ಮುಂಬೈ: ಮಾಜಿ ಪ್ರಧಾನಿ, ಭಾರತದ ಮೇರು ನಾಯಕ ಅಟಲ್ ಬಿಹಾರಿ ವಾಜಪೇಯಿ (Former PM Atal Bihari Vajpayee) ಅವರ ಕುರಿತಾದ ಮೈ ಅಟಲ್ ಹೂಂ (Main Atal Hoon) ಚಿತ್ರದ ಟೀಸರ್ ಲಾಂಚ್ (Teaser Launch) ಆಗಿದೆ. ಅಟಲ್ ಅವರ ಪಾತ್ರವನ್ನು ದೇಶದ ಪ್ರತಿಭಾವಂತ ನಟ ಪಂಕಜ್ ತ್ರಿಪಾಠಿ (Pankaj Tripathi) ಅವರು ನಿಭಾಯಿಸಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೈ ಅಟಲ್ ಹೂಂ ಚಿತ್ರವು ಮುಂದಿನ ವರ್ಷ ಅಂದರೆ ಜನವರಿ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರ ತಯಾರಕರು ಸಿನಿಮಾದ ಟೀಸರ್ ಲಾಂಚ ಮಾಡಿದ್ದಾರೆ. ಈ ಸಿನಿಮಾ ಮೂರು ಭಾರಿ ಭಾರತದ ಪ್ರಧಾನಿಯಾದ ಅಟಲ್ ಅವರ ಜೀವನದ ಪ್ರಮುಖ ಸಂಗತಿಗಳನ್ನು ಒಳಗೊಂಡಿದೆ.
ಭಾರತದ ಮೂರು ಬಾರಿ ಪ್ರಧಾನ ಮಂತ್ರಿಯಾಗಿ ಶ್ಲಾಘನೀಯ ಕೆಲಸದಿಂದ ಅನೇಕ ಹೃದಯಗಳನ್ನು ಮುಟ್ಟಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತಾದ ಮುಂಬರುವ ಚಿತ್ರ ‘ಮೈ ಅಟಲ್ ಹೂಂ’ ಮೂಲಕ ಸಿನಿಮಾ ಮೂಲಕ ತೆರೆಯ ಮೇಲೆ ಮತ್ತೆ ಜೀವಂತವಾಗಲಿದ್ದಾರೆ. ಸಿನಿಮಾ ತಯಾರಕರು ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಂಕಜ್ ತ್ರಿಪಾಠಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತುಅವರು ಎಲ್ ಕೆ ಅಡ್ವಾಣಿ ಅವರೊಂದಿಗೆ ಸಂವಹನ ನಡೆಸುತ್ತಿರುವಾಗ ಮತ್ತು ಅವರ ರಾಜಕೀಯ ಪಕ್ಷದ ಮೂಲದ ಕುರಿತಾದ ಸಂಕ್ಷಿಪ್ತ ಚಿತ್ರಣವನ್ನು ಟೀಸರ್‌ನಲ್ಲಿ ನೋಡಬಹುದು. ಡಿಸೆಂಬರ್ 29ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.
ಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ಅವರು ಮೈ ಅಟಲ್ ಹೂಂ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಿಷಿ ವೀರಮಣಿ ಮತ್ತು ರವಿ ಜಾಧವ್ ಚಿತ್ರ ಬರಹಗಾರರಾಗಿದ್ದಾರೆ. ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಪ್ರಸ್ತುತಪಡಿಸುವ ‘ಮೈಂ ಅಟಲ್ ಹೂಂ’ ಸಿನಿಮಾವನ್ನು ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್ ಮತ್ತು ಕಮಲೇಶ್ ಭಾನುಶಾಲಿ ನಿರ್ಮಿಸಿದ್ದಾರೆ. ಚಿತ್ರವು 2024 ರ ಜನವರಿ 19 ರಂದು ದೊಡ್ಡ ಪರದೆಯ ಮೇಲೆ ಬರಲಿದೆ.
ಉಲ್ಲೇಖ್ ಎನ್ ಪಿ ಅವರ ಪುಸ್ತಕ ʻದಿ ಅನ್‌ಟೋಲ್ಡ್ ವಾಜಪೇಯಿ: ಪೊಲಿಟಿಷಿಯನ್ ಆ್ಯಂಡ್ ಪ್ಯಾರಡಾಕ್ಸ್ʼ (‘The Untold Vajpayee: Politician and Paradox’) ಅನ್ನು ಆಧಾರವಾಗಿಟ್ಟು ಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಚಿತ್ರವನ್ನು ಭಾನುಶಾಲಿ ಸ್ಟುಡಿಯೋಸ್ ಹಾಗೂ ಲೆಜೆಂಡ್ ಸ್ಟುಡಿಯೋಸ್ ನಿರ್ಮಿಸಲಿವೆ.
ಈ ಸುದ್ದಿಯನ್ನೂ ಓದಿ: Film on Vajpayee | ಅಟಲ್ ಬಿಹಾರಿ ವಾಜಪೇಯಿ ಬಯೋಪಿಕ್‌ನಲ್ಲಿ ಪಂಕಜ್ ತ್ರಿಪಾಠಿ