ಭೋಪಾಲ್: ಇಸ್ಲಾಂನಲ್ಲಿ ಸಂಗೀತ ಸೇರಿ ಹಲವು ಆಚರಣೆಗಳನ್ನು ನಿಷೇಧಿಸಲಾಗಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಧರ್ಮಗುರುಗಳು ಕೂಡ ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ಹೀಗೆ ಮದುವೆ ಸಮಾರಂಭವೊಂದರಲ್ಲಿ ಜೋರಾಗಿ ಡಿಜೆ ಶಬ್ದ ಕೇಳುತ್ತಲೇ ಮೌಲ್ವಿಯೊಬ್ಬರು ಮದುವೆಯ ಧಾರ್ಮಿಕ ವಿಧಿವಿಧಾನಗಳನ್ನೇ (Cleric Refuses Nikah) ನಿಲ್ಲಿಸಿದ್ದಾರೆ. ಡಿಜೆ ಮ್ಯೂಸಿಕ್ ನಿಲ್ಲಿಸಿದ ಬಳಿಕವೇ ಅವರು ಮದುವೆಯ ವಿಧಿವಿಧಾನ ನೆರವೇರಿಸಿದ್ದಾರೆ.
ಮಧ್ಯಪ್ರದೇಶದ ಛತಾರ್‌ಪುರದಲ್ಲಿ ಮದುವೆ ನಡೆದಿದ್ದು, ಇದೇ ವೇಳೆ ಡಿಜೆ ಶಬ್ದ ಕೇಳಿ ಮೌಲ್ವಿ ಕುಪಿತಗೊಂಡಿದ್ದಾರೆ. ಹಾಗೆಯೇ, ಇದರ ಕುರಿತು ಕೇಳಿದಾಗ, “ಇಸ್ಲಾಂನಲ್ಲಿ ದುಂದುವೆಚ್ಚ ಮಾಡಬಾರದು ಎಂಬ ನಿಯಮವಿದೆ. ಹಾಗಾಗಿ, ಮದುವೆ ವೇಳೆ ಹಾಡು, ನೃತ್ಯ, ಸಂಗೀತವನ್ನು ನಿಷೇಧಿಸಲಾಗಿದೆ. ಅದರಲ್ಲೂ, ಇಸ್ಲಾಂನಲ್ಲಿ ಸಂಗೀತವನ್ನು ನಿಷೇಧಿಸಲಾಗಿದೆ” ಎಂದು ಮಾಹಿತಿ ನೀಡಿದರು.
“ಸಮಾಜದಲ್ಲಿ ಬಡವರು ಹಾಗೂ ಶ್ರೀಮಂತರು ಇರುತ್ತಾರೆ. ಎಲ್ಲರೂ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ಸಮಾಜದಲ್ಲಿ ಸಮಾನತೆ ತರುವ ದಿಸೆಯಲ್ಲಿಯೂ ಸರಳವಾಗಿ ಮದುವೆ ಮಾಡಿಕೊಳ್ಳುವುದು ಉತ್ತಮ. ಹಾಗಾಗಿ, ಡಿಜೆ ಶಬ್ದ ಕೇಳಿಸುತ್ತಲೇ ಮದುವೆ ವಿಧಿವಿಧಾನ ನೆರವೇರಿಸಿದೆ” ಎಂದು ಜನರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Nikah Halala | ಮುಸ್ಲಿಮರ ನಿಖಾ ಹಲಾಲ, ಬಹುಪತ್ನಿತ್ವ ಪ್ರಶ್ನಿಸಿ ಅರ್ಜಿ, 5 ಜಡ್ಜ್‌ಗಳ ಪೀಠ ರಚನೆಗೆ ಸುಪ್ರೀಂ ಅಸ್ತು