ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಭಾನುವಾರ ಆರಂಭವಾಗಲಿರುವುದರಿಂದ ಗೋವಾದಲ್ಲಿ ಬೀಡು ಬಿಟ್ಟಿದ್ದ ಶಿವಸೇನೆಯ ಬಂಡಾಯ ಶಾಸಕರು ಮುಂಬಯಿಗೆ ಮರಳಿದ್ದಾರೆ.
ನೂತನ ಮುಖ್ಯಮಂತ್ರಿ, ಶಿವಸೇನೆಯ ಬಂಡಾಯ ಬಣದ ನಾಯಕ ಏಕನಾಥ್ ಶಿಂಧೆ ಅವರೇ ಗೋವಾಗೆ ತೆರಳಿ ಬಂಡಾಯ ಶಾಸಕರನ್ನು ವಿಶೇಷ ವಿಮಾನದಲ್ಲಿ ಕರೆ ತಂದಿದ್ದಾರೆ. ಗೋವಾದಿಂದ ಶನಿವಾರ ರಾತ್ರಿ ೭.೧೦ಕ್ಕೆ ಹೊರಟ ವಿಮಾನ ೮.೩೦ ಕ್ಕೂ ಮೊದಲೇ ಮುಂಬಯಿ ತಲುಪಿದೆ.
ರಾಜ್ಯಪಾಲ ಕೋಶ್ಯಾರಿ ಅವರ ಸೂಚನೆಯಂತೆ ಜು.೩ ಮತ್ತು ೪ರಂದು ವಿಶೇಷ ಅಧಿವೇಶನ ನಡೆಯಲಿದ್ದು, ಭಾನುವಾರ ವಿಧಾನಸಭೆಯ ಸ್ಪೀಕರ್ ಆಯ್ಕೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಂಡಾಯ ಶಾಸಕರು ಮತ ಚಲಾಯಿಸುವುದು ಅವಶ್ಯವಾಗಿರುವುದರಿಂದ ಅವರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ.
ನೂತನ ಮುಖ್ಯಮಂತ್ರಿ ಶಿಂಧೆ ಜುಲೈ ೪ರ ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.
ಇದನ್ನೂ ಓದಿ| ಸಿಎಂ ಏಕನಾಥ ಶಿಂಧೆಯನ್ನು ಶಿವಸೇನೆಯ ಎಲ್ಲ ಹುದ್ದೆಗಳಿಂದ ವಜಾಗೊಳಿಸಿದ ಉದ್ಧವ್ ಠಾಕ್ರೆ