Site icon Vistara News

Lok Sabha Election : ಬಿಜೆಪಿ 305 ಸೀಟ್ ಗೆಲ್ಲೋದು ಗ್ಯಾರಂಟಿ; ಅಮೆರಿಕದ ರಾಜಕೀಯ ಪಂಡಿತನ ಭವಿಷ್ಯ

lok sabha election

ನವದೆಹಲಿ: 2024 ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಬಿಜೆಪಿ 305 ಸ್ಥಾನಗಳನ್ನು (ಹೆಚ್ಚು ಕಡಿಮೆ) ಗೆಲ್ಲಲಿದೆ ಎಂದು ಅಮೆರಿಕದ ರಾಜಕೀಯ ಪಂಡಿತ ಇಯಾನ್ ಬ್ರೆಮ್ಮರ್ ಮಂಗಳವಾರ ಭವಿಷ್ಯ ನುಡಿದಿದ್ದಾರೆ. ಎನ್​ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆ ಕುರಿತು ಮಾತನಾಡುತ್ತಾ ಬಿಜೆಪಿಗೆ ಮತ್ತೆ ಬಹುಮತ ಖಾತರಿ ಎಂದು ಹೇಳಿದ್ದಾರೆ. ಸಂಶೋಧನಾ ಸಲಹಾ ಸಂಸ್ಥೆಯಾದ ಯುರೇಷಿಯಾ ಗ್ರೂಪ್ನ ಸ್ಥಾಪಕರಾಗಿರುವ ಬ್ರೆಮ್ಮರ್, ಜಾಗತಿಕ ರಾಜಕೀಯ ದೃಷ್ಟಿಕೋನದಿಂದ ಭಾರತೀಯ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಸ್ಥಿರವಾಗಿದೆ. ನವೆಂಬರ್ ನಲ್ಲಿ ನಡೆಯಲಿರುವ ಅಮೆರಿಕದ ಚುನಾವಣೆಗಿಂತಲೂ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕವಾಗಿ ಅಗಾಧ ಪ್ರಮಾಣದ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ. ಜಾಗತೀಕರಣದ ಭವಿಷ್ಯವು ಕಂಪನಿಗಳು ಬಯಸಿದ ರೀತಿಯಲ್ಲಿ ಹೋಗುತ್ತಿಲ್ಲ. ರಾಜಕೀಯವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಮೂಗು ತೂರಿಸುತ್ತಿದೆ. ಯುದ್ಧಗಳು, ಯುಎಸ್-ಚೀನಾ ಸಂಬಂಧಗಳು ಮತ್ತು ಯುಎಸ್ ಚುನಾವಣೆ ಎಲ್ಲವೂ ಅದರ ದೊಡ್ಡ ಭಾಗವಾಗಿದೆ. ಎಲ್ಲವನ್ನೂ ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಮತ್ತು ಹೆಚ್ಚು ನಕಾರಾತ್ಮಕವಾಗಿವೆ. ಜಗತ್ತಿನಲ್ಲಿ ರಾಜಕೀಯವಾಗಿ ಸ್ಥಿರವಾಗಿ ಕಾಣುವ ಏಕೈಕ ವಿಷಯವೆಂದರೆ ಭಾರತದ ಚುನಾವಣೆ. ಉಳಿದೆಲ್ಲವೂ ಸಮಸ್ಯಾತ್ಮಕ ಕಾಣುತ್ತದೆ ಎಂದು ಬ್ರೆಮ್ಮರ್​ ಹೇಳಿದ್ದಾರೆ.

ಏಪ್ರಿಲ್ 19 ರಂದು ಪ್ರಾರಂಭವಾದ ಏಳು ಹಂತಗಳಲ್ಲಿ ಭಾರತೀಯ ಚುನಾವಣೆಯ ಬಗ್ಗೆ ಅವರ ಭವಿಷ್ಯವಾಣಿಯ ಬಗ್ಗೆ ಕೇಳಿದಾಗ, ಯುರೇಷಿಯಾ ಗ್ರೂಪ್ ಸಂಶೋಧನೆಯ ಪ್ರಕಾರ ಬಿಜೆಪಿ 295ರಿಂದ 315 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014 ರ ಚುನಾವಣೆಯಲ್ಲಿ 282 ಸ್ಥಾನಗಳೊಂದಿಗೆ (ಅದರ ಎನ್ಡಿಎ ಪಾಲುದಾರರೊಂದಿಗೆ ಸೇರಿಕೊಂಟ್ಟು ಒಟ್ಟು 336 ಸ್ಥಾನ ) ಮತ್ತು 2019 ರಲ್ಲಿ 303 (ಎನ್​ಡಿ ಮಿತ್ರಪಕ್ಷಗಳೊಂದಿಗೆ 353) ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ ಈ ಬಾರಿ ಹ್ಯಾಟ್ರಿಕ್ ಸಾಧನೆ ಮಾಡುವ ನಿರೀಕ್ಷೆಯಿದೆ.

