ಪತಿ-ಪತ್ನಿ ಸಂಬಂಧದಲ್ಲಿ ಸಣ್ಣಪುಟ್ಟ ಸಂತೋಷಗಳೇ ಅತ್ಯಂತ ಮುಖ್ಯ. ಪರಸ್ಪರ ಅರ್ಥ ಮಾಡಿಕೊಂಡು, ಚಿಕ್ಕಚಿಕ್ಕ ಖುಷಿ ಕ್ಷಣಗಳನ್ನೂ ಸಂಭ್ರಮಿಸಿದಾಗಲೇ, ದೊಡ್ಡದೊಡ್ಡ ಕಷ್ಟಗಳನ್ನು ಜತೆಯಾಗಿ ಎದುರಿಸುವ ಶಕ್ತಿ-ಆತ್ಮವಿಶ್ವಾಸ ಹೆಚ್ಚು ಬೆಳೆಯುತ್ತಹೋಗುತ್ತದೆ. ಆದರೆ ಅದೆಷ್ಟೋ ದಂಪತಿ ಇಂಥ ಸಣ್ಣಪುಟ್ಟ ಖುಷಿ ಕ್ಷಣಗಳನ್ನು ಅನುಭವಿಸುವುದೇ ಇಲ್ಲ. ಸದಾ ಕೊರಗುತ್ತಲೇ ಇರುತ್ತಾರೆ. ಎಲ್ಲಿದೆ ಖುಷಿ ಎಂದು ಪ್ರಶ್ನಿಸುತ್ತಲೇ ಇರುತ್ತಾರೆ? ಅದರಲ್ಲೂ ಒಂದು ವಯಸ್ಸು ದಾಟಿಬಿಟ್ಟರಂತೂ ‘ಅಲ್ಲೊಂದು ಉದಾಸೀನ, ಅಂತರ’ ಗೊತ್ತಿಲ್ಲದೆ ಸೃಷ್ಟಿಯಾಗಿಬಿಡುತ್ತದೆ. ಆದರೆ ಎಲ್ಲಿದೆ ಖುಷಿ ಎಂದು ಪ್ರಶ್ನಿಸುವವರು ಒಮ್ಮೆ ವಿಡಿಯೊ ನೋಡಿ. ‘ಪತ್ನಿಯ ಕಾಲುಬೆರಳುಗಳ ಉಗುರಿಗೆ ನೇಲ್ ಪಾಲಿಶ್ ಹಚ್ಚುವುದರಲ್ಲೂ ಖುಷಿ ಇದೆ ಎಂದು ಈ ಪತಿ ತೋರಿಸಿಕೊಟ್ಟಿದ್ದಾರೆ’
ಅಂದಹಾಗೇ, ಈ ವಿಡಿಯೊ ಚಿತ್ರೀಕರಣವಾಗಿದ್ದು ರೈಲಿನಲ್ಲಿ. ಅವರು ತೀರ ಯುವ ಜೋಡಿಯೂ ಅಲ್ಲ. ದಂಪತಿಯನ್ನು ನೋಡಿದರೆ ಮಧ್ಯವಯಸ್ಸಿನವರ ತರ ಕಾಣಿಸುತ್ತದೆ. ಮಹಿಳೆ ಒಂದು ಸೀಟ್ನಲ್ಲಿ ಕುಳಿತಿದ್ದರೆ, ಅವಳ ಎದುರಿನ ಸೀಟ್ನಲ್ಲಿ ಪತಿ ಕುಳಿತಿದ್ದಾರೆ. ಈಕೆ ತನ್ನ ಒಂದು ಕಾಲನ್ನು ಪತಿ ಕುಳಿತ ಸೀಟಿನ ಮೇಲೆ ಇಟ್ಟಿದ್ದಾಳೆ. ಅವರು ಆಕೆಯ ಉಗುರುಗಳಿಗೆ ನೇಲ್ಪಾಲಿಶ್ (ಉಗುರಿಗೆ ಹಚ್ಚುವ ಬಣ್ಣ) ಹಚ್ಚುತ್ತಿದ್ದಾರೆ. ಈ ವಿಡಿಯೊವನ್ನು ಯಾರೋ ವಿಡಿಯೊ ಮಾಡಿ, ವೈರಲ್ ಮಾಡಿದ್ದಾರೆ. ದಿಲೀಪ್ ಸೋಲಂಕಿ ಎಂಬುವರ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ವಿಡಿಯೊ ಶೇರ್ ಆಗಿದೆ. ಅದನ್ನು ನೋಡಿದವರು ಈ ಜೋಡಿಯ ಪ್ರೀತಿಗೆ ಕರಗಿಹೋಗಿದ್ದಾರೆ.
‘ಪ್ರೀತಿಗೆ ವಯಸ್ಸಿನ ಬೇಧವಿಲ್ಲ’ ‘ಅತ್ಯಂತ ಮುದ್ದಾದ ದೃಶ್ಯ’ ‘ಪತಿ-ಪತ್ನಿ ಎಂದರೆ ಹೀಗಿರಬೇಕು’, ‘ಇಂಥ ಗಂಡ ಎಲ್ಲರಿಗೂ ಸಿಗಬೇಕು’, ‘ನಿಜಕ್ಕೂ ಪ್ರೀತಿ ಎಂದರೆ ಇದು’ ಎಂಬಿತ್ಯಾದಿ ಕಮೆಂಟ್ಗಳನ್ನು ನೆಟ್ಟಿಗರು ಹಾಕಿದ್ದಾರೆ.
ಇದನ್ನೂ ಓದಿ: Viral video | ನೀರಿಗೆ ಬಿದ್ದ ಕಾಗೆಯನ್ನು ರಕ್ಷಿಸಿದ ಕರಡಿ!