ನವದೆಹಲಿ: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅಡ್ವಾನ್ಸಡ್ ಡ್ರೈವರ್ ಅಸಿಸ್ಟಂಟ್ ಸಿಸ್ಟಮ್(ADAS) ಖ್ಯಾತಿ ಹೆಚ್ಚುತ್ತಿದೆ. ಹಾಗೆಯೇ, ಈ ತಂತ್ರಜ್ಞಾನ ಆಧರಿತ ಕಾರ್‌ಗಳ ಬಳಸಿಕೊಂಡು ಮಾಡುತ್ತಿರುವ ಸ್ಟಂಟ್‌ಗಳು ವೈರಲ್ ಆಗುತ್ತಿವೆ. ಈ ಸಾಲಿಗೆ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ. ಇನ್‌ಸ್ಟಾಗ್ರಾನಲ್ಲಿ ಕೆಲವು ವಾರದ ಹಿಂದೆ ವಿಡಿಯೋ ಅಪ್‌ಲೋಡ್ ಮಾಡಲಾಗಿದ್ದು, ಅದರಲ್ಲಿ ಮಹಿಂದ್ರಾ ಎಕ್ಸ್‌ಯುವಿ 700 ವಾಹನವನ್ನು ಎಡಿಎಎಸ್ ಮೋಡ್‌ಗೆ ಹಾಕಿ ಚಾಲಕ ಪಕ್ಕದ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ(Viral Video).
ಕೋ ಡ್ರೈವರ್ ಸೀಟಿನಲ್ಲಿ ಕುಳಿತಿರುವ ಚಾಲಕ, ಸೀಟಿಗೆ ಸೆಫ್ಟಿ ಬೆಲ್ಟ್ ಹಾಕಲಾಗಿದೆ. ಆದರೆ, ಅದರಿಂದ ಏನೂ ಉಪಯೋಗಿಲ್ಲ. ಯಾಕೆಂದರೆ, ವ್ಯಕ್ತಿ ಸೀಟಿನ ವಿರುದ್ಧ ದಿಕ್ಕಿನಲ್ಲಿ ಕುಳಿತು ರೈಡಿಂಗ್ ಎಂಜಾಯ್ ಮಾಡುತ್ತಿದ್ದಾನೆ. ಒಂದು ವೇಳೆ, ವಾಹನ ಅಪಘಾತವಾದರೆ, ಗಂಭೀರವಾಗುವ ಗಾಯಗಳಾಗುವ ಎಲ್ಲ ಅಪಾಯಗಳಿವೆ. ಈ ರೀತಿಯ ಸ್ಟಂಟ್ ಬಗ್ಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಇದೇ ರೀತಿಯಲ್ಲಿ ನವ ಜೋಡಿಯೊಂದು ಮಹಿಂದ್ರಾ ಎಕ್ಸ್‌ಯುವಿ 700 ಕಾರಿನಲ್ಲಿ ಸ್ಟಂಟ್ ಮಾಡಿತ್ತು. ಕಾರನ್ನು ಎಡಿಎಎಸ್ ಮೋಡ್ ಹಾಕಿ, ಅವರಿಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಕುಳಿತುಕೊಂಡಿದ್ದರು. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: Viral Video: ರೈಲ್ವೆ ಸಚಿವರ ಕ್ಲೀನಿಂಗ್ ವಿಡಿಯೋ ವೈರಲ್!, ಈಗ ವಂದೇ ಭಾರತ್ ಟ್ರೈನ್‌ಗಳಲ್ಲಿ ಸ್ವಚ್ಛತಾ ವ್ಯವಸ್ಥೆ ಬದಲು
ಯುರೋಪ್ ಮತ್ತು ಅಮೆರಿಕದಲ್ಲಿ ಈ ರೀತಿಯ ಆಟೋ ಪೈಲಟ್ ಮೋಡ್‌ನಲ್ಲಿ ಕಾರುಗಳನ್ನು ಚಲಾಯಿಸುತ್ತಾರೆ. ಆದರೆ, ಭಾರತೀಯ ರಸ್ತೆಗಳು ಈ ರೀತಿಯ ವಾಹನಗಳ ಚಾಲನೆಗೆ ಸೂಕ್ತವಾಗಿವೆಯೇ ಎಂಬ ಪ್ರಶ್ನೆಗಳು ಕೇಳಿ ಬಂದಿವೆ. ಹಾಗಾಗಿ, ಆಟೋ ಪೈಲಟ್ ಕಾರುಗಳು ಅಪಘಾತಕ್ಕೂ ಕಾರಣವಾಗಬಹುದು ಚರ್ಚೆಗಳು ನಡೆಯುತ್ತಿವೆ.