ಮುಂಬಯಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಂಡಾಯ ತೀವ್ರಗೊಂಡು ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಪತನದ ಅಂಚಿಗೆ ತಲುಪುತ್ತಿರುವ ನಡುವೆಯೇ ಕೋವಿಡ್ ಕೂಡಾ ತನ್ನ ಆಟವನ್ನು ಮುಂದುವರಿಸಿದೆ. ಬೆಳಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಮಾಹಿತಿ ಬಂದರೆ ಮಧ್ಯಾಹ್ನದ ಹೊತ್ತಿಗೆ ಸಿಎಂ ಉದ್ಧವ ಠಾಕ್ರೆ ಕೂಡಾ ಸೋಂಕಿಗೆ ಒಳಗಾಗಿದ್ದಾರೆ.
ಉದ್ಧವ್ ಠಾಕ್ರೆ ಅವರಿಗೆ ಕೋವಿಡ್ ಬಂದಿರುವ ಮಾಹಿತಿಯನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಳೆ ಬಹಿರಂಗಪಡಿಸಿದ್ದಾರೆ. ಇದರ ನಡುವೆಯೇ ಉದ್ಧವ್ ಠಾಕ್ರೆ ಅವರು ಮಹತ್ವದ ಸಂಪುಟ ಸಭೆಯನ್ನು ಕರೆದಿದ್ದಾರೆ.
ಆನ್‌ಲೈನ್‌ನಲ್ಲಿ ಈ ಸಭೆಯನ್ನು ನಡೆಸುತ್ತಿರುವ ಉದ್ಧವ ಠಾಕ್ರೆ ಅವರು ಸಭೆಯ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡಿದೆ. ಶಿವಸೇನಾ ಮುಖ್ಯಸ್ಥ ಸಂಜಯ್ ರಾವುತ್ ಅವರು ಈಗಾಗಲೇ ಈ ಸಾಧ್ಯತೆಯ ಬಗ್ಗೆ ಗಮನ ಸೆಳೆದಿದ್ದಾರೆ.
ಒಂದೊಮ್ಮೆ ಉದ್ಧವ ಠಾಕ್ರೆ ರಾಜೀನಾಮೆ ನೀಡಿದರೆ ಅದನ್ನು ರಾಜ್ಯಪಾಲರಿಗೆ ಹೇಗೆ ತಲುಪಿಸುತ್ತಾರೆ. ಆಸ್ಪತ್ರೆಗೂ ಕಳುಹಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ | ಮಹಾರಾಷ್ಟ್ರ ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಶಿವಸೇನೆ ಸಂಸದ ಸಂಜಯ್ ರಾವತ್ !