ಭಾರತದಲ್ಲಿ ರಾಜಕೀಯ ಅನಿಶ್ಚಿತತೆ ಇಲ್ಲ

ವಿಶ್ವದ ಎಲ್ಲಾ ಚುನಾವಣೆಗಳಲ್ಲಿ (ಯುರೋಪಿಯನ್ ಒಕ್ಕೂಟದ ಚುನಾವಣೆಗಳು ಮತ್ತು ಬಹುಶಃ, ಯುನೈಟೆಡ್ ಕಿಂಗ್ಡಮ್​ನ ರಾಷ್ಟ್ರೀಯ ಚುನಾವಣೆ ಸೇರಿದಂತೆ) ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತವು ಸುಗಮ ಚುನಾಣೆಯನ್ನು ಹೊಂದಿದೆ. ಭಾರತೀಯ ರಾಜಕೀಯ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅನಿಶ್ಚಿತತೆ ಇಲ್ಲ” ಎಂದು ಇಯಾನ್ ಬ್ರೆಮ್ಮರ್​ ಹೇಳಿದರು.

ಇದನ್ನೂ ಓದಿ: Other Backward Classes: 2011ರ ನಂತರ ನೀಡಿದ್ದ ಒಬಿಸಿ ಪ್ರಮಾಣಪತ್ರಗಳನ್ನು ರದ್ದು ಮಾಡಿದ ಕೋಲ್ಕೊತಾ ಹೈಕೋರ್ಟ್​​

ಬ್ರೆಮ್ಮರ್ ಅವರು “ಮುಕ್ತ ಮತ್ತು ನ್ಯಾಯಸಮ್ಮತ ಮತ್ತು ಪಾರದರ್ಶಕ” ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಿದರು. “ಬಲವಾದ ಆರ್ಥಿಕ ಕಾರ್ಯಕ್ಷಮತೆ ಮತ್ತು ಸ್ಥಿರ ಸುಧಾರಣೆಯ ಹಿನ್ನೆಲೆಯಲ್ಲಿ ಮೋದಿ ಮೂರನೇ ಅವಧಿಗೆ ಗೆಲ್ಲುವುದು ಬಹುತೇಕ ಖಚಿತ ಎಂದು ಅವರು ಹೇಳಿದರು.

ಭಾರತದ ಆರ್ಥಿಕ ಭವಿಷ್ಯದ ಬಗ್ಗೆ ಮಾತನಾಡಿದ ಬ್ರೆಮ್ಮರ್, “ಭಾರತವು ದಶಕಗಳಿಂದ ಕಳಪೆ ಸಾಧನೆ ಮಾಡಿರುವುದನ್ನು ಜಗತ್ತು ನೋಡಿದೆ. ಭಾರತವು ನಂಬಲಾಗದ ಮಾನವ ಸಂಪನ್ಮೂಲ ಮತ್ತು ಬಲವಾದ ಬೌದ್ಧಿಕ ಬಂಡವಾಳ ಹೊಂದಿದೆ. ಅಮೆರಿಕದ ಅನೇಕ ಸಿಇಒಗಳು ಭಾರತದಿಂದ ಬರುತ್ತಾರೆ. ಆದರೂ ಭಾರತವು ಆರ್ಥಿಕತೆಯಾಗಿ ಕಳಪೆ ಸಾಧನೆ ಮಾಡಿದೆ ಎಂಬುದಾಗಿ ವಿಶ್ಲೇಷಣೆ ಮಾಡಿದರು.

ಈಗ ನಾವು ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಭಾರತವು ಮುಂದಿನ ವರ್ಷ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಬಹುಶಃ 2028 ರ ವೇಳೆಗೆ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ನಾವು ನಂಬಿದ್ದೇವೆ. ಆದರೆ ವಿಶ್ವದ ಇತರ ಭಾಗಗಳೊಂದಿಗಿನ ಸ್ನೇಹವನ್ನು ವ್ಯಾಖ್ಯಾನಿಸುವ ವಿಷಯದಲ್ಲಿ ಭಾರತವು ಹೆಚ್ಚು ಶಕ್ತಿಶಾಲಿಯಾಗುತ್ತಿರುವುದನ್ನು ನಾವು ನೋಡುತ್ತೇವೆ ಎಂದು ಅವರು ಹೇಳಿದರು.

Exit mobile version