Site icon Vistara News

Fire Accident: ದೇಗುಲದಲ್ಲಿ ಅಗ್ನಿ ದುರಂತ; 13 ಜನಕ್ಕೆ ಗಾಯ, ಸಿಎಂ ಸ್ವಲ್ಪದರಲ್ಲೇ ಪಾರು!

Mahakal Temple

Madhya Pradesh: 13 injured as fire erupts during Holi celebrations at Mahakal Temple in Ujjain

ಭೋಪಾಲ್‌: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲ್ ದೇವಾಲಯದಲ್ಲಿ‌ (Mahakal Temple) ಸೋಮವಾರ (ಮಾರ್ಚ್‌ 25) ಬೆಳಗ್ಗೆ ಭಾರಿ ಅಗ್ನಿ ಅವಘಢ (Fire Accident) ಸಂಭವಿಸಿದೆ. ದೇವಾಲಯದ ಗರ್ಭಗೃಹದಲ್ಲಿ ಹೋಳಿ ಹಬ್ಬದ (Holi Celebrations) ಹಿನ್ನೆಲೆಯಲ್ಲಿ ಭಸ್ಮಾರತಿ ಮಾಡುವಾಗ ಅಗ್ನಿ ದುರಂತ ಸಂಭವಿಸಿದ್ದು, ಸುಮಾರು 13 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ, ಘಟನೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ (Mohan Yadav) ಯಾದವ್‌ ಅವರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ ಅರ್ಚಕರು ಭಸ್ಮಾರತಿ ಮಾಡುತ್ತಿದ್ದರು. ಹಾಗಾಗಿ, ಹಲವು ಭಕ್ತರು ನೆರೆದಿದ್ದರು. ಇದೇ ವೇಳೆ ಅಗ್ನಿ ದುರಂತ ಸಂಭವಿಸಿದೆ. ಭಸ್ಮಾರತಿ ನೆರವೇರಿಸುವ ಪ್ರಧಾನ ಅರ್ಚಕ ಸಂಜಯ್‌ ಗುರು, ಹಲವು ಅರ್ಚಕರು ಸೇರಿ 13 ಜನ ಗಾಯಗೊಂಡಿದ್ದಾರೆ. ಅಗ್ನಿ ದುರಂತ ಸಂಭವಿಸುತ್ತಲೇ ದೇವಾಲಯದಲ್ಲಿ ಗೊಂದಲದ ವಾತಾವರಣೆ ಸೃಷ್ಟಿಯಾಗಿತ್ತು. ಭಕ್ತರು ಏಕಾಏಕಿ ಓಡಿ ಹೋಗಲು ಯತ್ನಿಸಿದ ಕಾರಣ ಕೆಲವರು ಬಿದ್ದು ಗಾಯ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

“ದೇವಾಲಯದಲ್ಲಿ ಭಸ್ಮಾರತಿ ಮಾಡುವಾಗ ಅಗ್ನಿ ಅವಘಡ ಸಂಭವಿಸಿದೆ. ಭಸ್ಮಾರತಿ ಮಾಡುವಾಗ ಗುಲಾಲ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಗಾಯಾಳುಗಳನ್ನು ಕೂಡಲೇ ಉಜ್ಜಯಿನಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಜಿಲ್ಲಾಧಿಕಾರಿ ನೀರಜ್‌ ಕುಮಾರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸಂಜಯ್‌ ಗುರು, ವಿಕಾಸ್‌ ಪೂಜಾರಿ, ಮನೋಜ್‌ ಪೂಜಾರಿ, ಅಂಶ್‌ ಪುರೋಹಿತ್‌, ಮಹೇಶ್‌ ಶರ್ಮಾ, ಚಿಂತಾಮಣ್‌ ಗೆಹ್ಲೋಟ್‌ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Holi 2024: ಭಾವ್ಯಕ್ಯತೆಯನ್ನು ಬೆಸೆಯುವ ವಿಶಿಷ್ಟ ಹಬ್ಬ ಹೋಳಿ ಹುಣ್ಣಿಮೆ

ಸಿಎಂ ಮೋಹನ್‌ ಯಾದವ್‌ ಪಾರು

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರು ಅಗ್ನಿ ಅವಘಡದಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ. ಅಗ್ನಿ ಅವಘಡ ಸಂಭವಿಸಿದಾಗ ಮೋಹನ್‌ ಯಾದವ್‌ ಹಾಗೂ ಅವರ ಪುತ್ರಿಯು ದೇವಾಲಯದ ಸಮೀಪವೇ ಇದ್ದರು. ಆದರೆ, ಅವರಿನ್ನೂ ದೇವಾಲಯ ಪ್ರವೇಶಿಸಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಸೋಮವಾರ ಮೋಹನ್‌ ಯಾದವ್‌ ಅವರ ಜನ್ಮದಿನ ಇರುವ ಕಾರಣ ಅವರು ದೇವಾಲಯಕ್ಕೆ ಆಗಮಿಸುತ್ತಿದ್ದರು. ಇದಕ್ಕಾಗಿ ದೇವಾಲಯದಲ್ಲಿ ಸಿದ್ಧತೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version