Site icon Vistara News

Lok Sabha Election: ಏ.19ರವರೆಗೆ ಲೋಕಸಭೆ ಚುನಾವಣೆ; ಮೇ 22ಕ್ಕೆ ರಿಸಲ್ಟ್?

Lok Sabha Election on April 19 and Result on May 22

ನವದೆಹಲಿ: ಲೋಕಸಭೆ ಚುನಾವಣಾ (Lok Sabha Election) ವೇಳಾ ಪಟ್ಟಿ ಕುರಿತು ಎಲ್ಲರಲ್ಲೂ ಕುತೂಹಲವಿದೆ(Election Schedule). ಯಾವಾಗ ದಿನಾಂಕ ಪ್ರಕಟವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ, ಏಪ್ರಿಲ್ 19ರಂದು ಚುನಾವಣೆ ನಡೆದು, ಮೇ 22ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ವಾಟ್ಸಾಪ್‌ ಮೆಸೇಜ್‌ವೊಂದು ಭಾರೀ ವೈರಲ್ ಆಗಿದೆ(WhatsApp Message Viral). ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗವು(Election Commission of India), ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆಯೇ ಹೊರತು, ಪಠ್ಯ ಅಥವಾ ವಾಟ್ಸಾಪ್ ಮೆಸೇಜ್ ಮೂಲಕ ಅಲ್ಲ. ಹಾಗಾಗಿ ಇದೊಂದು ಫೇಕ್ ನ್ಯೂಸ್ (Fake News) ಎಂದು ಕೇಂದ್ರ ಚುನಾವಣಾ ಆಯೋಗವು ಸ್ಪಷ್ಟಪಡಿಸಿದೆ.

ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ವೇಳಾಪಟ್ಟಿಯ ನಕಲಿ ಸಂದೇಶವೊಂದು ಹರಿದಾಡುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಗೆ ತರುವ ಮೂಲಕ ಮಾರ್ಚ್ 12 ರಂದು ಚುನಾವಣೆಯನ್ನು ಅಧಿಸೂಚಿಸಲಾಗುವುದು ಎಂದು ಅದರಲ್ಲಿ ತಿಳಿಸಲಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕ ಮತ್ತು ಏಪ್ರಿಲ್ 19 ಮತದಾನ ಮತ್ತು ಮೇ 22ರಂದು ಫಲಿತಾಂಶ ನಡೆಯಲಿದೆ ಎಂದು ನಕಲಿ ಸುದ್ದಿಯಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗದ ಲೆಟರ್‌ಹೆಡ್‌‌ನಲ್ಲಿ ನಕಲಿ ಸಂದೇಶವು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹರಿದಾಡಲು ಪ್ರಾರಂಭಿಸಿತು. ಸಾರ್ವತ್ರಿಕ ಚುನಾವಣೆಯನ್ನು ಒಂದೇ ಹಂತದಲ್ಲಿ ನಡೆಸುವುದು ಹೇಗೆ ಎಂಬ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.

ಈ ಗೊಂದಲದ ನಡುವೆಯೇ ನಿನ್ನೆ ಚುನಾವಣಾ ಆಯೋಗ ವೈರಲ್ ಸಂದೇಶ ನಕಲಿ ಎಂದು ಸ್ಪಷ್ಟಪಡಿಸಿದೆ. ಲೋಕಸಭಾ ಚುನಾವಣೆಯ ವೇಳಾಪಟ್ಟಿಯ ಕುರಿತು ವಾಟ್ಸಾಪ್‌ ಅಪ್ಲಿಕೇಶನ್‌ನಲ್ಲಿ ನಕಲಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. ಈ ಸಂದೇಶವು ನಕಲಿಯಾಗಿದೆ. ಆಯೋಗವು ಇಲ್ಲಿಯವರೆಗೆ ಯಾವುದೇ ದಿನಾಂಕಗಳನ್ನು ಘೋಷಿಸಿಲ್ಲ ಎಂದು ಎಕ್ಸ್ ವೇದಿಕೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಪೋಸ್ಟ್ ಮಾಡಿದೆ.

ಎಲೆಕ್ಷನ್ ವೇಳಾಪಟ್ಟಿಯನ್ನು ಆಯೋಗವು ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡುತ್ತದೆ. #VerifyBeforeYouAmplify ಎಂಬ ಹ್ಯಾಷ್ ಟ್ಯಾಗ್ ಬಳಸಿರುವ ಆಯೋಗವು, ವಾಟ್ಸಾಪ್ ಸಂದೇಶಗಳನ್ನು ಫಾರ್ವರ್ಡ್ ಮಾಡುವಾಗ ದೃಢೀಕರಿಸಬೇಕು ಎಂದು ಹೇಳಿದೆ.

ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿಯಿಂದ ಪ್ರಸಾರವಾದ ಆಂತರಿಕ ಟಿಪ್ಪಣಿ ಗೊಂದಲಕ್ಕೆ ಕಾರಣವಾದ ಒಂದು ತಿಂಗಳ ಬಳಿಕ ಈ ನಕಲಿ ಸಂದೇಶವೂ ವೈರಲ್ ಆಗಿದೆ. ಈ ಆಂತರಿಕ ಟಿಪ್ಪಣಿಯಲ್ಲಿ ಏಪ್ರಿಲ್ 16 ಅನ್ನು ತಾತ್ಕಾಲಿಕ “ಚುನಾವಣೆ ದಿನಾಂಕ” ಎಂದು ಉಲ್ಲೇಖಿಸಲಾಗಿದ್ದು ಮತ್ತು ಅಧಿಕಾರಿಗಳಿಗೆ ಸಿದ್ಧತೆಗಳನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿತ್ತು.

ಈ ಸುದ್ದಿಯನ್ನೂ ಓದಿ: Lok Sabha Election: ಈ ದಿನಾಂಕದಂದು ಲೋಕಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

Exit mobile version