Site icon Vistara News

School Timings: ಚಿಕ್ಕಮಕ್ಕಳು ಚೆನ್ನಾಗಿ ನಿದ್ದೆ ಮಾಡಲೆಂದು ಶಾಲಾ ಸಮಯ ಬದಲಿಸಲು ಹೊರಟ ಸರ್ಕಾರ!

Maharashtra proposed to change School timings to ensure children get enough sleep

ಮುಂಬೈ: ಚಿಕ್ಕ ಮಕ್ಕಳನ್ನು (School Children) ಬೆಳಗ್ಗೆ ಬೇಗ ಎಬ್ಬಿಸಿ ಸ್ಕೂಲ್‌ಗೆ ಕಳುಹಿಸುವುದೇ ಪೋಷಕರಿಗೆ ಭಾರೀ ತ್ರಾಸದಾಯಕ ಕೆಲಸ. ಯಾಕೆಂದರೆ, ಪುಟ್ಟ ಮಕ್ಕಳು ನಿದ್ರೆಯಿಂದ ಎದ್ದೇಳಲು ಹಿಂದೇಟು ಹಾಕುತ್ತೇವೆ. ಅನಿವಾರ್ಯವಾಗಿ ಮಕ್ಕಳನ್ನು ಅರೆನಿದ್ರೆ ಮಾಡಿಸಿ, ಸ್ಕೂಲ್‌ಗೆ ಕಳುಹಿಸಲೇಬೇಕಾಗುತ್ತದೆ. ಮಹಾರಾಷ್ಟ್ರ ಸರ್ಕಾರವು (Maharashtra Government) ಈ ಸಮಸ್ಯೆಗೆ ಮುಕ್ತಿ ಹಾಡಲು ಹೊರಟಿದೆ. ಮಕ್ಕಳಿಗೆ ಸಾಕಷ್ಟು ನಿದ್ರೆಗೆ ಅವಕಾಶ (children get enough sleep) ದೊರೆಯುವಂತೆ ಶಾಲಾ ಸಮಯವನ್ನು ಪರಿಷ್ಕರಣೆ (School Timings) ಮಾಡಲಿದೆ. ಎರಡನೇ ತರಗತಿಯವರೆಗಿನ ಶಾಲಾ ಸಮಯವನ್ನು ಬೆಳಗ್ಗೆ 9 ಗಂಟೆಗೆ ಆರಂಭಿಸುವ ಯೋಜನೆಯನ್ನು ಹಾಕಿಕೊಡಿದೆ.

ಶಾಲಾ ಸಮಯದ ಪರಿಷ್ಕರಣೆ ಸಂಬಂಧ ಮಹಾರಾಷ್ಟ್ರ ಸರ್ಕಾರವು ತಜ್ಞರ ಸಮಿತಿಯನ್ನು ನೇಮಿಸಿದ್ದು, ಅದು ನೀಡುವ ಶಿಫಾರಸುಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಿದೆ. ಶಾಲಾ ಸಮಯವನ್ನು ಪರಿಷ್ಕರಣೆ ಮಾಡುವುದರಿಂದ ಮಕ್ಕಳಿಗೆ ನಿದ್ದೆ ಮಾಡಲು ಸಾಕಷ್ಟು ಸಮಯ ದೊರೆಯಲಿದೆ ಮತ್ತು ಅವರಿಗೆ ಬೇಗ ಮಲಗಲು ಪೋಷಕರು ಒತ್ತಾಯಿಸುವುದನ್ನು ತಪ್ಪಿಸಲು ಇದು ನೆರವಾಗುತ್ತದೆ.

ಮಹಾರಾಷ್ಟ್ರ ಶಾಲಾ ಶಿಕ್ಷಣ ಸಚಿವ ದೀಪ್ ಕೇಸರ್ಕರ್ ಅವರು, ಸಮಿತಿ ನೀಡುವ ಶಿಫಾರಸುಗಳನ್ನಾಧರಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಹೊಸ ಪರಿಷ್ಕೃತ ಶಾಲಾ ಸಮಯವು ಜಾರಿಗೆ ಬರಬಹುದು. ಮಹಾರಾಷ್ಟ್ರದಲ್ಲಿ ಸದ್ಯಕ್ಕೆ ಬೆಳಗ್ಗೆ ಏಳು ಗಂಟೆಗೆ ಶಾಲೆಗಳು ಆರಂಭವಾಗುತ್ತವೆ. ಅದರ ಬದಲಾಗಿ ಬೆಳಗ್ಗೆ 9 ಗಂಟೆಗೆ ಶಾಲೆಗಳನ್ನು ಆರಂಭಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ವಿಶ್ರಾಂತಿ ದೊರೆಯಲಿದೆ. ಈ ನಿಯಮವನ್ನು ರಾಜ್ಯದ ಎಲ್ಲ ಶಾಲೆಗಳಿಗೆ ಅನ್ವಯವಾಗಲಿದೆ. ಇದಕ್ಕೂ ಮೊದಲು ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್ ಅವರು ಶಾಲಾ ಸಮಯ ಪರಿಷ್ಕರಣೆ ಸೂಚಿಸಿದ್ದರು.

