Site icon Vistara News

Private Vehicle Ban: ಆ್ಯಪ್ ಆಧಾರಿತ ಸಾರಿಗೆ ಸೇವೆಗೆ ಖಾಸಗಿ ವಾಹನ ನಿಷೇಧಿಸಿದ ಮಹಾರಾಷ್ಟ್ರ ಸರ್ಕಾರ

Car Pooling Ban In Maharashtra

ಮುಂಬೈ: ಖಾಸಗಿ (ವೈಯಕ್ತಿಕ ಕಾರಣಗಳಿಗಾಗಿ ಖರೀದಿಸಿದ ವಾಹನ) ವಾಹನಗಳನ್ನು (Private Vehicle Ban) ಆ್ಯಪ್ ಆಧಾರಿತ ಸಾರಿಗೆ ಸೇವೆಗೆ ನೀಡುವುದನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಾಗಿ ಖಾಸಗಿ ವಾಹನಗಳನ್ನು ಕಾರ್‌ ಪೂಲಿಂಗ್‌ಗೆ ನೀಡುವುದನ್ನು ನಿಷೇಧಿಸಲಾಗಿದೆ ಎಂಬುದಾಗಿ ರಾಜ್ಯ ಸರ್ಕಾರದ ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಇನ್ನು ಖಾಸಗಿ ವಾಹನಗಳನ್ನು ಆನ್‌ಲೈನ್‌ ಸಾರಿಗೆ ಸೇವೆಗೆ ಒದಗಿಸಲು ಆಗುವುದಿಲ್ಲ.

ರಾಜ್ಯ ಸರ್ಕಾರವು ಜನವರಿ 19ರಂದು ನಿರ್ಣಯ ತೆಗೆದುಕೊಂಡಿದ್ದು, ದ್ವಿಚಕ್ರ ವಾಹನ, ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ರೈಡ್‌ ಪೂಲಿಂಗ್‌ ಹಾಗೂ ಟ್ಯಾಕ್ಸಿ ಅಗ್ರಿಗೇಷನ್‌ ಮಾಡುವಂತಿಲ್ಲ ಎಂದು ಆದೇಶಿಸಲಾಗಿದೆ. ಪರವಾನಗಿ ಪಡೆಯದೆಯೇ ಸಾರಿಗೆ ಸೇವೆ ಒದಗಿಸಲು ಮುಂದಾಗಿದ್ದ ಬೈಕ್‌-ಟ್ಯಾಕ್ಸಿ ಅಗ್ರಿಗೇಟರ್‌ ರ‍್ಯಾಪಿಡೋ ಕಾರ್ಯನಿರ್ವಹಣೆಗೆ ಬಾಂಬೆ ಹೈಕೋರ್ಟ್‌ ನಿಷೇಧ ಹೇರಿದ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಮೊಬೈಲ್‌ ಆ್ಯಪ್ ಆಧಾರಿತ ಸಾರಿಗೆ ಸೇವೆಗೆ ಖಾಸಗಿ ವಾಹನಗಳನ್ನು ಒದಗಿಸುತ್ತಿರುವ, ಅದರಲ್ಲೂ ದ್ವಿಚಕ್ರ ವಾಹನಗಳನ್ನು ಒದಗಿಸುತ್ತಿರುವ ಪ್ರಕರಣಗಳು ಜಾಸ್ತಿಯಾಗಿದ್ದು, ಇದರಿಂದ ಪ್ರಯಾಣಿಕರ ಸುರಕ್ಷತೆಗೆ ಆತಂಕ ಎದುರಾಗಿದೆ. ಹಾಗಾಗಿ, ರಾಜ್ಯ ಸರ್ಕಾರವು ವೈಯಕ್ತಿಕ ಕಾರಣಗಳಿಗಾಗಿ ಖರೀದಿಸಿದ ವಾಹನಗಳನ್ನು ಕಾರ್‌ ಪೂಲಿಂಗ್‌ಗೆ ನೀಡದಂತೆ ಆದೇಶಿಸಿದೆ. ಪರವಾನಗಿ ಪಡೆದ ಹಾಗೂ ವಾಣಿಜ್ಯ ಬಳಕೆಗೆ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಸಾರಿಗೆ ಸೇವೆಗೆ ಅವಕಾಶವಿದೆ.

ಇದನ್ನೂ ಓದಿ: Ola auto service | ಸರ್ಕಾರ ನಿಗದಿಪಡಿಸಿದ ಆಟೋ ದರಕ್ಕೆ ಓಲಾ, ಉಬರ್‌ ಆಕ್ಷೇಪ: ಅಧಿಸೂಚನೆಗೆ ಕೋರ್ಟ್‌ ತಡೆ

Exit mobile version