ಮುಂಬೈ: ಆನ್‌ಲೈನ್ ಯುಗದಲ್ಲಿ ಮನುಷ್ಯನ ಕೆಲಸಗಳು ಎಷ್ಟು ಸುಲಭವಾಗಿಯೋ, ಅಷ್ಟೇ ಅಪಾಯಕಾರಿಯೂ ಆಗಿವೆ. ಸೈಬರ್ ಕ್ರೈಂ ಬಗ್ಗೆ ಎಷ್ಟೇ ಎಚ್ಚರವಾಗಿದ್ದರೂ, ಕಠಿಣ ಕಾನೂನುಗಳಿದ್ದರೂ ಸೈಬರ್ ಅಪರಾಧ ಮಾತ್ರ ನಿಂತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ ಮುಂಬೈನಲ್ಲಿ ಉದ್ಯಮಿಯೊಬ್ಬರ ಮೊಬೈಲ್ ಹ್ಯಾಕ್ (Mobile Hacking) ಮಾಡಿದ ದುಷ್ಕರ್ಮಿಗಳು 99.50 ಲಕ್ಷ ರೂಪಾಯಿಯನ್ನು ಲಪಟಾಯಿಸಿದ್ದಾರೆ.
“ಥಾಣೆ ನಗರದಲ್ಲಿರುವ ಉದ್ಯಮಿಯ ಮೊಬೈಲ್‌ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡುವ ಮೂಲಕ ನವೆಂಬರ್ 6 ಹಾಗೂ 7ರ ಅವಧಿಯಲ್ಲಿ ಉದ್ಯಮಿಯ ಬ್ಯಾಂಕ್ ಖಾತೆಯಿಂದ 99.50 ಲಕ್ಷ ರೂಪಾಯಿಯನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ” ಎಂದು ವ್ಯಾಗಲ್ ಎಸ್ಟೇಟ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾರತೀಯ ದಂಡ ಸಂಹಿತೆ (IPC) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಒಟಿಪಿ ಸೇರಿ ಹಲವು ಮಾಹಿತಿ ನೀಡಿದಾಗ ಆನ್‌ಲೈನ್‌ನಲ್ಲಿ ಸುಲಭವಾಗಿ ವಂಚಿಸಲಾಗುತ್ತದೆ. ಆದರೆ, ಉದ್ಯಮಿಯ ಮೊಬೈಲ್‌ಅನ್ನು ಹೇಗೆ ಹ್ಯಾಕ್ ಮಾಡಲಾಗಿದೆ ಎಂಬುದು ಇದುವರೆಗೆ ಗೊತ್ತಾಗಿಲ್ಲ.
ಇದನ್ನೂ ಓದಿ | Online fraud : ಆನ್‌ಲೈನ್ ವಂಚನೆ ಜಾಲಕ್ಕೆ ಪೊಲೀಸರ ಬಲೆ, 70 ಜನ ವಶಕ್ಕೆ