Site icon Vistara News

Maharashtra News: ಸರಣಿ ಸಾವು ಕಂಡ ನಾಂದೇಡ್ ಆಸ್ಪತ್ರೆ ಡೀನ್‌ರಿಂದ ಶೌಚಾಲಯ ಸ್ವಚ್ಛಗೊಳಿಸಿದ್ದ ಎಂಪಿ ವಿರುದ್ಧ ಎಫ್ಐಆರ್!

Maharashtra News, FIR Against Shiv Sena MP Who made Dean to clean toilet

ಮುಂಬೈ: 48 ಗಂಟೆಯಲ್ಲಿ 31 ರೋಗಿಗಳ ಸಾವನ್ನು ಕಂಡ ನಾಂದೇಡ್ ಸರ್ಕಾರಿ ಆಸ್ಪತ್ರೆಯ (Nanded Government Hospital) ಡೀನ್ (Dean) ಅವರಿಂದ ಟಾಯ್ಲೆಟ್ ಕ್ಲೀನ್ (Toilet Clean) ಮಾಡಿಸಿದ್ದ ಶಿವಸೇನೆ(ಏಕನಾಥ ಶಿಂಧೆ ಬಣ) ಸಂಸದ ಹೇಮಂತ್ ಪಾಟೀಲ್ (Shiv Sen MP Hemant Patil) ವಿರುದ್ದ ಪ್ರಕರಣ ದಾಖಲಾಗಿದೆ(FIR Registered). ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಮಾನಹಾನಿ ಮಾಡಿದ ಆರೋಪದ ಮೇಲೆ ಆಸ್ಪತ್ರೆಯ ಹಂಗಾಮಿ ಡೀನ್ ಎಸ್‌ಆರ್ ವಾಕೋಡೆ ನೀಡಿದ ದೂರಿನ ಮೇರೆಗೆ ಪೊಲೀಸರು ಪಾಟೀಲ್ ವಿರುದ್ಧ ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ(Maharashtra News).

ನಾಂದೇಡ್ ಆಸ್ಪತ್ರೆಯ ಡೀನ್ ಅವರಿಂದ ಶೌಚಾಲಯ ಕ್ಲೀನ್ ಮಾಡಿಸಿದ ಸಂಸದ ಹೇಮಂತ್ ಪಾಟೀಲ್

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ ಶಿವ ಸೇನೆಯ ಸಂಸದ ಹೇಮಂತ್ ಪಾಟೀಲ್ ಅವರು ನಾಂದೇಡ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು, ಆಸ್ಪತ್ರೆಯ ಡೀನ್ ಎಸ್ ಆರ್ ವಾಕೋಡ್‌ಗೆ ಪೊರಕೆ ನೀಡಿದ ಕೊಳಕಾಗಿದ್ದ ಆಸ್ಪತ್ರೆಯ ಶೌಚಾಲಯ ಮತ್ತು ಮೂತ್ರಾಲಯದ ಗೋಡೆಗಳನ್ನು ಸ್ವಚ್ಛಗೊಳಿಸಿದ್ದರು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡೀನ್ ಎಸ್ ಆರ್ ವಾಕೋಡೆ ಅವರು, ಸಂಸದರಿಂದ ತಮಗೆ ಮಾನಹಾನಿಯಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕ ನೌಕರನ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಮಾನಹಾನಿ, ಕ್ರಿಮಿನಲ್ ಬೆದರಿಕೆ, ಹಲ್ಲೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ದೌರ್ಜನ್ಯಗಳ ಅಡಿ ಸಂಸದ ಹೇಮಂತ್ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ.

ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 48 ಗಂಟೆಗಳ ಅವಧಿಯಲ್ಲಿ 12 ನವಜಾತ ಶಿಶುಗಳು ಸೇರಿದಂತೆ 31 ರೋಗಿಗಳು ಮೃತಪಟ್ಟಿದ್ದರು. ಅಲ್ಲದೇ ಇನ್ನೂ 70 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರು. ರೋಗಿಗಳ ದಿಢೀರ್ ಸಾವಿನಿಂದಾಗಿ ನಾಂದೇಡ್ ಆಸ್ಪತ್ರೆ ಸುದ್ದಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಅವರಿಗಿಂತ ಮುಂಚೆ ಹಾಸ್ಪಿಟಲ್‌ಗೆ ಆಗಮಿಸಿ ಪರಿಶೀಲನೆ ನಡೆಸಿದ್ದ ಸಂಸದ ಹೇಮಂತ್ ಪಾಟೀಲ್, ಕೊಳಕಾದ ಶೌಚಾಲಯಗಳು ಹಾಗೂ ಮೂತ್ರಿಗಳನ್ನು ಕಂಡು ಕಿಡಿ ಕಾರಿದ್ದರು. ಅಲ್ಲದೇ, ಡೀನ್ ಅವರಿಂದಲೇ ಸ್ವಚ್ಛಗೊಳಿಸುವ ಪ್ರಯತ್ನ ಮಾಡಿದ್ದರು.

ಸಂಭಾಜಿ ನಗರದ ಆಸ್ಪತ್ರೆಯಲ್ಲೂ ರೋಗಿಗಳ ಸಾವು

ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದ (Maharashtra) ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ರೋಗಿಗಳ ಸಾವು ವರದಿಯಾಗುತ್ತಿರುವ ಬೆನ್ನಲ್ಲೇ ಸಂಭಾಜಿನಗರದ ಘಾಟಿ ಆಸ್ಪತ್ರೆಯಲ್ಲಿ (Ghati Hospital) 24 ಗಂಟೆಯಲ್ಲಿ 10ಕ್ಕಿಂತ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ. ಈ ಹಿಂದೆ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ (Nanded Government hospital) 48 ಗಂಟೆಯಲ್ಲಿ ಶಿಶುಗಳು ಸೇರಿದಂತೆ 34 ರೋಗಿಗಳು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ತನಿಖೆಗೆ ಸಮಿತಿಯನ್ನು (Probe Committee) ರಚಿಸುವುದಾಗಿ ಘೋಷಣೆ ಮಾಡಿದೆ(Maharashtra News).

ಈ ಸುದ್ದಿಯನ್ನೂ ಓದಿ: Maharashtra: ಔಷಧ ಕೊರತೆ, ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶುಗಳು ಸೇರಿ 24 ರೋಗಿಗಳ ಸಾವು!

ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಜರಗುತ್ತಿರುವ ಘಟನೆಗಳು ಭಯಾನಕವಾಗಿವೆ. ಅದೇ ರೀತಿ ಘಾಟಿ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ 8 ರೋಗಿಗಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ನಾಂದೇಡ್ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಮೃತಪಟ್ಟಿದ್ದಾರೆಂಬ ವರ್ತಮಾನವಿದೆ. ಇದೆಲ್ಲವೂ ಭಯಾನಕವಾಗಿದೆ ಎಂದು ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಅವರು ಟ್ವೀಟ್ ಮಾಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version