ಬೆಂಗಳೂರು, ಕರ್ನಾಟಕ: ಭಾರತೀಯ ಕುಶಲಕರ್ಮಿಗಳು ಮತ್ತು ನೇಕಾರರು ತಮ್ಮ ಸಾಂಪ್ರದಾಯಿಕ ಕಲೆ ಮತ್ತು ಜೀವನೋಪಾಯವನ್ನು ಕಾಪಾಡಿಕೊಳ್ಳಲು ಭಾರೀ ಹೋರಾಟವನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ತಾವು ಉತ್ಪಾದಿಸಿದ ವಸ್ತುಗಳ ಮಾರಾಟದಲ್ಲಿ ಭಾರೀ ಏರಿಕೆ ಕಾಣುತ್ತಿರುವುದಕ್ಕೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ (Online platforms) ಋಣಿಯಾಗಿದ್ದಾರೆ. ಉದಾಹರಣೆಗೆ, ನಶಿಸುತ್ತಿರುವ ಕರಕುಶಲ ಕಲೆಯನ್ನು ಜೀವಂತವಾಗಿ ಇರಿಸಲು ಡಿಜಿಟಲ್‌ನ ಶಕ್ತಿಯನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ ಸ್ಥಳೀಯ ಮಾರಾಟಗಾರ ಅದಿಲ್. ಶತಮಾನದ-ಹಳೆಯ ಅವರ ಕುಟುಂಬ-ನಿಯಂತ್ರಿತ ವ್ಯಾಪಾರ ಚನ್ನಪಟ್ಟಣ ಆಟಿಕೆಗಳು ಹಲವಾರು ಸ್ಥಳೀಯ ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರುತ್ತವೆ.
“ನನ್ನೊಂದಿಗೆ ಸುಮಾರು 35 ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಕೆಲವರು 40 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದರೆ, ಇನ್ನೂ ಕೆಲವರು 60 ವರ್ಷ ವಯಸ್ಸಿನವರಾಗಿದ್ದಾರೆ,’ ಎಂದು ಅವರು ಹೇಳುತ್ತಾರೆ.
“ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಈ ಕುಶಲಕರ್ಮಿಗಳಿಗೆ ಜೀವನೋಪಾಯದ ಪ್ರಮುಖ ಮೂಲವಾಗಿವೆ. ಈ ಸೌಲಭ್ಯಗಳು ನನ್ನ ತಂದೆ ಮತ್ತು ತಾತನಿಗೆ ಇರಲಿಲ್ಲ. ಆದರೆ ಇಂದು ನಾನು ಕಡಿಮೆ ಹೂಡಿಕೆಯೊಂದಿಗೆ ಖರೀದಿದಾರರ ಜತೆಗೆ ತೊಡಗಿಸಿಕೊಳ್ಳಲು ಮತ್ತು ದೊಡ್ಡ ಪರಿಣಾಮ ರೂಪಿಸಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಶಕ್ತಿಯನ್ನು ಬಳಸಿಕೊಳ್ಳಬಹುದು. ನಮ್ಮ ಭವ್ಯವಾದ ಕರಕುಶಲ ಪರಂಪರೆ ಸಂರಕ್ಷಿಸುವ ಜೊತೆಗೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಈ ವಿಶಿಷ್ಟ ಚನ್ನಪಟ್ಟಣದ ಆಟಿಕೆಗಳನ್ನು ಭಾರತದಿಂದ ಜಗತ್ತಿಗೆ ಲಭ್ಯವಾಗುವಂತೆ ಮಾಡಲು ನಾನು ಬಯಸುತ್ತೇನೆ,” ಎಂದು ಅವರು ಹೇಳುತ್ತಾರೆ.
