Site icon Vistara News

TMC Candidates List: ಮಹುವಾ ಸೇರಿ 42 ಮಂದಿಗೆ ಟಿಎಂಸಿ ಟಿಕೆಟ್;‌ ‘ಕೈ’ ಜತೆ ಮೈತ್ರಿಗೆ ‘ಬೈ’

Mamata Banerjee And Mahua Moitra

Lok Sabha Election 2024: TMC announces candidates for all 42 seats in Bengal; Mahua Moitra from Krishnanagar

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ಹಾಗೂ ಟಿಎಂಸಿ ಮೈತ್ರಿ ಕುರಿತು ಇದುವರೆಗೆ ಕೇಳಿಬರುತ್ತಿದ್ದ ಎಲ್ಲ ವದಂತಿಗಳಿಗೆ ಮಮತಾ ಬ್ಯಾನರ್ಜಿ ಅವರು ತೆರೆ ಎಳೆದಿದ್ದಾರೆ. ಪಶ್ಚಿಮ ಬಂಗಾಳದ (West Bengal) ಎಲ್ಲ 42 ಕ್ಷೇತ್ರಗಳಿಗೆ ಟಿಎಂಸಿಯು ಅಭ್ಯರ್ಥಿಗಳನ್ನು ಘೋಷಿಸಿದೆ. ಆ ಮೂಲಕ ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ (India Bloc) ಯಾವುದೇ ಪಕ್ಷದ ಜತೆ ಹೆಜ್ಜೆ ಹಾಕದೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಸ್ವತಂತ್ರವಾಗಿ ಸ್ಪರ್ಧಿಸಲು ಟಿಎಂಸಿ ಮುಂದಾಗಿದೆ. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರು 42 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಮಹುವಾ ಮೊಯಿತ್ರಾ, ಯೂಸುಫ್‌ ಪಠಾಣ್‌ಗೆ ಟಿಕೆಟ್‌

ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದಲ್ಲಿ ಸಿಲುಕಿರುವ ಸಂಸದೆ ಮಹುವಾ ಮೊಯಿತ್ರಾ, ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಅವರಿಗೆ ಟಿಎಂಸಿ ಟಿಕೆಟ್‌ ನೀಡಿದೆ. ಅದರಲ್ಲೂ, ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರ ಕ್ಷೇತ್ರವಾದ ಬಹರಾಮ್‌ಪುರ ಲೋಕಸಭೆ ಕ್ಷೇತ್ರದಲ್ಲಿ ಯೂಸುಫ್‌ ಪಠಾಣ್‌ ಅವರಿಗೆ ಟಿಎಂಸಿ ಟಿಕೆಟ್‌ ನೀಡಿದ್ದು, ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಇನ್ನು ಮಹುವಾ ಮೊಯಿತ್ರಾ ಅವರಿಗೆ ಕೃಷ್ಣನಗರದಿಂದ ಟಿಕೆಟ್‌ ನೀಡಲಾಗಿದೆ.

ಇದನ್ನೂ ಓದಿ: Brijendra Singh: ‘ಒಂದೇ’ ಕಾರಣ ನೀಡಿ ಪಕ್ಷ ತೊರೆದು ಕಾಂಗ್ರೆಸ್‌ ಸೇರಿದ ಬಿಜೆಪಿ ಸಂಸದ! ಏನದು?

ಪ್ರಧಾನಿ ನರೇಂದ್ರ ಮೋದಿ ಮತ್ತು ಅದಾನಿ ಗ್ರೂಪ್ಅನ್ನು ಗುರಿಯಾಗಿಸಿಕೊಂಡು ಪ್ರಶ್ನೆ ಕೇಳಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಲಂಚ ಸ್ವೀಕರಿಸಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆರೋಪ ಪ್ರಕರಣಕ್ಕೆ ದೇಶಾದ್ಯಂತ ಸುದ್ದಿಯಾಗಿತ್ತು. ಅಲ್ಲದೆ, ಮಹುವಾ ಮೊಯಿತ್ರಾ ಅವರು ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಂಸತ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದು ನಿಜ ಎಂದು ಇಂಡಿಯಾ ಟುಡೇ ಜತೆ ಮಾತನಾಡುವಾಗ ಒಪ್ಪಿಕೊಂಡಿದ್ದರು. ಅವರ ವಿರುದ್ಧ ಈಗಲೂ ತನಿಖೆಯಾಗುತ್ತಿದೆ. ಇದೇ ಕಾರಣಕ್ಕಾಗಿ ಮಹುವಾ ಮೊಯಿತ್ರಾ ಅವರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಹೇಳಲಾಗುತ್ತಿತ್ತು.

“ಉದ್ಯಮಿ ದರ್ಶನ್‌ ಹಿರಾನಂದನಿ ಅವರಿಗೆ ಸಂಸತ್‌ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದು ನಿಜ. ಆದರೆ, ಹಣ ಪಡೆದು ಪ್ರಶ್ನೆ ಕೇಳುವ ದಿಸೆಯಲ್ಲಿ ಐಡಿ, ಪಾಸ್‌ವರ್ಡ್‌ ಕೊಟ್ಟಿಲ್ಲ. ಸಂಸತ್ತಿನಲ್ಲಿ ನಾನು ಕೇಳುವ ಪ್ರಶ್ನೆಗಳನ್ನು ಟೈಪ್‌ ಮಾಡಲು ಅವರಿಗೆ ಐಡಿ ಹಾಗೂ ಪಾಸ್‌ವರ್ಡ್‌ ಕೊಟ್ಟಿದ್ದೇನೆ. ನಾನು ಸಂಸತ್‌ ವೆಬ್‌ಸೈಟ್‌ಗೆ ಕೊಡುವ ಪ್ರಶ್ನೆಗಳನ್ನು ಹಿರಾನಂದನಿ ಕಚೇರಿಯಲ್ಲಿರುವವರು ಟೈಪ್‌ ಮಾಡಿದ್ದಾರೆ. ಇದಕ್ಕಾಗಿ ನಾನು ಐಡಿ, ಪಾಸ್‌ವರ್ಡ್‌ ಕೊಟ್ಟಿದ್ದೇನೆಯೇ ಹೊರತು ಹಣಕ್ಕಾಗಿ ಅಲ್ಲ” ಎಂದಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version