Site icon Vistara News

Rakesh Jhunjhunwala | ನನ್ನ ಸೋದರನನ್ನು ಕಳೆದುಕೊಂಡೆ ಎಂದು ಪರಿತಪಿಸಿದ ಸ್ಮೃತಿ ಇರಾನಿ

Smriti irani

ಮುಂಬೈ: ಖ್ಯಾತ ಹೂಡಿಕೆದಾರ ರಾಕೇಶ್​ ಜುಂಜುನ್​​ವಾಲಾ ನಿಧನಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ದುಃಖ ವ್ಯಕ್ತಪಡಿಸಿದ್ದಾರೆ. ‘ನಾನು ನನ್ನ ಸಹೋದರನನ್ನು ಕಳೆದುಕೊಂಡೆ. ರಾಕೇಶ್​ ಜುಂಜುನ್​ವಾಲಾ ಜೀವಂತವಾಗಿ ಇಲ್ಲದೆ ಇದ್ದರೂ. ಅವರು ಹಾಕಿಕೊಟ್ಟ ಪರಂಪರೆ ಸದಾ ಉಳಿಯುತ್ತದೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಬಾಂಬೆ ಸ್ಟಾಕ್​ ಎಕ್ಸ್​​ಚೇಂಜ್​​ನ ಬಾದ್​ಶಾ ಆಗಿದ್ದರು’ ಎಂದು ಬಣ್ಣಿಸಿದ್ದಾರೆ. ಟ್ವೀಟ್​ ಮಾಡಿರುವ ಅವರು ‘ನಮ್ಮಿಬ್ಬರ ಮಧ್ಯೆ ಇದ್ದ ಬಾಂಧವ್ಯ ಅನೇಕರಿಗೆ ಗೊತ್ತಿಲ್ಲ. ಅವರೊಬ್ಬ ನಿಜವಾದ ಕನಸುಗಾರ’ ಎಂದೂ ತಿಳಿಸಿದ್ದಾರೆ.

ರಾಕೇಶ್​ ಜುಂಜುನ್​ವಾಲಾ ಅವರು ದೃಢ ನಿಶ್ಚಯ ಹೊಂದಿದ್ದರು. ಅಷ್ಟೇ ಕೋಮಲಹೃದಯದವರು. ವಿನಯಶೀಲರು ಮತ್ತು ನನ್ನ ಪಾಲಿಗೆ ಅಸಾಮಾನ್ಯ ಸಾಮರ್ಥ್ಯ ಉಳ್ಳವರು. ಅವರಿಗೆ ಹೇಗೆ ಬೇಕೋ, ಹಾಗೆ ಬದುಕಿ ಹೋಗಿದ್ದಾರೆ ಎಂದು ಇನ್ನೊಂದು ಟ್ವೀಟ್​ನಲ್ಲಿ ಸ್ಮೃತಿ ಇರಾನಿ ಬರೆದುಕೊಂಡಿದ್ದಾರೆ.

ತುಂಬ ದಿನಗಳಿಂದಲೂ ಡಯಾಬಿಟಿಸ್​ನಿಂದ ಬಳಲುತ್ತಿದ್ದ ರಾಕೇಶ್​ ಜುಂಜುನ್​ವಾಲಾ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಷೇರು ಮಾರುಕಟ್ಟೆಯ ದಿಗ್ಗಜರಾದ ಅವರು ಇತ್ತೀಚೆಗಷ್ಟೇ ಆಕಾಶೋದ್ಯಮಕ್ಕೂ ಕಾಲಿಟ್ಟಿದ್ದರು. ಆಕಾಸ ಏರ್​ ಎಂಬ ಹೊಸ ವಾಯುಯಾನ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಆಕಾಸ ಏರ್​​ನ ಮೊಟ್ಟಮೊದಲ ವಿಮಾನ ಆಗಸ್ಟ್​ 7ರಂದು ಟೇಕ್​ಆಫ್​ ಕೂಡ ಆಗಿದೆ. ವಿಮಾನಯಾನವೆಂಬುದು ಎಲ್ಲರಿಗೂ ಕೈಗೆಟಕುವ ದರದಲ್ಲಿ ಸಿಗಬೇಕು ಎಂಬ ಮಹದುದ್ದೇಶದಿಂದ ಈ ಸಂಸ್ಥೆಯನ್ನು ಪ್ರಾರಂಭಿಸಿ, ಒಂದು ವಾರದಲ್ಲಿ ಅವರು ಇನ್ನಿಲ್ಲವಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Viral Video | ಅದೆಂಥ ಜೀವನೋತ್ಸಾಹಿಯಾಗಿದ್ದರು ರಾಕೇಶ್​ ಜುಂಜುನ್​ವಾಲಾ; ಅದ್ಭುತ ಡ್ಯಾನ್ಸ್ ಇಲ್ಲಿದೆ

Exit mobile version