ಜೈಪುರ: ದೇಶಾದ್ಯಂತ ಅಡುಗೆ ಅನಿಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯಿಂದ ಜನ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದ ಜನರಿಗೆ ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. “ರಾಜ್ಯದಲ್ಲಿ ಬಡವರಿಗೆ ಕೇವಲ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ (LPG Cylinder For Rs 500) ನೀಡಲಾಗುವುದು” ಎಂದು ಘೋಷಣೆ ಮಾಡಿದ್ದು, 2023ರ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿಯೇ ಸಿದ್ಧತೆ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿಯೇ ಗೆಹ್ಲೋಟ್ ಇಂತಹ ಘೋಷಣೆ ಮಾಡಿದ್ದಾರೆ. “2023ರ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಬಡತನ ರೇಖೆಗಿಂತ ಕೆಳಗಿರುವವರು (BPL) ಹಾಗೂ ಉಜ್ವಲ ಯೋಜನೆ ಕೆಟಗರಿಯಲ್ಲಿರುವವರಿಗೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್ ಲಭ್ಯವಿರಲಿದೆ” ಎಂದು ಹೇಳಿದ್ದಾರೆ.
ಜನ 1,040 ರೂ. ಪಾವತಿಸುವ ಬದಲು ವರ್ಷಕ್ಕೆ 12 ಸಿಲಿಂಡರ್‌ಗಳನ್ನು 500 ರೂ. ಪಾವತಿಸಿ ಖರೀದಿಸಬಹುದಾಗಿದೆ. ರಾಜಸ್ಥಾನದಲ್ಲಿ 2023ರ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೇ ಕಾರಣಕ್ಕಾಗಿ ಅಶೋಕ್ ಗೆಹ್ಲೋಟ್ ಅವರು ಜನರಿಗೆ ಇಂತಹ ಸಿಹಿ ಸುದ್ದಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ | Gujarat Election | ಅಡುಗೆ ಅನಿಲ ಸಿಲಿಂಡರ್‌ನೊಂದಿಗೆ ಸೈಕಲ್ ಮೇಲೆ ಬಂದು ವೋಟ್ ಮಾಡಿದ ಕಾಂಗ್ರೆಸ್ ಶಾಸಕ