Site icon Vistara News

Mobiles In Temples | ದೇಗುಲಗಳಲ್ಲಿ ಮೊಬೈಲ್‌ ನಿಷೇಧಿಸಿ, ತಮಿಳುನಾಡು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

Mobiles In Temples

ಚೆನ್ನೈ: ಬದಲಾದ ಕಾಲಘಟದಲ್ಲಿ ಬಹುತೇಕ ಜನರಿಗೆ ಮೊಬೈಲ್‌ ಅವಿಭಾಜ್ಯ ಅಂಗವಾಗಿದೆ. ದಿನದ ಬಹುತೇಕ ಭಾಗವು ಮೊಬೈಲ್‌ನಲ್ಲಿಯೇ ಕಾಲ ಕಳೆಯುವವರ ಸಂಖ್ಯೆ ಹೆಚ್ಚಾಗಿದೆ. ಇಂತಹವರ ಸಂಖ್ಯೆ ಜಾಸ್ತಿಯಾದ ಬೆನ್ನಲ್ಲೇ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ (Mobiles In Temples) ಕುರಿತು ಮದ್ರಾಸ್ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. “ದೇವಾಲಯಗಳಲ್ಲಿ ಮೊಬೈಲ್‌ ನಿಷೇಧಿಸಿ” ಎಂದು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠವು ನಿರ್ದೇಶನ ನೀಡಿದೆ.

“ದೇವಾಲಯದ ಪಾವಿತ್ರ್ಯತೆ ಹಾಗೂ ಘನತೆಯನ್ನು ಕಾಪಾಡುವ ದಿಸೆಯಲ್ಲಿ ರಾಜ್ಯದ ಎಲ್ಲ ದೇವಾಲಯಗಳ ಆವರಣಗಳಲ್ಲಿ ಮೊಬೈಲ್‌ ಬಳಕೆಯನ್ನು ನಿಷೇಧಿಸಬೇಕು. ಈ ಕುರಿತು ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು” ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

“ತಿರುಚೆಂಡೂರ್‌ ದೇವಾಲಯದಲ್ಲಿ ಈಗಾಗಲೇ ಇಂತಹ ಕ್ರಮ ತೆಗೆದುಕೊಳ್ಳಲಾಗಿದೆ. ದೇಗುಲ ಆವರಣದಲ್ಲಿ ಮೊಬೈಲ್‌ ಬಳಕೆ ನಿಷೇಧದ ಜತೆಗೆ ಸಭ್ಯ ಉಡುಪು ಧರಿಸಿ ಬರಬೇಕು ಎಂಬ ನಿಯಮವಿದೆ. ಇದರಂತೆ, ರಾಜ್ಯದೆಲ್ಲೆಡೆ ದೇವಾಲಯಗಳಲ್ಲಿ ಮೊಬೈಲ್‌ ಬಳಕೆ ನಿರ್ಬಂಧಿಸಬೇಕು. ಸೆಕ್ಯುರಿಟಿ ಕೌಂಟರ್‌ಗಳಲ್ಲಿಯೇ ಮೊಬೈಲ್‌ ಬಿಟ್ಟು ಹೋಗುವ, ಈ ಕುರಿತು ನೋಟಿಸ್‌ ಬೋರ್ಟ್‌ಗಳಲ್ಲಿ ಸೂಚನಾ ಫಲಕ ಅಳವಡಿಸುವುದು ಸೇರಿ ಹಲವು ಕ್ರಮ ತೆಗೆದುಕೊಳ್ಳಬೇಕು” ಎಂದು ಸೂಚಿಸಿದೆ.

ಇದನ್ನೂ ಓದಿ | Dress code in temple | ಶಿರಸಿ ಮಾರಿಕಾಂಬಾ ದೇವಾಲಯದಲ್ಲಿ ವಸ್ತ್ರಸಂಹಿತೆ ಸದ್ದು! ಹಿಂದು ಜಾಗೃತಿ ವೇದಿಕೆ ಮನವಿ

Exit mobile version