ನರ್ಸರಿ, ಜೂನಿಯರ್ ಕಿಂಡರ್‌ಗಾರ್ಟನ್, ಸಿನಿಯರ್ ಕಿಂಡರ್‌ಗಾರ್ಟನ್, 1 ಮತ್ತು ಎರಡನೇ ತರಗತಿಗಳಿಗೆ ಪರಿಷ್ಕೃತ ಶಾಲಾ ಸಮಯವು ಅನ್ವಯವಾಗಲಿದೆ. ವಿದ್ಯಾರ್ಥಿಗಳು ಅತಿಯಾಗಿ ಬೇಗನೆ ಎಚ್ಚರಗೊಳ್ಳುವ ಅನಿವಾರ್ಯತೆಯನ್ನು ನಿವಾರಿಸುವುದು ಮತ್ತು ಅವರು ಸಾಕಷ್ಟು ನಿದ್ರೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದೆ. ಇದನ್ನು ಸಾಧಿಸಲು ನಾವು ಪರಿಣಿತ ಶಿಶುವೈದ್ಯರ ಸಮಿತಿಯನ್ನು ರಚಿಸಿದ್ದೇವೆ, ಅವರು ಅಗತ್ಯ ಕ್ರಮಗಳನ್ನು ಪ್ರಸ್ತಾಪಿಸುತ್ತಾರೆ ಮಹಾರಾಷ್ಟ್ರ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಅವರು ಹೇಳಿದ್ದಾರೆ.

ಈ ಮಧ್ಯೆ, ಹರ್ಯಾಣದಲ್ಲೂ ಇದೇ ರೀತಿಯಲ್ಲಿ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹೊಸ ಶಾಲಾ ವೇಳಾಪಟ್ಟಿಯು ನವೆಂಬರ್ 15ರಿಂದಲೇ ಜಾರಿಗೆ ಬಂದಿದೆ. ಹರ್ಯಾಣದಲ್ಲಿ ಎಲ್ಲ ಸಿಂಗಲ್ ಶಿಫ್ಟ್ ಶಾಲೆಗಳು ಹೊಸ ವೇಳಾಪಟ್ಟಿಯಂತೆ ಕಾರ್ನನಿರ್ಹಿಸಲಿವೆ. ಅಂದರೆ, ಬೆಳಗ್ಗೆ 9.30 ಗಂಟೆ ಶುರುವಾಗಿ ಮಧ್ಯಾಹ್ನ 3.30ಕ್ಕೆ ಮುಕ್ತಾಯವಾಗಲಿವೆ.

ಹಾಗಿದ್ದೂ, ರಾಜ್ಯದ ಡಬಲ್-ಶಿಫ್ಟ್ ಶಾಲೆಗಳಿಗೆ ಎರಡು ಅವಧಿಗಳು ಇರುತ್ತವೆ. ಮೊದಲನೆಯದು ಬೆಳಿಗ್ಗೆ 7:55 ರಿಂದ ಮಧ್ಯಾಹ್ನ 12:30 ರವರೆಗೆ ಮತ್ತು ಎರಡನೆಯದು ಮಧ್ಯಾಹ್ನ 12:40 ರಿಂದ ಸಂಜೆ 5:15 ರವರೆಗೆ. ಹರಿಯಾಣ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳಿಗೆ ಪತ್ರ ಬರೆದು ನೀತಿಯನ್ನು ಜಾರಿಗೆ ತರುವಂತೆ ಸೂಚಿಸಿದೆ.

ಈ ಸುದ್ದಿಯನ್ನೂ ಓದಿ: Education Department: ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಗೆ ನೂತನ ವೆಬ್‌ಸೈಟ್

Exit mobile version