ಕೋಲ್ಕೊತಾ, ಪಶ್ಚಿಮ ಬಂಗಾಳ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರೈಲು ಅಪಘಾತವು(Odisha Train Accident), ದೇಶವು ಇತ್ತೀಚೆಗೆ ಕಂಡ ಅತಿದೊಡ್ಡ ಅಪಘಾತವಾಗಿದೆ. ಅಪಘಾತ ಸಂಭವಿಸಿದ ಬಾಲಾಸೋರ್ ಜಿಲ್ಲೆಯ ಬಹನಾಗಾ ಎಂಬಲ್ಲಿ ಈಗ ಎಲ್ಲ ಹಳಿಗಳನ್ನು ಸರಿಪಡಿಸಲಾಗಿದ್ದು, ರೈಲುಗಳು ಎಂದಿನಂತೆ ಮತ್ತೆ ಸಂಚರಿಸುತ್ತಿವೆ. ಈ ಮಧ್ಯೆ, ಅಪಘಾತ ನಡೆದ ಸ್ಥಳದಲ್ಲಿ ಪ್ರಯಾಣಿಕರ ಅಭಿರುಚಿಗಳನ್ನು ಹೇಳುವ ಸಾಕ್ಷ್ಯಗಳು ದೊರೆತಿವೆ. ಬಂಗಾಳಿ (Bengali Language) ಭಾಷೆಯಲ್ಲಿರುವ ಪ್ರೇಮ ಕವನಗಳಿರುವ (Love Poem) ಹಾಳೆಗಳು ಹರಡಿಕೊಂಡಿವೆ. ಇನ್ನೊಂದು ಬದಿಯಲ್ಲಿ ಆನೆಗಳು, ಮೀನುಗಳು ಮತ್ತು ಸೂರ್ಯನ ರೇಖಾಚಿತ್ರಗಳನ್ನು ಹೊಂದಿರುವ ಡೈರಿಯ ಹರಿದ ಪುಟಗಳನ್ನು ಕಾಣಬಹುದಾಗಿದೆ. ಬಹುಶಃ ಪ್ರಯಾಣಿಕರು ರೈಲ ಪ್ರವಾಸದ ತಮ್ಮ ಬಿಡುವಿನ ವೇಳೆ ಈ ಚಿತ್ರಗಳ್ನು ಬರೆದಿರುವಂತೆ ಕಾಣುತ್ತಿದೆ. ಆದರೆ, ಇವು ಯಾವ ಪ್ರಯಾಣಿಕರಿಗೆ ಸೇರಿದ್ದು ಎಂಬುದು ಇನ್ನೂ ಗೊತ್ತಾಗಿಲ್ಲ(Viral News).
ಅಲ್ಪೋ ಆಲ್ಪೋ ಮೇಘ್ ಥೇಕೆ ಹಲ್ಕಾ ಬ್ರಿಸ್ತಿ ಹೋಯ್, ಚೋಟ್ಟೋ ಚೋಟ್ಟೋ ಗೋಲ್ಪೋ ಥೇಕೆ ಭಲೋಬಾಸ ಸೃಷ್ಟಿ ಹೋಯ್ (ಚದುರಿದ ಮೋಡಗಳು ಲಘು ಮಳೆಗೆ ಕಾರಣವಾಗುತ್ತವೆ, ಆದರೆ ನಾವು ಕೇಳುವ ಸಣ್ಣ ಕಥೆಗಳಿಂದ ಪ್ರೀತಿ ಅರಳುತ್ತದೆ) ಎಂಬ ಕೈ ಬರಹದ ಕವಿತೆ ಇರುವ ಹಾಳೆಗಳು ಕಂಡು ಬಂದಿವೆ. ಈ ಕುರಿತಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಇನ್ನೊಂದು ಪೇಜ್‌ನಲ್ಲಿದ್ದ ಮತ್ತೊಂದು ಅರ್ಧ ಮುಗಿದ ಕವನದಲ್ಲಿ, ಭಾಲೋಬೇಷೇ ತೋಕೆ ಚಾಯ್ ಸರಖೋನ್, ಅಚಿಸ್ ತುಯಿ ಮೋನರ್ ಸಾಥೆ… (ಪ್ರೀತಿಯಿಂದ ನನಗೆ ಎಲ್ಲಾ ಸಮಯದಲ್ಲೂ ನೀವು ಬೇಕು, ಎಲ್ಲಾ ಸಮಯದಲ್ಲೂ ನೀವು ನನ್ನ ಮನಸ್ಸಿನಲ್ಲಿ ಇರುತ್ತೀರಿ…) ಎಂದು ಬರೆಯಲಾಗಿದೆ. ಇವೆಲ್ಲವರು ಹೃದಯ ವಿದ್ರಾವಕ ಮತ್ತು ಜೀವ ಎಷ್ಟು ಅನಿರೀಕ್ಷಿತ ಎಂಬುದಕ್ಕೆ ಸಾಕ್ಷಿಗಳು ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್ಡಿಆರ್ಎಫ್ ಯೋಧ!
ಈ ಕವಿತೆಗಳು ತಮ್ಮದೇ ಎಂದು ಅಥವಾ ಇವುಗಳನ್ನು ಬರೆದ ವ್ಯಕ್ತಿಯ ಸಂಬಂಧಿಕರೆಂದು ಹೇಳಿಕೊಂಡವರು ಈ ವರೆಗೂ ಯಾರು ಬಂದಿಲ್ಲ. ಇವು ಯಾರಿಗೆ ಸೇರಿದ್ದವು ಎಂಬುದು ತಿಳಿದಿಲ್ಲ ಎಂದು ಸ್ಥಳೀಯ ಪೊಲೀಸ್‌ರೊಬ್ಬರು ತಿಳಿಸಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.