ಆಂಧ್ರಪ್ರದೇಶ ಮೂಲದ ಆದಿಲಕ್ಷ್ಮಿ ಟಾಯ್ಸ್‌ನ ಮಾಲೀಕ ಅಡವಿ ಶ್ರೀನಿವಾಸ್ ಅವರಿಗೆ ತಮ್ಮ ಉದ್ಯಮಶೀಲತೆಯ ಕನಸನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಮತ್ತು ಜಿಯೋಮಾರ್ಟ್ ಸೇರಿದಂತೆ ಹೊಸ ವಿತರಣೆ ಚಾನೆಲ್‌ಗಳತ್ತ ಮುಖ ಮಾಡಿದ್ದಾರೆ. ಜಿಯೋಮಾರ್ಟ್‌ನ ಕ್ರಾಫ್ಟ್ಸ್ ಮೇಳಗಳಂತಹ ಆನ್‌ಲೈನ್ ಮಳಿಗೆಗಳಿಂದ ಕುಶಲಕರ್ಮಿಗಳು ಮತ್ತು ಶ್ರೀನಿವಾಸ್ ಅವರಂಥ ಉದ್ಯಮಿಗಳಿಗೆ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ದೇಶಾದ್ಯಂತದ ಹೊಸ ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತವೆ.
ಅದೇ ರೀತಿ, ತಮಿಳುನಾಡು ರಾಜ್ಯದ ಈರೋಡ್‌ನ ಲಾವಣ್ಯಾ ಅವರು ಹೊಸ ಗ್ರಾಹಕರನ್ನು ಹುಡುಕಲು ಮತ್ತು ಕಾರ್ಯಾಚರಣೆಯನ್ನು ಹೆಚ್ಚಿಸಲು ದರ್ಭಾಯಿ ಮತ್ತು ಸಾಂಬು ನದಿ ಹುಲ್ಲಿನಿಂದ ನೇಯ್ದ ಯೋಗ ಮತ್ತು ಧ್ಯಾನ ಮ್ಯಾಟ್‌ಗಳನ್ನು ಮಾರಾಟ ಮಾಡುವ 100 ವರ್ಷಗಳ ಹಳೆಯ ಮತ್ತು ಸ್ಪಾರ್ಟಾನ್ ಕುಟುಂಬ ನಡೆಸುವ ಅಂಗಡಿಯನ್ನು ಆನ್‌ಲೈನ್‌ನಲ್ಲಿ ತಂದಿದ್ದಾರೆ.
“ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ನನ್ನ ಹಳ್ಳಿಯ ಜನರು ಇತರ ನಗರಗಳಿಂದ ಮರಳಿದರು,” ಎಂದು 17 ವರ್ಷಗಳ ಕೆಲಸದ ಅನುಭವ ಹೊಂದಿರುವ ಸಾಫ್ಟ್‌ವೇರ್ ಇಂಜಿನಿಯರ್ ಲಾವಣ್ಯಾ ಹೇಳುತ್ತಾರೆ. ಅವರ ಮೂರನೇ ತಲೆಮಾರಿನ ವ್ಯವಹಾರವನ್ನು ಮುಂದುವರಿಸಲು ತಮ್ಮ ಒಂಬತ್ತರಿಂದ ಐದು ಗಂಟೆ ತನಕ ಮಾಡುವ ಕೆಲಸವನ್ನು ತೊರೆದಿದ್ದಾರೆ. “ಪುರುಷ ಮತ್ತು ಸ್ತ್ರೀ ಕುಶಲಕರ್ಮಿಗಳಿಗೆ ಕೈಮಗ್ಗದ ಟವೆಲ್ ಮತ್ತು ಯೋಗ ಹಾಗೂ ಧ್ಯಾನ ಮ್ಯಾಟ್‌ಗಳನ್ನು ನೇಯಲು ತರಬೇತಿ ನೀಡುವುದಕ್ಕೆ ನಾನು ನಿರ್ಧರಿಸಿದೆ. ಅವರ ಜೀವನೋಪಾಯವು ಇದರ ಮೇಲೆ ಅವಲಂಬಿತವಾಗಿದೆ,” ಎಂದು ಹೇಳುತ್ತಾರೆ.
ಪ್ರಬಲವಾದ ವ್ಯಾಪಾರವನ್ನು ರೂಪಿಸುವುದಕ್ಕೆ ತನ್ನ ಹಳ್ಳಿಯಲ್ಲಿ ನೇಕಾರರ ಜೀವನೋಪಾಯವನ್ನು ಬೆಂಬಲಿಸಲು ಮತ್ತು ತನ್ನ ಸಮುದಾಯದ ಇತರ ಮಹಿಳೆಯರಿಗೆ ಮಾದರಿಯಾಗಿ, ಲಾವಣ್ಯಾ ತನ್ನದೇ ಆದ ವೆಬ್‌ಸೈಟ್ ಅನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಶುರು ಮಾಡಿದರು.
