ಕೋಲ್ಕತ್ತಾ: ಬೇರೆ ಯಾವುದೇ ರಾಜಕೀಯ ಪಕ್ಷವೂ ಹೆಲಿಕಾಪ್ಟರ್ (Helicopters) ಪಡೆಯಲು ಸಾಧ್ಯವಾಗದಂತೆ ಸಂಸತ್ತಿನ ಚುನಾವಣೆಗೆ (loksabha election) ಮುಂಚಿತವಾಗಿ ಬಿಜೆಪಿಯು ಎಲ್ಲಾ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (West Bengal CM) ಮಮತಾ ಬ್ಯಾನರ್ಜಿ (mamata banerjee) ಆರೋಪಿಸಿದ್ದಾರೆ.
ಮಂಗಳವಾರ ಕೋಲ್ಕತ್ತಾದಲ್ಲಿ ನಡೆದ ಒಂದು ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ (trinamool congress) ನಾಯಕಿ ಅವರು ಮಾತನಾಡುತ್ತಿದ್ದರು. ಸಂಸತ್ ಚುನಾವಣೆಗೆ ಮುನ್ನ ಬಿಜೆಪಿ (BJP) ಎಲ್ಲಾ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಿದ್ದು, ಯಾವುದೇ ಪಕ್ಷಕ್ಕೆ ಸಿಗದಂತೆ ಮಾಡಿದೆ. ಇದು ಅವರ ಆಡಳಿತದ ಮಾದರಿ ಎಂದು ಟೀಕಿಸಿದರು. ಬಿಜೆಪಿಯು ಡಿಸೆಂಬರ್‌ನಲ್ಲಿ ಲೋಕಸಭೆ ಚುನಾವಣೆಯನ್ನು ನಡೆಸುವ ಸಾಧ್ಯತೆಯಿದೆ, ಅಥವಾ ಜನವರಿಯಲ್ಲಿ ಮಾಡಬಹುದು ಎಂದವರು ಊಹಿಸಿದ್ದಾರೆ.
ಬಿಜೆಪಿ ಮರಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ʼನಿರಂಕುಶʼ ಶೈಲಿಯ ಆಡಳಿತಕ್ಕೆ ಕಾರಣವಾಗಬಹುದು ಎಂದು ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ. ಪ್ರಸ್ತುತ ರಾಜಕೀಯ ವಾತಾವರಣವು ಭಾರತೀಯರ ಸ್ವಾತಂತ್ರ್ಯವನ್ನು ನಿರ್ಬಂಧಿಸಿದೆ. ಭಾರತದಲ್ಲಿ ಭಾರತೀಯರು ಸ್ವತಂತ್ರರಾಗಿಲ್ಲ. ಏಕೆಂದರೆ ಇಲ್ಲಿ ಬಿಜೆಪಿ ಮಾತ್ರ ಮುಕ್ತವಾಗಿದೆ ಎಂದರು.
ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಗೆ ಸಂಬಂಧಿಸಿ ಬಿಜೆಪಿಯ ನಡವಳಿಕೆ ಬಗ್ಗೆ ಮಮತಾ ಅಸಮ್ಮತಿ ವ್ಯಕ್ತಪಡಿಸಿದರು. “ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಲು ಸಮಿತಿಯನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿಗಳು ಕೇಳಿದ್ದರು. ಆದರೆ ಬಿಜೆಪಿ ಮುಖ್ಯ ನ್ಯಾಯಮೂರ್ತಿಯನ್ನೇ ಸಮಿತಿಯಿಂದ ತೆಗೆದುಹಾಕಿದೆ. ಅವರ ಸ್ಥಾನದಲ್ಲಿ ಬಿಜೆಪಿಯ ಕ್ಯಾಬಿನೆಟ್ ಸಚಿವರನ್ನು ನೇಮಿಸಿದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಜಾಧವಪುರದಲ್ಲಿ ʼಗೋಲಿ ಮಾರೋ’ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರನ್ನು ಮಮತಾ ತರಾಟೆಗೆ ತೆಗೆದುಕೊಂಡರು. “ನೀವು ನಮ್ಮ ಮೇಲೆ ಗುಂಡು ಹಾರಿಸಲು ಬಯಸುತ್ತೀರಾ? ನಿಮಗೆ ಧೈರ್ಯವಿದ್ದರೆ ನಮ್ಮ ಮೇಲೆ ಗುಂಡು ಹಾರಿಸಿ, ನಾವು ನೋಡುತ್ತೇವೆ” ಎಂದರು. ‘ಗೋಲಿ ಮಾರೋ’ ಘೋಷಣೆ ಕೂಗಿದವರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಲೋಕಸಭೆ ಚುನಾವಣೆಗೂ ಮುನ್ನ ಅಭಿಷೇಕ್ ಬ್ಯಾನರ್ಜಿ ಅವರನ್ನು ಬಂಧಿಸಲಾಗುವುದು ಎಂದು ಯಾರೋ ತಮಗೆ ಸಂದೇಶ ಕಳುಹಿಸಿದ್ದಾರೆ. ಅವರು ಅಭಿಷೇಕ್ ಕಂಪ್ಯೂಟರ್‌ನಲ್ಲಿದ್ದ ಡೇಟಾವನ್ನು ತೆಗೆದುಕೊಂಡಿದ್ದಾರೆ. ತಮ್ಮದೇ ಕೆಲವು ಫೈಲ್‌ಗಳನ್ನು ಅಭಿಷೇಕ್ ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಿದ್ದಾರೆ ಎಂದು ಮಮತಾ ಆರೋಪಿಸಿದರು.
ಇದನ್ನೂ ಓದಿ: Mamata Banerjee : ಪುಲ್ವಾಮ ದಾಳಿ ಬಿಜೆಪಿ ಸೃಷ್ಟಿ ಎಂದ ಮಮತಾ ಬ್ಯಾನರ್ಜಿಗೆ ತಪರಾಕಿ