ಬೆಂಗಳೂರು: ಇಂದು ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಪಿತ ಮಹಾತ್ಮಾ ಗಾಂಧಿ (Mahatma Gandhi Death Anniversary) ಅವರ ಪುಣ್ಯತಿಥಿ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತೆತ್ತ ಗಾಂಧಿ ಅವರ ಬದುಕು ಪ್ರತಿಯೊಬ್ಬರಿಗೂ ಆದರ್ಶವೇ. ಬ್ರಿಟಿಷರ ಗುಲಾಮರಂತೆ ಬದುಕದೆ ಸ್ವದೇಶ, ಸ್ವಾಭಿಮಾನಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಸೇನಾನಿಯ ಬದುಕಿನ ನುಡಿಮುತ್ತುಗಳನ್ನು ನಾವಿಲ್ಲಿ ಮೆಲುಕು ಹಾಕೋಣ.
ಇದನ್ನೂ ಓದಿ: Video | ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ; ಮಹಾನ್ ನಾಯಕರಿಗೆ ಪ್ರಧಾನಿ ಮೋದಿ ಗೌರವ ನಮನ
- ನನ್ನನ್ನು ಸಂಕೋಲೆಯಲ್ಲಿ ಬಂಧಿಸಿಡಬಹುದು, ಹಿಂಸಿಸಬಹುದು, ಅಷ್ಟೆ ಯಾಕೆ ನನ್ನ ಈ ದೇಹವನ್ನು ನಾಶಪಡಿಸಬಹುದು. ಆದರೆ, ಯಾವತ್ತಿಗೂ ನನ್ನ ಆತ್ಮಬಲವನ್ನು ಬಂಧಿಸಿಡಲಾಗದು.
- ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸುವುದಿಲ್ಲ.
- ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು.
- ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲಾಗದು. ಅದು ಜೀವನದು ಉಸಿರು.
- ನಿಮ್ಮನ್ನು ಹುಡುಕುವ ಅತ್ಯುತ್ತಮ ಮಾರ್ಗವೆಂದರೆ ಅದು ಇತರರ ಸೇವೆಯನ್ನು ಮಾಡುವುದೇ ಆಗಿದೆ.
- ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ.
- ನಾಳೆಯೇ ನೀವು ಸಾಯುತ್ತೀರಿ ಎಂದುಕೊಂಡೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ.
- ದುರ್ಬಲರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ. ಕ್ಷಮೆಯು ಬಲಶಾಲಿಗಳ ಲಕ್ಷಣ.
- ಶಕ್ತಿ ದೈಹಿಕ ಸಾಮರ್ಥ್ಯದಿಂದ ಬರುವುದಿಲ್ಲ. ಇದು ಅದಮ್ಯ ಇಚ್ಛೆಯಿಂದ ಬರುತ್ತದೆ.
- ಪ್ರಾಮಾಣಿಕ ಭಿನ್ನಾಭಿಪ್ರಾಯವು ಸಾಮಾನ್ಯವಾಗಿ ಪ್ರಗತಿಯ ಉತ್ತಮ ಸಂಕೇತವಾಗಿದೆ.
- ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರ ಎನ್ನುವವರು ನಿಶ್ಚಿತವಾಗಿಯೂ ಬೌದ್ಧಿಕ ದಾರಿದ್ರ್ಯವನ್ನು ಅನುಭವಿಸುತ್ತಿರುತ್ತಾರೆ. ಅದು ವಿಷವರ್ತುಲದ ಆರಂಭವಷ್ಟೆ.
- ಕೋಪವು ಅಹಿಂಸೆಯ ಶತ್ರು ಮತ್ತು ಹೆಮ್ಮೆಯು ಅದನ್ನು ನುಂಗುವ ದೈತ್ಯ.
- ಜಗತ್ತಿನಲ್ಲಿರುವ ಎಲ್ಲ ಧರ್ಮಗಳ ಮೂಲ ಸತ್ಯವನ್ನು ನಾನು ನಂಬುತ್ತೇನೆ.
- ಅಹಿಂಸೆಗೆ ಎರಡು ನಂಬಿಕೆಗಳು ಬೇಕಾಗುತ್ತದೆ. ದೇವರ ಮೇಲೆ ನಂಬಿಕೆ ಇದ್ದಂತೆಯೇ ಮನುಷ್ಯನ ಮೇಲೆಯೂ ವಿಶ್ವಾಸ ಇರಬೇಕು.
- ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವನ್ನು ಒಳಗೊಂಡಿರದಿದ್ದರೆ ಸ್ವಾತಂತ್ರ್ಯವು ಯೋಗ್ಯವಾಗಿರುವುದಿಲ್ಲ.
- ನೀವು ಎದುರಾಳಿಯನ್ನು ಎದುರಿಸಿದಾಗಲೆಲ್ಲಾ ಅವನನ್ನು ಪ್ರೀತಿಯಿಂದ ಜಯಿಸಿ.
- ಭೂಮಿ ನಮ್ಮ ಬಯಕೆಗಳನ್ನು ಪೂರೈಸಬಲ್ಲದು. ಆದರೆ ದುರಾಸೆಗಳನ್ನಲ್ಲ.
- ಅಸಹಿಷ್ಣುತೆಯು ಹಿಂಸೆಯ ಒಂದು ರೂಪ ಮತ್ತು ನಿಜವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅದು ಅಡ್ಡಿಯಾಗಿರುತ್ತದೆ.
- ಅವರು ಮೊದಲು ನಿಮ್ಮನ್ನು ನಿರ್ಲಕ್ಷಿಸುತ್ತಾರೆ, ನಂತರ ನಿಮ್ಮನ್ನು ನೋಡಿ ನಗುತ್ತಾರೆ, ಬಳಿಕ ನಿಮ್ಮೊಂದಿಗೆ ಸಂಘರ್ಷಕ್ಕಿಳಿಯುತ್ತಾರೆ, ಆಗ ನೀವು ಗೆದ್ದಂತೆ.
ಇದನ್ನೂ ಓದಿ: Mahatma Gandhi | ಬೆಳ್ಳಿ ಪರದೆಯಲ್ಲಿ ಕಂಡ ಮಹಾತ್ಮ ಗಾಂಧಿ; ಬಾಪುವನ್ನು ಚಿತ್ರಿಸಿದ ಜನಪ್ರಿಯ ಚಲನಚಿತ್ರಗಳಿವು