Site icon Vistara News

Lok Sabha Pre Poll Survey: ಮತ್ತೆ ಮೋದಿ ಸರ್ಕಾರ ಪಕ್ಕಾ! ‘ಇಂಡಿಯಾ’ ಕೂಟಕ್ಕೆ ಸೋಲೇ ಗತಿ

Lok Sabha pre poll survey say again modi government in center

ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election) ಪೂರ್ವ ಸಮೀಕ್ಷೆಗಳ ವರದಿ ಹೊರಬಿದ್ದಿದ್ದು, ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದ ಎನ್‌‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಸಿಗುವ (Win for NDA) ಸಾಧ್ಯತೆ ಗೋಚರಿಸಿದೆ(Lok Sabha Pre Poll Survey). ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಟೈಮ್ಸ್‌‌ನೌ ಹಾಗೂ ಇಂಡಿಯಾ ಟುಡೆ- ಸಿ ವೋಟರ್‌ ನಡೆಸಿದ ಪ್ರತ್ಯೇಕ ಸಮೀಕ್ಷೆಗಳ ಪ್ರಕಾರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 70ಕ್ಕೂ ಹೆಚ್ಚು ಸ್ಥಾನ ಪಡೆದರೆ ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್‌ ಮಿತ್ರಪಕ್ಷಗಳು 23 ಅಥವಾ 24 ಕ್ಷೇತ್ರ ಗೆಲ್ಲಬಹುದು ಅಂತ ಸಮೀಕ್ಷೆ ಹೇಳಿವೆ.

ಯಾವ ಸಮೀಕ್ಷೆಗಳು ಏನು ಹೇಳಿವೆ?

ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, 2024ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 366 ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು 104 ಸ್ಥಾನಗಳನ್ನು ಪಡೆಯಲಿದೆ. 76 ಕ್ಷೇತ್ರಗಳು ಇತರರ ಪಾಲಾಗಲಿವೆ.

ಶೇಕಡವಾರು ಮತ ಹಂಚಿಕೆ ಹೇಗಿದೆ?

ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ, 2024ರ ಚುನಾವಣೆಯಲ್ಲಿ ಎನ್‌ಡಿಎ ಶೇ.41.8ರಷ್ಟು ಮತಗಳನ್ನು ಪಡೆಯಲಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಶೇ.28.6 ಮತ ಪ್ರಮಾಣ ಗಳಿಸಲಿದೆ. ಇನ್ನು ಇತರ ಪಕ್ಷಗಳು ಶೇ.29.6ರಷ್ಟು ಮತಗಳಿಸಲಿದ್ದಾರೆ.

ಕರ್ನಾಟಕದಲ್ಲಿ ಯಾರು ಎಷ್ಟು ಸೀಟು ಗೆಲ್ಲಲಿದ್ದಾರೆ?

ಟೈಮ್ಸ್ ನೌ ಮತ್ತು ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಕ್ರಮವಾಗಿ ಬಿಜೆಪಿ 24 ಮತ್ತು 21 ಹಾಗೂ ಕಾಂಗ್ರೆಸ್ 4 ಮತ್ತು ಐದು ಸೀಟುಗಳನ್ನು ಗೆಲ್ಲಲಿದೆ. ಹಾಗೆಯೇ, ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಶೇ.53ರಷ್ಟು ಮತ ಗಳಿಸಲಿದ್ದು, ಕಾಂಗ್ರೆಸ್ ಶೇ.42 ಮತ ಪಡೆಯಲಿದೆ. ಇನ್ನು ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್ ಶೇ.54.6 ಹಾಗೂ ಕಾಂಗ್ರೆಸ್ ಶೇ.42.3ರಷ್ಟು ಮತಗಳನ್ನು ಪಡೆಯಲಿದೆ.

ಟೈಮ್ಸ್ ನೌ ಪ್ರಕಾರ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು..?

ನರೇಂದ್ರ ಮೋದಿ – ಶೇ.61.4
ರಾಹುಲ್ ಗಾಂಧಿ – ಶೇ.31.8
ಅರವಿಂದ್ ಕೇಜ್ರಿವಾಲ್ – ಶೇ.03.7
ಇತರರು – ಶೇ.03.1

ಇಂಡಿಯಾ ಟುಡೆ ಪ್ರಕಾರ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು..?

ನರೇಂದ್ರ ಮೋದಿ – ಶೇ.52
ರಾಹುಲ್ ಗಾಂಧಿ – ಶೇ.16

2014ರ ಲೋಕಸಭಾ ಚುನಾವಣೆ ಫಲಿತಾಂಶ

NDA – 336
UPA – 60
OTH – 147

2019ರ ಲೋಕಸಭಾ ಚುನಾವಣೆ ಫಲಿತಾಂಶ

NDA – 353
UPA – 90
OTH – 99

ಎನ್‌ಡಿಎ ಪರ ಜನರ ಒಲವೇಕೆ?

1)ಪ್ರಧಾನಿ ನರೇಂದ್ರ ಮೋದಿ ಪ್ರಬಲ ನಾಯಕತ್ವ
2) ಭ್ರಷ್ಟಾಚಾರ ರಹಿತ 10 ವರ್ಷಗಳ ಆಡಳಿತ
3) ರಾಹುಲ್‌ಗಾಂಧಿ ವಿಫಲ ನಾಯಕತ್ವಕ್ಕೆ ಕಾಂಗ್ರೆಸ್‌ ಮನ್ನಣೆ
4) 28 ಪಕ್ಷಗಳ I.N.D.I.A ಮೈತ್ರಿಕೂಟ ಛಿದ್ರವಾಗಿದ್ದು
5) ದೇಶದಲ್ಲಿ ಪ್ರಬಲ ವಿರೋಧ ಪಕ್ಷದ ಕೊರತೆ
6) ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ
7) ಭಾರಿ ವೇಗದಲ್ಲಿ ರಸ್ತೆ, ರೈಲ್ವೆ ಸೌಕರ್ಯ ಅಭಿವೃದ್ದಿ
8) ವಿಶ್ವದಲ್ಲೇ ಅತಿ ವೇಗವಾಗಿ ಆರ್ಥಿಕ ಬೆಳವಣಿಗೆ
9) ಮೋದಿ ಬಗ್ಗೆ ವಿಶ್ವದ ನಾಯಕರಿಂದ ಪ್ರಶಂಸೆ
10) ಭಾರತದ ಬಗ್ಗೆ ವಿಶ್ವ ನೋಡುವ ನೋಟ ಬದಲಾವಣೆ
11) ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳು
12) ರೈತರಿಗೆ, ಮಹಿಳೆಯರಿಗೆ, ವೃದ್ದರಿಗೆ ಕೇಂದ್ರ ಯೋಜನೆಗಳ ನೇರ ಲಾಭ
13) ಬಿಜೆಪಿ ಬಹುಸಂಖ್ಯಾತ ಹಿಂದುತ್ವದ ಪರ, ಕಾಂಗ್ರೆಸ್‌ ಅಲ್ಪಸಂಖ್ಯಾತರ ಓಲೈಕೆ
13) 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬದಲಾವಣೆ ಭರವಸೆ

ಈ ಸುದ್ದಿಯನ್ನೂ ಓದಿ: INDIA Bloc: ನಿತೀಶ್‌ ಅವರಿಂದ ನೆರವೇರಿತು ಇಂಡಿಯಾ ಮೈತ್ರಿಕೂಟದ ಅಂತಿಮ ವಿಧಿ ವಿಧಾನ; ಕಾಂಗ್ರೆಸ್‌ ನಾಯಕ

Exit mobile version