Site icon Vistara News

Madhav Sheth: ರಿಯಲ್‌ಮಿ ಇಂಡಿಯಾ ಸಿಇಒ ಹುದ್ದೆ ತೊರೆದ ಮಾಧವ್‌ ಸೇಠ್, ಕಾರಣವೇನು?

Madhav Sheth Steps Down As Realme India CEO, Michael Guo To Take Charge

Madhav Sheth Steps Down As Realme India CEO, Michael Guo To Take Charge

ನವದೆಹಲಿ: ಎಲೆಕ್ಟ್ರಾನಿಕ್‌ ಉಪಕರಣಗಳ ದೈತ್ಯ ರಿಯಲ್‌ಮಿ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸ್ಥಾನದಿಂದ ಭಾರತದ ಮಾಧವ್‌ ಸೇಠ್‌ (Madhav Sheth) ಅವರು ಕೆಳಗಿಳಿದಿದ್ದಾರೆ. ಅವರ ಜಾಗಕ್ಕೆ ಮೈಕೆಲ್‌ ಗಟ್‌ ಅವರನ್ನು ನೇಮಕ ಮಾಡಲಾಗಿದ್ದು, ಅವರೇ ಭಾರತದಲ್ಲಿ ರಿಯಲ್‌ಮಿ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ರಿಯಲ್‌ಮಿ ಇಂಡಿಯಾ ಸಿಇಒ ಜತೆಗೆ ಮಾಧವ್‌ ಸೇಠ್‌ ಅವರು ರಿಯಲ್‌ಮಿ ಕಂಪನಿಯ ಉಪಾಧ್ಯಕ್ಷರಾಗಿದ್ದಾರೆ. ಅಲ್ಲದೆ, ರಿಯಲ್‌ಮಿ ಇಂಟರ್‌ನ್ಯಾಷನಲ್‌ ಬ್ಯುಸಿನೆಸ್‌ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಆದರೆ, ಸಿಇಒ ಜತೆಗೆ ಈ ಹುದ್ದೆಗಳಿಗೂ ರಾಜೀನಾಮೆ ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಮಾಧವ್‌ ಸೇಠ್‌ ಅವರಿಗೆ 17 ವರ್ಷದ ಆಡಳಿತ, ಉತ್ತಮ ಕಾರ್ಯನಿರ್ವಹಣೆಯ ಅನುಭವವಿದೆ. ಹಾಗಾಗಿ, ಅವರು ರಿಯಲ್‌ಮಿ ಸಿಇಒ ಸ್ಕೈ ಲಿ ಜತೆಗೂಡಿ ಭಾರತದಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಸೇರಿ ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಆಧಿಪತ್ಯ ಸಾಧಿಸುವಂತೆ ಮಾಡಿದ್ದಾರೆ. ಭಾರತದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಅಗ್ರ 5 ಮೊಬೈಲ್‌ಗಳಲ್ಲಿ ರಿಯಲ್‌ಮಿ ಕೂಡ ಒಂದಾಗಿದೆ. ಇದರ ಹಿಂದೆ ಮಾಧವ್‌ ಸೇಠ್‌ ಪರಿಶ್ರಮ ಹೆಚ್ಚಾಗಿದ್ದು, ಏಕಾಏಕಿ ಸಿಇಒ ಹುದ್ದೆಯಿಂದ ಕೆಳಗಿಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಇನ್ನಷ್ಟು ಪ್ರಾಬಲ್ಯ ಸಾಧಿಸುವುದು ರಿಯಲ್‌ಮಿ ಉದ್ದೇಶವಾಗಿದ್ದು, ಇದನ್ನು ಸಾಕಾರಗೊಳಿಸಲು ಹೊಸ ತಂಡ ರಚನೆಗೆ ಮುಂದಾಗಿದೆ. ಇದೇ ಕಾರಣಕ್ಕಾಗಿ ಮಾಧವ್‌ ಸೇಠ್‌ ಅವರನ್ನು ಬದಲಾಯಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದಾಗ್ಯೂ, ಸಿಇಒ ಹುದ್ದೆ ತೊರೆದಿರುವ ಕುರಿತು ಮಾಧವ್‌ ಸೇಠ್‌ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಕಂಪನಿಯೂ ಹೇಳಿಕೆ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: Ajit Mohan | ಫೇಸ್‌ಬುಕ್‌ ಇಂಡಿಯಾ ಮುಖ್ಯಸ್ಥ ಅಜಿತ್‌ ಮೋಹನ್‌ ರಾಜೀನಾಮೆ, ಯಾವ ಸಂಸ್ಥೆಗೆ ಸೇರ್ಪಡೆ?

Exit mobile version