Site icon Vistara News

Viral Video | ಕೊಲೆ ಕೇಸ್ ಭೇದಿಸಲು ಅಧ್ಯಾತ್ಮ ಗುರುವಿನ ಸಹಾಯ ಕೇಳಿದ ಪೊಲೀಸ್‌ ಅಧಿಕಾರಿ, ಮುಂದೇನಾಯಿತು?

MP COP

ಭೋಪಾಲ್‌: ಯಾವುದಾದರೂ ಕೊಲೆ ಪ್ರಕರಣದಲ್ಲಿ ಲೀಡ್‌ ಸಿಗದಿದ್ದರೆ, ಕೇಸ್‌ ಭೇದಿಸಲು ಕಷ್ಟವಾದರೆ ಒಬ್ಬ ಪೊಲೀಸ್‌ ಅಧಿಕಾರಿ ಯಾರನ್ನು ಕೇಳಬೇಕು? ಶಿಷ್ಟಾಚಾರದ ಪ್ರಕಾರ ಹಿರಿಯ ಪೊಲೀಸ್‌ ಅಧಿಕಾರಿಗಳ ಸಲಹೆ ಸೂಚನೆ ಕೇಳಬೇಕು. ಆದರೆ, ಮಧ್ಯಪ್ರದೇಶದಲ್ಲಿ ಅಸಿಸ್ಟಂಟ್‌ ‌ಸಬ್‌ ಇನ್ಸ್‌ಪೆಕ್ಟರ್‌ (ASI) ಒಬ್ಬರು ಅಧ್ಯಾತ್ಮ ಗುರುವಿನ ಸಹಾಯ ಕೇಳಿದ್ದು, ಈ ವಿಡಿಯೊ (Viral Video) ಆಗುತ್ತಲೇ ಪೊಲೀಸ್‌ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯಲ್ಲಿ ಎಎಸ್‌ಐ ಅಶೋಕ್‌ ಶರ್ಮಾ (ASI Ashok Sharma) ಅವರು ೧೭ ವರ್ಷದ ತರುಣಿಯ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರು. ಪ್ರಕರಣದಲ್ಲಿ ಯಾವುದೇ ಲೀಡ್‌ ಸಿಗದ ಕಾರಣ ಅವರು ಸ್ವಯಂಘೋಷಿತ ಅಧ್ಯಾತ್ಮ ಗುರುವೊಬ್ಬರ ಸಲಹೆ ಕೇಳಿದ್ದಾರೆ. ಅಧ್ಯಾತ್ಮ ಗುರುವಿನ ಎದುರು ಕೈಕಟ್ಟಿ ಕುಳಿತು, ಪ್ರಕರಣ ಭೇದಿಸುವುದು ಹೇಗೆ ಎಂದು ಕೇಳಿದ ವಿಡಿಯೊ ವೈರಲ್‌ ಆಗುತ್ತಲೇ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಪೊಲೀಸ್‌ ಅಧಿಕಾರಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಧ್ಯಾತ್ಮ ಗುರು, “ನೀನು ತಯಾರಿಸಿದ ಆರೋಪಿಗಳ ಪಟ್ಟಿಯಲ್ಲಿ ಹಲವು ಹೆಸರುಗಳಿವೆ. ಆದರೆ, ನಿನ್ನ ಪಟ್ಟಿಯಲ್ಲಿ ಇರದ ಹೆಸರಿನವನೇ ಮುಖ್ಯ ಆರೋಪಿಯಾಗಿದ್ದಾನೆ” ಎಂದು ಹೇಳಿದ್ದಾರೆ. ಹಾಗೆಯೇ ಮುಂದುವರಿದು ಮೂವರ ಹೆಸರುಗಳನ್ನು ಅಧ್ಯಾತ್ಮ ಗುರು ಹೇಳುತ್ತಾರೆ. “ಈಗ ನಿನಗೆ ಯಾರು ಎಂದು ಗೊತ್ತಾಗಿದೆ. ಪ್ರಕರಣದಲ್ಲಿ ಈಗಾಗಲೇ ಅವನನ್ನು ಬಂಧಿಸಿ ವಿಚಾರಣೆ ನಡೆಸಿದ್ದೀಯಾ” ಎಂದು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಇದನ್ನೂ ಓದಿ | Viral Video | ಚೀನಾದಲ್ಲೀಗ ಮನುಷ್ಯರಿಗೆ ಮಾತ್ರವಲ್ಲ, ಮೀನು, ಕಪ್ಪೆಗಳಿಗೂ ಕೋವಿಡ್‌ ಟೆಸ್ಟ್

Exit mobile version