Site icon Vistara News

Lotus In G-20 Logo | ಜಿ-20 ಶೃಂಗಸಭೆ ಲೋಗೊದಲ್ಲಿ ಕಮಲ, ಬಿಜೆಪಿ-ಕಾಂಗ್ರೆಸ್ ಮಧ್ಯೆ ಕೋಲಾಹಲ

g20-logo-India-1

ನವದೆಹಲಿ: ಜಿ-20 ಶೃಂಗಸಭೆಯ ಅಧ್ಯಕ್ಷತೆ ಲೋಗೊದಲ್ಲಿ (Lotus In G-20 Logo) ಬಿಜೆಪಿ ಚುನಾವಣೆ ಚಿಹ್ನೆಯಾದ ‘ಕಮಲ’ವನ್ನು ಅಳವಡಿಸಿರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಡಿಸೆಂಬರ್‌ 1ರಿಂದ ಭಾರತವು ಜಿ-20 ರಾಷ್ಟ್ರಗಳ ಶೃಂಗಸಭೆಯ ಅಧ್ಯಕ್ಷತೆಯನ್ನು ಪಡೆಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಲೋಗೊ ಬಿಡುಗಡೆ ಮಾಡಿದೆ. ಇದರಲ್ಲಿ ಕಮಲದ ಚಿಹ್ನೆ ಇರುವುದು ಎರಡೂ ಪಕ್ಷಗಳ ಮಧ್ಯೆ ವಾಗ್ವಾದ ನಡೆಯುತ್ತಿದೆ.

ಕಾಂಗ್ರೆಸ್‌ ಟೀಕೆ ಏನು?

ಕಮಲದ ಚಿಹ್ನೆ ಅಳವಡಿಸಿರುವುದಕ್ಕೆ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “70 ವರ್ಷಗಳ ಹಿಂದೆ ಕಾಂಗ್ರೆಸ್‌ ಧ್ವಜವನ್ನೇ ದೇಶದ ಧ್ವಜವನ್ನಾಗಿ ಮಾಡಬೇಕು ಎಂಬ ಪ್ರಸ್ತಾಪವನ್ನು ಜವಾಹರ ಲಾಲ್‌ ನೆಹರು ಅವರು ತಿರಸ್ಕರಿಸಿದ್ದರು. ಆದರೆ, ಈಗ ಜಿ-20 ಅಧ್ಯಕ್ಷತೆಯ ಲಾಂಛನದಲ್ಲಿ ಬಿಜೆಪಿಯ ಚಿಹ್ನೆ ಅಳವಡಿಸಲಾಗಿದೆ. ಮೋದಿ ಹಾಗೂ ಬಿಜೆಪಿಯಿಂದ ಪ್ರಚಾರ ಪಡೆಯುವ ಯಾವುದೇ ಅವಕಾಶವನ್ನು ನಾಚಿಕೆಯೇ ಇಲ್ಲದೆ ಬಳಸಿಕೊಳ್ಳಲಾಗುತ್ತದೆ” ಎಂದಿದ್ದಾರೆ.

ತಿರುಗೇಟು ನೀಡಿದ ಬಿಜೆಪಿ

ಕಾಂಗ್ರೆಸ್‌ ಆರೋಪಕ್ಕೆ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ ತಿರುಗೇಟು ನೀಡಿದ್ದಾರೆ. “ಕಮಲ ನಮ್ಮ ರಾಷ್ಟ್ರೀಯ ಪುಷ್ಪವಾಗಿದೆ. ಇದು ಮಹಾಲಕ್ಷ್ಮೀಯ ಆಸನವಾಗಿದೆ. ಹಾಗಾದರೆ, ಕಾಂಗ್ರೆಸ್‌ನವರು ರಾಷ್ಟ್ರೀಯ ಹೂವನ್ನು ವಿರೋಧಿಸುತ್ತಾರೆಯೇ? ನಿಮ್ಮ ಪಕ್ಷದ ನಾಯಕ ಕಮಲ್‌ನಾಥ್‌ ಅವರಿಂದ ಕಮಲ್‌ ಎಂಬುದನ್ನು ತೆಗೆದು ಹಾಕುತ್ತೀರಾ?” ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ | G20 Logo India | ನಮ್ಮ ವೈವಿಧ್ಯತೆ, ಸಾಮರ್ಥ್ಯ ಪ್ರದರ್ಶಿಸೋಣ: ಮೋದಿ, ಜಿ20 ಅಧ್ಯಕ್ಷತೆಯ ಲೋಗೋ ಅನಾವರಣ

Exit mobile version