Site icon Vistara News

Maha politics: ಗುವಾಹಟಿಯಲ್ಲಿರುವುದು ʻಜೀವಂತ ಶವಗಳುʼ ಎಂದ ಸಂಜಯ್‌ ರಾವತ್‌, ಕೆಲವೆಡೆ ಪ್ರತಿಕೃತಿ ದಹನ!

Shindhe- sanjay raut

ಮುಂಬಯಿ: ಗುವಾಹಟಿಯಲ್ಲಿರುವ ೪೦ ರೆಬೆಲ್‌ ಶಾಸಕರು ʻಜೀವಂತ ಶವಗಳುʼ ಎಂಬ ಶಿವಸೇನಾ ಸಂಸದ ಸಂಜಯ್‌ ರಾವತ್‌ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಶಿವಸೇನೆಯ ಬಂಡಾಯ ಶಾಸಕರ ಗುಂಪಿನ ನಾಯಕ ಏಕನಾಥ್‌ ಶಿಂಧೆ ಅದಕ್ಕೆ ಬೇರೊಂದು ವ್ಯಾಖ್ಯಾನವನ್ನು ಕೊಟ್ಟಿದ್ದರೆ, ಇತ್ತ ಶಿಂಧೆ ಅಭಿಮಾನಿಗಳು ರಾವತ್‌ ಅವರ ಪ್ರತಿಕೃತಿ ಸುಟ್ಟು ಪ್ರತಿಭಟನೆ ಸಲ್ಲಿಸಿದ್ದಾರೆ.

ಸಂಜಯ್‌ ರಾವತ್‌ ಹೇಳಿದ್ದೇನು?
ಗುವಾಹಟಿಯಲ್ಲಿರುವ ೪೦ ಬಂಡಾಯ ಶಾಸಕರು ಜೀವಂತ ಮೃತದೇಹಗಳು. ಅವರ ಆತ್ಮ ಸತ್ತು ಹೋಗಿದೆ. ಅವರು ಇಲ್ಲಿಗೆ ಮರಳಿದ ಬಳಿಕ ಅವರ ದೇಹಗಳನ್ನು ನೇರವಾಗಿ ವಿಧಾನಸಭೆಗೆ ಪೋಸ್ಟ್‌ ಮಾರ್ಟಂಗೆ ಕಳುಹಿಸಲಾಗುವುದು. ಇಲ್ಲಿ ಹುಟ್ಟಿಕೊಂಡಿರುವ ಬೆಂಕಿಗೆ ಅವರೇನಾಗಿ ಹೋಗುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ.

ಇದನ್ನೂ ಓದಿ| Maha politics: ಸಂಜಯ್‌ ರಾವತ್‌ ಸೋದರನೇ ಶಿಂಧೆ ಬಣಕ್ಕೆ, ಆಗಲೇ ಗುವಾಹಟಿ ತಲುಪಿದ ಶಿಕ್ಷಣ ಸಚಿವ!

ಶಿಂಧೆ ಪ್ರತಿಕ್ರಿಯೆ ಏನು?
ಹಿಂದುತ್ವದ ಸಿದ್ಧಾಂತವನ್ನು ಪಾಲನೆ ಮಾಡಲು ಸಾಯಲೇಬೇಕು ಎಂದಾದರೆ ನಾವು ಸಾಯಲೂ ಸಿದ್ಧ. ಇದೇ ನಮ್ಮ ಭವಿಷ್ಯ ಎಂದು ಭಾವಿಸುತ್ತೇವೆ. ಮುಂಬಯಿ ಬಾಂಬ್‌ ಸ್ಪೋಟಕ್ಕೆ ಕಾರಣವಾದ ದಾವೂದ್‌ ಇಬ್ರಾಹಿಂನೊಂದಿಗೆ, ಮುಂಬಯಿಯ ಅಮಾಯಕ ಜನರ ಸಾವಿಗೆ ಕಾರಣರಾದ ವ್ಯಕ್ತಿಗಳ ಜತೆಗೆ ನೇರ ಸಂಬಂಧ ಹೊಂದಿರುವ ಜನರನ್ನು ಬಾಳ್‌ ಠಾಕ್ರೆಯವರ ಶಿವಸೇನೆ ಹೇಗೆ ಬೆಂಬಲಿಸೀತು ಹೇಳಿ.. ಹೀಗೆ ಬೆಂಬಲಿಸುವುದಕ್ಕಿಂತ ಸಾಯವುದೇ ಮೇಲು. ಅದಕ್ಕಾಗಿಯೇ ನಾವು ಇಂಥ ಹೆಜ್ಜೆಯನ್ನು ಇಟ್ಟಿದ್ದೇವೆ.

ಪ್ರತಿಕೃತಿ ದಹನ
ಬಂಡಾಯ ಶಾಸಕರು ಹೆಣಗಳು ಎಂದು ಹೀಯಾಳಿಸಿದ ಸಂಜಯ್‌ ರಾವತ್‌ ಅವರ ವಿರುದ್ಧ ಏಕನಾಥ್‌ ಶಿಂಧೆ ಅವರ ಊರಾದ ಠಾಣೆಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಶಿಂಧೆ ಬೆಂಬಲಿಗರು ರಾವತ್‌ ಅವರ ಪ್ರತಿಕೃತಿಗಳನ್ನು ಸುಟ್ಟು ಹಾಕಿ ಪ್ರತಿಭಟನೆ ಸಲ್ಲಿಸಿದರು.

Exit mobile version