ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಲವ್ ಜಿಹಾದ್ (Love Jihad) ಅನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದೆ. ʼಹಿಂದೂ ಜನ ಆಕ್ರೋಶ ಮೋರ್ಚಾʼ ಹೆಸರಿನಲ್ಲಿ ಪ್ರತಿಭಟನೆ ನಡೆದಿದ್ದು, ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನು ರಚನೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಇದನ್ನೂ ಓದಿ: BBC Documentary: ಬಿಬಿಸಿ ಹಿಂದು ವಿರೋಧಿ, ಮೋದಿ ವಿರೋಧಿ ಎಂದು ಆಪಾದಿಸಿ ಬ್ರಿಟನ್‌ನಾದ್ಯಂತ ಭಾರತೀಯರ ಪ್ರತಿಭಟನೆ
ಸಕಲ್ ಹಿಂದೂ ಸಮಾಜ್ ಸಂಘಟನೆಯು ಈ ಪ್ರತಿಭಟನೆಯನ್ನು ನಡೆಸಿದೆ. ಸೆಂಟ್ರಲ್ ಮುಂಬೈನ ದಾದರ್‌ನಲ್ಲಿರುವ ಶಿವಾಜಿ ಪಾರ್ಕ್‌ನಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯು ಪರೇಲ್‌ನಲ್ಲಿರುವ ಕಾಮ್ಗರ್ ಮೈದಾನದಲ್ಲಿ ಕೊನೆಗೊಂಡಿತು. ನಾಲ್ಕು ಕಿ.ಮೀ.ನಷ್ಟು ದೂರ ನಡೆದ ಈ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಮಹಿಳೆಯರೂ ಕೂಡ ಪಾಲ್ಗೊಂಡಿದ್ದರು. ಕೇಸರಿ ಬಣ್ಣದ ಶಾಲು ಹಾಗೂ ಧ್ವಜಗಳನ್ನು ಹೊತ್ತು ಲವ್ ಜಿಹಾದ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಲಾಗಿದೆ.
ಹಿಂದೂ ಪರ ಸಂಘಟನೆಗಳಾದ ಬಜರಂಗ ದಳ, ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರೂ ಕೂಡ ಈ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಸ್ನೇಹ ಬಳಗದಲ್ಲಿರುವ ಹಲವು ಬಿಜೆಪಿ ನಾಯಕರೂ ಸಹ ಪ್ರತಿಭಟನೆಯಲ್ಲಿ ಇದ್ದದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: Mood of the Nation | ಲವ್ ಜಿಹಾದ್ ಮುಸ್ಲಿಂ ಗಂಡಸರ ಗುಪ್ತ ಕಾರ್ಯಸೂಚಿ ಎಂದಿದೆ ಇಂಡಿಯಾ ಟುಡೆ ಸಮೀಕ್ಷೆ
ಈ ಹಿಂದೆ ಸಕಲ್ ಹಿಂದೂ ಸಮಾಜ್ ಸಂಘಟನೆಯು ಜ.22ರಂದು ಪುಣೆಯಲ್ಲಿ ಪ್ರತಿಭಟನೆ ನಡೆಸಿತ್ತು. ಲವ್ ಜಿಹಾದ್, ಅಕ್ರಮ ಮತಾಂತರ, ಗೋ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಢ್ನವಿಸ್ ಅವರು ಕಳೆದ ಡಿಸೆಂಬರ್‌ನಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ತೆಗೆದುಕೊಂಡಿರುವ ಕ್ರಮವನ್ನು ಪರಿಶೀಲಿಸಿ ರಾಜ್ಯದಲ್ಲಿ ಕಾನೂನು ನಿರ್ಮಾಣ ಮಾಡುವುದಾಗಿ ಹೇಳಿದ್ದರು.