ಮುಂಬಯಿ: ಒಂದು ಕಡೆ ಮಹಾರಾಷ್ಟ್ರ ಸರಕಾರ ಅಸ್ಥಿರತೆಯ ಅಂತಿಮ ಘಟ್ಟದತ್ತ (maharashtra politics) ಸಾಗುತ್ತಿದ್ದಂತೆಯೇ ಇತ್ತ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ಅವರನ್ನು ಚಿಕಿತ್ಸೆಗಾಗಿ ಮುಂಬಯಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಸೋಂಕು ಹರಡಲು ಶುರುವಾದಂದಿನಿಂದಲೂ ನಿರಂತರವಾಗಿ ಮಾಸ್ಕ್ ಧರಿಸುತ್ತಾ, ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇದ್ದರು ಕೋಶ್ಯಾರಿ. ಇದೀಗ ಅವರಿಗೆ ಸೋಂಕು ತಗುಲಿದೆ.
ಕೋಶ್ಯಾರಿ ಅವರು ಇನ್ನು ಕೆಲವು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಿರುವುದರಿಂದ ಮಹಾರಾಷ್ಟ್ರ ರಾಜಕಾರಣದ ಚಟುವಟಿಕೆಗಳು ಸ್ವಲ್ಪ ನಿಧಾನವಾಗಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ. ಏಕನಾಥ ಶಿಂಧೆ ಅವರ ಬಂಡಾಯದಿಂದ ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಯಾಗಿರುವುದರಿಂದ ಮಹಾ ವಿಕಾಸ ಅಘಾಡಿ ಸರಕಾರ ಪತನದ ಭೀತಿ ಎದುರಾಗಿದೆ. ಬಿಜೆಪಿ ಹೊಸ ಸರಕಾರ ರಚನೆಗೆ ಯಾವುದೇ ಕ್ಷಣ ಹಕ್ಕು ಮಂಡಿಸುವ ಮನೋಸ್ಥಿತಿಯಲ್ಲಿದೆ. ಅದು ಈಗ ನಿಧಾನವಾಗಬಹುದು.
ಇದನ್ನೂ ಓದಿ| ಮಹಾರಾಷ್ಟ್ರ ರಾಜಕೀಯದಲ್ಲಿ ಮುಂದೇನಾಗಬಹುದು? ಸದನದಲ್ಲಿ ಬಲಾಬಲ ಏನು?