಯವರು ಅಯೋಧ್ಯೆಯಲ್ಲಿ ಸದ್ಯ ಇರುವ 8 ಡಿಗ್ರಿ ಸೆಲ್ಸಿಯಸ್​ ತಾಪಮಾನವನ್ನು ತಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಅವರು ಗೈರು ಹಾಜರಾಗಲು ನಿರ್ಧರಿಸಿದ್ದಾರೆ.

ಹಿರಿಯ ವಯಸ್ಸಿನ ಆಡ್ವಾಣಿಯವರು ರಾಮ ಮಂದಿಕ್ಕೆ ಬರುವುದು ಬೇಡ ಎಂದು ರಾಮ ಮಂದಿರ ಟ್ರಸ್ಟ್​​ ಆರಂಭದಲ್ಲೇ ಸಲಹೆ ನೀಡಿತ್ತು. ಆದರೆ, ಆ ವೇಳೆ ವಿವಾದಕ್ಕೆ ಕಾರಣವಾಗಿತ್ತು. ರಾಮ ಮಂದಿರ ನಿರ್ಮಾಣ ಆಂದೋಲನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅಡ್ವಾಣಿಯವರನನ್ನೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಬಳಿಕ ಅವರು ಬರುವುದಾಗಿ ಹೇಳಲಾಯಿತು. ಆದರೆ, ಅಯೋಧ್ಯೆಯ ಚಳಿಯನ್ನು ತಡೆದುಕೊಳ್ಳುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರು ಅಲ್ಲಿಗೆ ಬರದಿರಲು ನಿರ್ಧರಿಸಿದ್ದಾರೆ.

ಪ್ರಾಣ ಪ್ರತಿಷ್ಠೆ ಎಂದರೇನು? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ಅಯೋಧ್ಯೆ: ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಂದು (ಜನವರಿ 22) ರಾಮ ಮಂದಿರ (Ayodhya Ram Mandir) ಉದ್ಘಾಟನೆಯಾಗಲಿದೆ. ಈ ‘ಪ್ರಾಣ ಪ್ರತಿಷ್ಠಾ’ (Pran Pratistha-ಪ್ರತಿಷ್ಠಾಪನಾ ಸಮಾರಂಭ) ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಈ ಪ್ರತಿಷ್ಠಾಪನಾ ಸಮಾರಂಭದ ನಂತರ ರಾಮ್ ಲಲ್ಲಾ (Lord Ram Lalla) ವಿಗ್ರಹವನ್ನು ರಾಮ ದೇವಾಲಯದಲ್ಲಿ ಸ್ಥಾಪಿಸಲಾಗುತ್ತದೆ. ಹಾಗಾದರೆ ಪ್ರಾಣ ಪ್ರತಿಷ್ಠಾ ಎಂದರೇನು? ಇದರಲ್ಲಿನ ಆಚರಣೆಗಳು ಯಾವುವು? ಎನ್ನುವುದರ ವಿವರ ಇಲ್ಲಿದೆ.

ಪ್ರಾಣ ಪ್ರತಿಷ್ಠಾ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

ಇದನ್ನೂ ಓದಿ : Ayodhya Ram Mandir: ಅಯೋಧ್ಯೆಯ ಜತೆಗೆ ಒಡಿಶಾದ ಈ ರಾಮ ದೇಗುಲವೂ ಇಂದೇ ಉದ್ಘಾಟನೆ

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಆಚರಣೆ ಹೇಗೆ?

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯು ವಿಗ್ರಹವನ್ನು ದೇವಾಲಯಕ್ಕೆ ಸಾಂಪ್ರದಾಯಿಕವಾಗಿ ತರುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ವಿಗ್ರಹಕ್ಕೆ ಹಾಲಿನಿಂದ ಸ್ನಾನ ಮಾಡಿಸಲಾಗುತ್ತದೆ. ಜತೆಗೆ ಸುಗಂಧ ದ್ರವ್ಯಗಳನ್ನು ಹಚ್ಚುವ ಮೂಲಕ ವಿಗ್ರಹವನ್ನು ಜೀವಂತಗೊಳಿಸಲಾಗುತ್ತದೆ. ಬಳಿಕ ಗರ್ಭಗುಡಿಯಲ್ಲಿ ವಿಗ್ರಹವನ್ನು ಇರಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ವಿಗ್ರಹವನ್ನು ಪ್ರಧಾನ ಅರ್ಚಕರು ಅಲಂಕರಿಸಿ ಸರಿಯಾದ ಸ್ಥಳದಲ್ಲಿ ಸ್ಥಾಪಿಸುತ್ತಾರೆ. ನಂತರ ಪುರೋಹಿತರು ಸ್ತೋತ್ರಗಳು ಮತ್ತು ಮಂತ್ರಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಮೊದಲಿಗೆ ವಿಗ್ರಹದ ಕಣ್ಣುಗಳನ್ನು ತೆರೆಯಲಾಗುತ್ತದೆ. ಈ ಪ್ರಕ್ರಿಯೆ ನಂತರ ವಿಗ್ರಹವನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸಲಾಗುತ್ತದೆ. ಈ ಎಲ್ಲ ಆಚರಣೆಗಳು ವಿಗ್ರಹಕ್ಕೆ ಜೀವ ತುಂಬುತ್ತವೆ ಎನ್ನುವ ನಂಬಿಕೆ ಇದೆ.

Exit mobile version