Site icon Vistara News

S Jaishankar: ಕೃಷ್ಣ ಪರಮಾತ್ಮ, ಹನುಮಾನ್ ಜಗತ್ತಿನ ಶ್ರೇಷ್ಠ ರಾಜತಾಂತ್ರಿಕರು: ವಿದೇಶಾಂಗ ಸಚಿವ ಎಸ್ ಜೈಶಂಕರ್ ಬಣ್ಣನೆ

Indira Gandhi removed my father from his post union secretary, Says S JaiShankar

ನವದೆಹಲಿ: ಮಹಾಭಾರತ ಮತ್ತು ರಾಮಾಯಣದ ಕ್ರಮವಾಗಿ ಶ್ರೀಕೃಷ್ಣ ಪರಮಾತ್ಮ (Lord Krishna) ಹಾಗೂ ಹನುಮಾನ್ (Lord Hanuman) ಜಗತ್ತಿನ ಅತಿದೊಡ್ಡ ರಾಜತಾಂತ್ರಿಕರು. ನೀವು ಹನುಮಾನರನ್ನೇ ತೆಗೆದುಕೊಳ್ಳಿ, ಅವರು ರಾಜತಾಂತ್ರಿಕತೆಯನ್ನು ಮೀರಿ ಒಂದು ಹೆಜ್ಜೆ ಮುಂದೆ ಹೋಗಿ, ಸೀತೆಯನ್ನು ಭೇಟಿಯಾಗಿ, ಇಡೀ ಲಂಕೆಗೆ ಬೆಂಕಿ ಹಚ್ಚಿದರು ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರು ಹೇಳಿದರು. ತಾವೇ ಬರೆದ The India Way: Strategies for an Uncertain World ಪುಸ್ತಕದ ಮರಾಠಿ ಅನುವಾದ ಭಾರತ್ ಮಾರ್ಗ್(Bharat Marg) ಪುಸ್ತಕವನ್ನು ಪುಣೆಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಶ್ರೀಕೃಷ್ಣ ಮತ್ತು ಆಂಜನೇಯ ಜಗತ್ತಿನ ಅತಿ ಶ್ರೇಷ್ಠ ರಾಯಭಾರಿಗಳು ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀಕೃಷ್ಣ ಹಾಗೂ ಹನುಮಾನ್ ಹೇಗೆ ಜಗತ್ತಿನ ಅತಿದೊಡ್ಡ ರಾಜತಾಂತ್ರಿಕರು ಎಂಬುದನ್ನು ವಿವರಿಸಿದ ಜೈಶಂಕರ್ ಅವರು, ಕೃಷ್ಣ ಪರಮಾತ್ಮನು ಶಿಶುಪಾಲ ಅವರನ್ನು ಅನೇಕ ಸಲ ಕ್ಷಮಿಸಿದರು. ಶಿಶುಪಾಲ ಅವರ ನೂರು ತಪ್ಪುಗಳನ್ನು ಕ್ಷಮಿಸುತ್ತೇನೆ. 100ನೇ ತಪ್ಪಾಗುತ್ತಿದ್ದಂತೆ ಅವರನ್ನು ವಧೆ ಮಾಡುತ್ತೇನೆ ಎಂದು ಹೇಳಿಗೆ ಹಾಗೆ ನಡೆದುಕೊಂಡರು ಎಂದು ಹೇಳಿದರು. ಇದು ಅತ್ಯುತ್ತಮ ನಿರ್ಣಯ ಕೈಗೊಳ್ಳುವ ಸಾಮರ್ಥ್ಯವನ್ನು ನಮಗೆ ತಿಳಿಸಿಕೊಡುತ್ತದೆ ಎಂದರು.

ಇದನ್ನೂ ಓದಿ: ಯುರೋಪ್ ದೇಶಗಳಿಗೆ ತಮ್ಮ ಸಮಸ್ಯೆ ಜಗತ್ತಿನ ಸಮಸ್ಯೆ ಎಂಬ ಭ್ರಮೆ: ವಿದೇಶಾಂಗ ಸಚಿವ ಜೈ ಶಂಕರ್ ಖಡಕ್‌ ಮಾತು

ಕೌರವರು ಮತ್ತು ಪಾಂಡವರು ಕಾದಾಡಿದ ಕುರುಕ್ಷೇತ್ರವನ್ನು ವಿದೇಶಾಂಗ ಸಚಿವ ಜೈ ಶಂಕರ್ ಅವರು ಬಹುಧ್ರುವ ಭಾರತಕ್ಕೆ ಹೋಲಿಸಿದ್ದಾರೆ. ಕಾರ್ಯತಂತ್ರದ ಸ್ವಾಯತ್ತವು ರಾಷ್ಟ್ರವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುಂದುವರಿಸಲು ಮತ್ತು ಇತರ ರಾಷ್ಟ್ರಗಳಿಂದ ನಿರ್ಬಂಧಕ್ಕೆ ಒಳಗಾಗದ ವಿದೇಶಾಂಗ ನೀತಿಯನ್ನು ಅನುಸರಿಸುವ ಮಾರ್ಗವಾಗಿದೆ ಎಂದು ಅವರು ಹೇಳಿದರು. ಭಾರತವು ಸ್ವಾತಂತ್ರ್ಯವಾದಾಗಿನಿಂದ ದ್ವಿಧ್ರುವಿ ಶೀತಲ ಸಮರ (1947-1991), ಏಕಧ್ರುವ ಕಾಲಾವಧಿ (1991-2008) ಮತ್ತು ಬಹುಧ್ರುವ ಸಮಯ (2008-ಇಂದಿನವರೆಗೆ) ಕಾರ್ಯತಂತ್ರದ ಸ್ವಾಯತ್ತತೆಯ ನೀತಿಯನ್ನು ಅನುಸರಿಸಿಕೊಂಡು ಬಂದಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

Exit mobile version