ಮುಂಬಯಿ: ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭಗೊಂಡಿದೆ. ಎರಡು ದಿನಗಳ ಈ ಅಧಿವೇಶನದಲ್ಲಿ ಮೊದಲಿಗೆ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಹೊಸ ಸರಕಾರ ರಚನೆಯಾದ ಬಳಿಕ ಇಂದು ಮೊದಲ ಸವಾಲನ್ನು ಎದುರಿಸುತ್ತಿದೆ. ಇದನ್ನು ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ನಡುವಿನ ಮೊದಲ ಸುತ್ತಿನ ಕದನ ಎಂದೇ ಬಣ್ಣಿಸಲಾಗುತ್ತಿದೆ.
ರಾಜ್ಯಪಾಲ ಕೋಶ್ಯಾರಿ ಅವರ ಸೂಚನೆಯಂತೆ ಇಂದು ಮತ್ತು ನಾಳೆ (ಜು.೩-೪) ವಿಧಾನಸಭೆಯ ವಿಶೇಷ ಅಧಿವೇಶನ ನಡೆಡೆಯುತ್ತಿದೆ. ನಾಳೆ ಅಂದರೆ ಸೋಮವಾರ ನೂತನ ಮುಖ್ಯಮಂತ್ರಿ ಶಿಂಧೆ ವಿಶ್ವಾಸಮತ ಯಾಚಿಸಲಿದ್ದಾರೆ. ಇದಕ್ಕೂ ಮೊದಲು ಸ್ಪೀಕರ್ ಆಯ್ಕೆ ನಡೆಸಲಾಗುತ್ತದೆ.
ಅತ್ಯಂತ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶಿವಸೇನೆಯ ಬಂಡಾಯ ಶಾಸಕರನ್ನು ವಿಧಾನಭವನಕ್ಕೆ ಕರೆತರಲಾಗಿದೆ. ಮೊದಲಿಗೆ ಇತೀಚೆಗೆ ಆಯ್ಕೆಯಾದ ಶಾಸಕರನ್ನು ಸಭೆಗೆ ಪರಿಚಯಿಸಲಾಗಿದೆ.
ಇದನ್ನೂ ಓದಿ| Maha politics | ಸ್ಪೀಕರ್ ಆಯ್ಕೆಗಾಗಿ ಇಂದು ಚುನಾವಣೆ; ಬಿಜೆಪಿ-ಉದ್ಧವ್ ನಡುವೆ ಮೊದಲ ಸುತ್ತಿನ ಕದನ