Site icon Vistara News

Mahender Pratap Singh: ಪುಲ್ವಾಮಾ ದಾಳಿ ಪಾಕ್‌ ಕುಕೃತ್ಯ ಅಲ್ವಂತೆ; ನಾಲಿಗೆ ಹರಿಬಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

Mahender Pratap Singh

ಹರಿಯಾಣ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ವಿವಾದಗಳ ಸ್ವರೂಪ ಪಡೆಯುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಅದರಲ್ಲೂ ಕಾಂಗ್ರೆಸ್‌ ದಿನಕ್ಕೊಬ್ಬ ನಾಯಕರಂತೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನಾಯಕ ವಿಜಯ್‌ ನಾಮದೇವರಾವ್ ವಡೆತ್ತಿವಾರ್‌ (Vijay Namdevrao Wadettiwar) ಅವರು ಉಗ್ರ ಅಜ್ಮಲ್‌ ಕಸಬ್‌ (Ajmal Kasab) ಪರವಾಗಿ ಮಾತನಾಡಿರುವ ಬೆನ್ನಲ್ಲೇ ಮತ್ತೊರ್ವ ಕಾಂಗ್ರೆಸ್‌ ನಾಯಕ ಪುಲ್ವಮಾ ದಾಳಿ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ. ಹರಿಯಾಣದ ಫರಿದಾಬಾದ್‌ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಮಹೇಂದರ್‌ ಪ್ರತಾಪ್‌ ಸಿಂಗ್‌(Mahender Pratap Singh) 2019ರಲ್ಲಿ ನಡೆದ ಪುಲ್ವಾಮಾ ದಾಳಿ(Pulwama attack) ಪಾಕಿಸ್ತಾನ ನಡೆಸಿರುವುದಲ್ಲ, ಬದಲಿಗೆ ಭಾರತ ಸರ್ಕಾರ ನಡೆಸಿರುವುದು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿದ್ದಾರೆ.

ಮಹೇಂದರ್‌ ಪ್ರತಾಪ್‌ ಸಿಂಗ್‌ ಹೇಳಿದ್ದೇನು?

ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಹೇಂದರ್‌ ಪ್ರತಾಪ್‌ ಸಿಂಗ್‌, ಪುಲ್ವಾಮಾ ದಾಳಿಯ ರಹಸ್ಯ ಈ ಬಯಲಾಗಿದೆ. ಬಹುದೊಡ್ಡ ದಾಳಿಯ ಸೂಚನೆ ಇರುವುದರಿಂದ ನಮ್ಮ ಯೋಧರು ರಸ್ತೆ ಮೂಲಕ ಬರುವುದು ಅಷ್ಟೊಂದು ಸುರಕ್ಷಿತ ಅಲ್ಲ. ಅವರನ್ನು ಏರ್‌ಲಿಫ್ಟ್‌ ಮಾಡುವ ಎಂದುಪ್ರಧಾನಿಗೆ ಮೊದಲೇ ಮನವಿ ಮಾಡಿದ್ದೆ ಎಂದು ಅವರದ್ದೇ ರಾಜ್ಯಪಾಲ ಸತ್ಯಪಾಲ್‌ ಮಲ್ಲಿಕ್‌ ಈ ಹಿಂದೆಯೇ ಹೇಳಿದ್ದರು. ಹೀಗಾಗಿ ಅದು ಒಂದು ಬಿಜೆಪಿಯ ರಾಜಕೀಯ ಪಿತೂರಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಅದು ಎರಡನೇ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ನಡೆಸಿದ ಚುನಾವಣಾ ಸ್ಟಂಟ್‌. ಇದೀಗ ಅವರು ಮೂರನೇ ಬಾರಿ ಗೆಲುವಿಗೆ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ಮುಖಂಡ ವಿಷ್ಣುವರ್ಧನ್‌ ರೆಡ್ಡಿ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದು, ಪುಲ್ವಾಮಾ ದಾಳಿಯಲ್ಲಿ ಭಾರತ 40ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದೆ. ಇಡೀ ದೇಶವೇ ಪಾಕಿಸ್ತಾನದ ಕುತಂತ್ರದ ಬಗ್ಗೆ ಕೆಂಡ ಕಾರುತ್ತಿದೆ. ಆದರೆ ಲಜ್ಜೆಗೆಟ್ಟ ಕಾಂಗ್ರೆಸ್‌ ಮಾತ್ರ ಪಾಕಿಸ್ತಾನಕ್ಕೆ ಕ್ಲೀನ್‌ ಚಿನ್‌ ನೀಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:Prajwal Revanna Case: ಎಸ್‌ಐಟಿ ಮೇಲೆ ಕೇಸ್‌ ಹಾಕ್ತೇನೆ, ಶೀಘ್ರವೇ ಪೆನ್‌ಡ್ರೈವ್‌ ಪ್ರೊಡ್ಯುಸರ್‌ ಹೆಸರು ಹೇಳ್ತೇನೆ ಎಂದ ದೇವರಾಜೇಗೌಡ

ಕೆಲ ದಿನಗಳ ಹಿಂದೆ ಪೂಂಚ್‌ನಲ್ಲಿ ನಡೆದಿದ್ದ ಉಗ್ರರ ದಾಳಿಯನ್ನು ಕಾಂಗ್ರೆಸ್‌ ಮುಖಂಡ ಚರಣ್‌ಪ್ರಿತ್‌ ಚನ್ನಿ ಬಿಜೆಪಿಯ ಚುನಾವಣಾ ಸ್ಟಂಟ್‌ ಎಂದು ಕರೆಯುವ ಮೂಲಕ ವಿವಾದಕ್ಕೀಡಾಗಿದ್ದರು. ಇದಾದ ಬಳಿಕ ಮಹಾರಾಷ್ಟ್ರ ಪ್ರತಿಪಕ್ಷದ ನಾಯಕರೂ ಆಗಿರುವ ಕಾಂಗ್ರೆಸ್‌ ನಾಯಕ ವಿಜಯ್‌ ನಾಮದೇವರಾವ್ ವಡೆತ್ತಿವಾರ್‌ ಅವರು ಉಗ್ರ ಅಜ್ಮಲ್‌ ಕಸಬ್‌ (Ajmal Kasab) ಪರವಾಗಿ ಮಾತನಾಡಿದ್ದರು. 2008ರ ನವೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ವೇಳೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ (ATS) ಮಾಜಿ ಮುಖ್ಯಸ್ಥ ಹೇಮಂತ್‌ ಕರ್ಕರೆ ಅವರು ಹುತಾತ್ಮರಾಗಿದ್ದು ಅಜ್ಮಲ್‌ ಕಸಬ್‌ ಗುಂಡಿನಿಂದ ಅಲ್ಲ. ಆರ್‌ಎಸ್‌ಎಸ್‌ ಜತೆ ಲಿಂಕ್‌ ಇರುವ ಪೊಲೀಸ್‌ ಅಧಿಕಾರಿಯೊಬ್ಬರು ಹೇಮಂತ್‌ ಕರ್ಕರೆ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂಬುದಾಗಿ ಹೇಳಿದ್ದರು

Exit mobile version