Site icon Vistara News

Lonavla Tragedy: ಲೋನಾವಲಾದಲ್ಲಿ ಇದುವರೆಗೆ 37 ದುರಂತ ಪ್ರಕರಣಗಳು; 47 ಮಂದಿ ದಾರುಣ ಸಾವು

Lonalva Tragedy

ಮುಂಬೈ: ಮುಂಬೈ ಸಮೀಪದ ಲೋನಾವಾಲಾ(Lonavla Tragedy)ದಲ್ಲಿ ಉಕ್ಕಿ ಹರಿಯುತ್ತಿದ್ದ ಜಲಪಾತದ ಮಧ್ಯದಲ್ಲಿ ನಿಂತಿದ್ದ ಪುರುಷ, ಮಹಿಳೆ ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಕೊಚ್ಚಿಹೋಗಿರುವ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿತ್ತು. ಆದರೆ ಇದೇ ಜಾಗದಲ್ಲಿ ಕಳೆದ ಏಳು ವರ್ಷಗಳಲ್ಲಿ ಇಂತಹದ್ದೇ ಘಟನೆಗಳು ಹಲವು ಬಾರಿ ನಡೆದಿದ್ದು, ಬರೋಬ್ಬರಿ 47 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಲೊನೋವಲಾದಲ್ಲಿರುವ ಭೂಷಿ ಅಣೆಕಟ್ಟಿನಲ್ಲಿ ಇದುವರೆಗೆ 37 ದುರಂತಗಳು ಸಂಭವಿಸಿದ್ದು, ಪ್ರವಾಸಿಗರ ನಿರ್ಲಕ್ಷ್ಯದಿಂದಾಗಿಯೇ ಇಂತದ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇತ್ತೀಚೆಗೆ ನಡೆದ ದುರಂತ ಕೂಡ ಪ್ರವಾಸಿಗರ ನಿರ್ಲಕ್ಷ್ಯದಿಂದಲೇ ನಡೆದಿದೆ. ಇನ್ನು ಇಂತಹ ದುರಂತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿದೆ. ಅದೂ ಅಲ್ಲದೇ ಮೃತ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ನೀಡಿದೆ.

ಮಳೆಗಾಲದಲ್ಲಿ ಈ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಂತೆ, ಈ ಕುಟುಂಬವು ಭಾನುವಾರ ಮಧ್ಯಾಹ್ನ ಭೂಷಿ ಅಣೆಕಟ್ಟಿನ ಹಿನ್ನೀರಿನ ಬಳಿಯ ಜಲಪಾತದಲ್ಲಿ ಪಿಕ್ನಿಕ್ ಗೆ ಹೋಗಿತ್ತು. ರಾಪ್ಸೋಡಿಕ್ ಜಲಪಾತದ ಮಧ್ಯದಲ್ಲಿರುವ ಬಂಡೆಯ ಮೇಲೆ ನಿಂತಿದ್ದರು. ಮುಂಜಾನೆಯಿಂದ ಈ ಪ್ರದೇಶದಲ್ಲಿ ಭಾರಿ ಮಳೆ ಬಂದಿದ್ದ ಕಾರಣ ಅಣೆಕಟ್ಟು ಉಕ್ಕಿ ಹರಿದಿತ್ತು. ಇದು ಜಲಪಾತದಲ್ಲಿ ನೀರಿನ ಹರಿವನ್ನು ಹೆಚ್ಚಿಸಿತು. ಕುಟುಂಬದ ಸದಸ್ಯರು ಕೊಚ್ಚಿ ಹೋಗುತ್ತಿದ್ದ ಕ್ಷಣಗಳು ಬೇರೆ ಪ್ರವಾಸಿಗ ಕ್ಯಾಮೆರಾದದಲ್ಲಿ ದಾಖಲಾಗಿದೆ.

ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ, ರಭಸವಾಗಿ ಹರಿಯುವ ನೀರಿನಲ್ಲಿ ಅವರೆಲ್ಲರೂ ಕೊಚ್ಚಿ ಹೋಗಿದ್ದರು. ಅವರು ಸಹಾಯಕ್ಕಾಗಿ ಕಿರುಚಿದರೂ ಅಲ್ಲಿದ್ದವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಇತರ ಪ್ರವಾಸಿಗರು ಸಹ ದಡದಲ್ಲಿ ಜಮಾಯಿಸಿ ಸಹಾಯಕ್ಕಾಗಿ ಕೂಗಿದ್ದರು. ರಭಸವಾಗಿ ಹರಿಯುವ ನೀರಿನಿಂದ ಆಗ ಅವರ ರಕ್ಷಣೆಗೆ ಹೋಗಲು ಸಾಧ್ಯವಾಗಲಿಲ್ಲ.

ಪೊಲೀಸರ ಪ್ರಕಾರ, ಪ್ರವಾಸಿಗರು ಜಲಪಾತಕ್ಕೆ ಜಾರಿ ಕೆಳಭಾಗದ ಜಲಾಶಯದಲ್ಲಿ ಮುಳುಗಿದ್ದಾರೆ. ಜಲಪಾತದ ತಳದಲ್ಲಿ ಅವರು ನಿಂತಿದ್ದ ಪಾಚಿ ಬಂಡೆಗಳ ಮೇಲೆ ನಿಂತಿದ್ದ ಕಾರಣ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಈ ಅಪಘಾತವು ಜಲಪಾತ ಮತ್ತು ಕೆಳಭಾಗದ ಅಣೆಕಟ್ಟಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅದೇ ಸ್ಥಳದಿಂದ ಬಂದ ಮತ್ತೊಂದು ವೀಡಿಯೊದಲ್ಲಿ ನೂರಾರು ಜನರು ಅಣೆಕಟ್ಟಿನ ಅಂಚಿನಲ್ಲಿ ಮತ್ತು ಅದರ ಗೋಡೆಯ ಮೇಲೆ ನಿಂತಿರುವುದು ಕಾಣಬಹುದು. ಪ್ರವಾಸಿಗರು ಪ್ರವಾಹದ ನೀರಿನಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಸಂಭ್ರಮಿಸುತ್ತಿರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಕಂಡುಬಂದಿಲ್ಲ.

ಇದನ್ನೂ ಓದಿ:Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು; ಟಾಸ್ಕ್‌ಫೋರ್ಸ್‌ ವರದಿಯಲ್ಲಿ ಗಂಭೀರ ಅಂಶಗಳು ಬಯಲು

Exit mobile version