“ನಾನು ಜಿಯೋಮಾರ್ಟ್‌ನಂತಹ ಆನ್‌ಲೈನ್ ಮಾರ್ಕೆಟ್ ಪ್ಲೇಸ್ ಗಳಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದೇನೆ, ಅಲ್ಲಿ ಇತ್ತೀಚೆಗೆ ನನ್ನ ಉತ್ಪನ್ನಗಳನ್ನು ಲಿಸ್ಟ್ ಮಾಡಿದ್ದೇನೆ ಮತ್ತು ಆರ್ಡರ್‌ಗಳನ್ನು ಪಡೆಯಲು ಪ್ರಾರಂಭಿಸಿದ್ದೇನೆ,” ಎಂದು ಅವರು ಹೇಳುತ್ತಾರೆ.
2019 ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ಆದಿಲಕ್ಷ್ಮಿ ಟಾಯ್ಸ್ ಪ್ರಾರಂಭಿಸಲು 18 ವರ್ಷಗಳ ಕೆಲಸವನ್ನು ತೊರೆದ ಇನ್ನೊಬ್ಬ ಮಾರಾಟಗಾರ ಶ್ರೀನಿವಾಸ್ ಕೂಡ ಡಿಜಿಟಲ್ ವಿತರಣಾ ಚಾನೆಲ್‌ಗಳನ್ನು ಅನುಸರಿಸುವ ಮೂಲಕ ಫೇಸ್‌ಬುಕ್ ಜಾಹೀರಾತುಗಳತ್ತ ಹೊರಳಿದರು ಮತ್ತು ದೃಢವಾದ ಸಾಮಾಜಿಕ ಮಾಧ್ಯಮ ಉಪಸ್ಥಿತಿಯನ್ನು ರೂಪಿಸುವ ಮೂಲಕ ಹೆಚ್ಚಿನ ಮಾರಾಟವನ್ನು ಮಾಡುತ್ತಿದ್ದಾರೆ.
“ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಡಿಜಿಟಲೈಸೇಷನ್ ಬಗ್ಗೆ ಸ್ವಲ್ಪವೇ ತಿಳಿದಿದೆ. ಅವರ ಕಲೆಯನ್ನು ಮುನ್ನೆಲೆಗೆ ತರುವುದು ಮತ್ತು ಅವರನ್ನು ಬೆಂಬಲಿಸುವುದು ಬಹಳ ಮುಖ್ಯ. ವಿಷಕಾರಿಯಲ್ಲದ, ಬಾಳಿಕೆ ಬರುವ ಮತ್ತು ಸುಸ್ಥಿರವಾಗಿರುವ ಮರದ ಆಟಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ,” ಎಂದು ಜಿಯೋಮಾರ್ಟ್‌ನ ಮಾರಾಟಗಾರ ಶ್ರೀನಿವಾಸ್ ಹೇಳುತ್ತಾರೆ.
ಇದನ್ನೂ ಓದಿ: JioMart layoffs : ಜಿಯೊ ಮಾರ್ಟ್‌ನಲ್ಲಿ 1,000 ಉದ್ಯೋಗಿಗಳ ವಜಾ, ಕಾರಣವೇನು?
ಹಲವಾರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಹೆಚ್ಚುತ್ತಿರುವ ಆರ್ಡರ್‌ಗಳನ್ನು ಪಡೆಯುವುದರ ಹೊರತಾಗಿ, ಅವರು ಸದ್ಯಕ್ಕೆ ಆಟಿಕೆಗಳನ್ನು ರಫ್ತು ಮಾಡುತ್ತಿದ್ದಾರೆ. ಇನ್ನೂ ಕುತೂಹಲಕಾರಿ ಅಂಶ ಏನೆಂದರೆ, ಅವರ ಗ್ರಾಹಕರಲ್ಲಿ ಹೆಚ್ಚಿನವರು 40ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.