ನವದೆಹಲಿ: “ರಾಮಮಂದಿರ ನಿರ್ಮಾಣದಲ್ಲಿ ಭಾರತದಲ್ಲಿ ಏಕತೆ ಮೂಡಿದೆ. ಭಗವಾನ್ ರಾಮನು ಎಲ್ಲರನ್ನೂ ಒಗ್ಗೂಡಿಸಿ ಕರೆದುಕೊಂಡು ಹೋಗುತ್ತಿದ್ದಾಣೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಮನ್ ಕೀ ಬಾತ್ (Mann Ki Baat) ರೇಡಿಯೊ ಸರಣಿಯ 109ನೇ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ ರಾಮಮಂದಿರ (Ram Mandir) ಉದ್ಘಾಟನೆ, ಅಯೋಧ್ಯೆ, ರಾಮನ ಆದರ್ಶಗಳನ್ನು ಪ್ರಸ್ತಾಪಿಸಿದರು.
“ಸಂವಿಧಾನ ರಚನೆಕಾರರಿಗೂ ಭಗವಾನ್ ಶ್ರೀರಾಮನ ಸ್ಫೂರ್ತಿಯಾಗಿದ್ದ. ಈಗ ರಾಮಮಂದಿರವೂ ಪೂರ್ತಿಯಾಗಿದೆ. ಇದರೊಂದಿಗೆ ದೇಶದ ಕೋಟ್ಯಂತರ ಜನರ ಶ್ರದ್ಧಾಕೇಂದ್ರವಾಗಿ ರಾಮಮಂದಿರ ಹೊರಹೊಮ್ಮಿದೆ. ನಮ್ಮ ಆಡಳಿತಕ್ಕೂ ರಾಮನು ಸ್ಫೂರ್ತಿಯಾಗಿದ್ದಾನೆ. ರಾಮರಾಜ್ಯ ಕಲ್ಪನೆಯಂತೆಯೇ ನಮ್ಮ ಸರ್ಕಾರ ಆಡಳಿತ ನಡೆಸುತ್ತಿದೆ” ಎಂದು ತಿಳಿಸಿದರು.
Sharing this month's #MannKiBaat. Do tune in as we discuss a wide range of topics. https://t.co/jztb1iL5UI
— Narendra Modi (@narendramodi) January 28, 2024
“ರಾಮಮಂದಿರದಿಂದ ದೇಶದ ಜನರಲ್ಲಿ ಸಂತಸ ಮನೆಮಾಡಿದೆ. ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ದಿನ ಜನ ರಾಮನ ಭಜನೆ ಮೂಲಕ ಪುನೀತರಾದರು. ಸಂಜೆ ದೇಶದ ಮನೆ ಮನೆಯಲ್ಲೂ ರಾಮನ ಜ್ಯೋತಿ ಬೆಳಗಿಸುವ ಮೂಲಕ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ದೀಪಾವಳಿಯಂತೆ ಆಚರಿಸಿದರು” ಎಂದು ಹೇಳಿದರು.
ಇದನ್ನೂ ಓದಿ: Mann Ki Baat: ಬೇಲೂರು, ಹಳೆಬೀಡು ದೇಗುಲಗಳಿಗೆ ವಿಶ್ವಮಾನ್ಯತೆ; ಮನ್ ಕಿ ಬಾತ್‌ನಲ್ಲಿ ಮೋದಿ ಸಂತಸ
ಮೋದಿ ಭಾಷಣದ ಪ್ರಮುಖಾಂಶಗಳು
- 13 ಮಹಿಳಾ ಅಥ್ಲೀಟ್ಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿರುವುದು ಸ್ತ್ರೀ ಸಬಲೀಕರಣದ ಸಂಕೇತವಾಗಿದೆ
- ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗಿದೆ, ನವ ಮತದಾರರು ತಪ್ಪದೇ ಮತದಾನ ಮಾಡಬೇಕು
- ವಿಕಸಿತ ಭಾರತ, ಅಮೃತ ಕಾಲದಲ್ಲಿ ಪ್ರತಿಯೊಬ್ಬರೂ ದೇಶದ ಏಳಿಗೆಗೆ ದುಡಿಯೋಣ
- ತೆರೆಮರೆಯ ಸಾಧಕರಿಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿದೆ, ಪ್ರಶಸ್ತಿಗಳು ಈಗ ಸಾಮಾನ್ಯ ಜನರಿಗೂ ಸಿಗುತ್ತಿವೆ
- ಸಂಭ್ರಮದಿಂದ ಗಣರಾಜ್ಯೋತ್ಸವ ಆಚರಿಸಿದ್ದೇವೆ, ಅಮೃತ ಕಾಲದ ಎಲ್ಲ ಕನಸು ನನಸು ಮಾಡೋಣ
- ಭಾರತವೀಗ ನಾವೀನ್ಯತೆ, ತಂತ್ರಜ್ಞಾನ, ಸಂಶೋಧನೆಗಳಿಗೆ ಕೇಂದ್ರವಾಗಿ ಬದಲಾಗಿದೆ
- ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ, ಮಕ್ಕಳ ಜತೆ ಮಾತನಾಡಲು ಕಾಯುತ್ತಿರುವೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