ನವದೆಹಲಿ: ದೇಶಾದ್ಯಂತ 300 ಕ್ಕೂ ಹೆಚ್ಚು ಮಹಿಳೆಯರ ಮಾರ್ಫಿಂಗ್ ಫೋಟೋಗಳನ್ನು ಸೃಷ್ಟಿಸಿ ಇನ್ಸ್ಟಾಗ್ರಾಮ್ ಪ್ರೊಫೈಲ್ಗಳನ್ನು ರಚಿಸಿ ಕಿರುಕುಳ (Harrasement ) ಕೊಟ್ಟಿದ್ದ 20 ವರ್ಷದ ಯುವಕನನ್ನು ಗುರುಗ್ರಾಮದಲ್ಲಿ ಶುಕ್ರವಾರ ಬಂಧಿಸಲಾಗಿದೆ. ಮಧ್ಯಪ್ರದೇಶದ ಮೊರೆನಾದ ಆಕಾಶ್ ಪರ್ಮಾರ್ ಎಂಬ ಬಂಧಿತ ವ್ಯಕ್ತಿ. ಮಹಿಳೆಯರ ಇನ್ಸ್ಟಾಗ್ರಾಮ್ ಪ್ರೊಫೈಲ್ಗಳನ್ನು ಹುಡುಕಿ, ಅವರ ಛಾಯಾಚಿತ್ರಗಳನ್ನು ಡೌನ್ಲೋಡ್ ಮಾಡಿ ಮಾರ್ಫ್ ಮಾಡುತ್ತಿದ್ದ. ಬಳಿಕ ಪ್ರೊಫೈಲ್ಗಳನ್ನು ಸೃಷ್ಟಿಸಿ ಅಪ್ಲೋಡ್ ಮಾಡಿದ್ದ ಎಂದು ಪ್ರಕರಣಕ್ಕೆ ಸಂಬಂಧಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ 300ಕ್ಕೂ ಹೆಚ್ಚು ಮಹಿಳೆಯರ ನಕಲಿ ಪ್ರೊಫೈಲ್ಗಳನ್ನು ರಚಿಸಿ ಅವರ ಮಾರ್ಫಿಂಗ್ ಫೋಟೋಗಳನ್ನು ಪ್ರಸಾರ ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ. ಆದರೆ ಅದಕ್ಕೆ ನಿರ್ದಿಷ್ಟ ಕಾರಣಗಳು ಇರಲಿಲ್ಲ. ಕೇವಲ ವಿಕೃತಿಯಾಗಿತ್ತು. ಆರೋಪಿ ಮಹಿಳೆಯರೊಂದಿಗೆ ಚಾಟ್ ಮಾಡಲು ಅಥವಾ ಅವರಿಂದ ಹಣವನ್ನು ಸುಲಿಗೆ ಮಾಡಲು ಬಯಸಲಿಲ್ಲ. ಕಳೆದ ನಾಲ್ಕೈದು ತಿಂಗಳಿನಿಂದ ಇದನ್ನೇ ಮಾಡುತ್ತಿದ್ದ” ಎಂದು ಗುರುಗ್ರಾಮದ ಪಾಲಂ ವಿಹಾರ್ನ ಸೈಬರ್ ಕ್ರೈಮ್ (ಪಶ್ಚಿಮ) ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿಪಿನ್ ಅಹ್ಲಾವತ್ ಹೇಳಿದ್ದಾರೆ.
ಇದನ್ನೂ ಓದಿ: Fertility Fraud : ತನ್ನದೇ ವೀರ್ಯವನ್ನು ಕೃತಕ ಗರ್ಭಧಾರಣೆಗೆ ಬಳಸಿದ್ದ ವೈದ್ಯ 34 ವರ್ಷದ ಬಳಿಕ ಸಿಕ್ಕಿ ಬಿದ್ದ!
ಇನ್ಸ್ಟಾಗ್ರಾಮ್ನಲ್ಲಿ ಯಾರೋ ತನ್ನ ಸಹೋದರಿಯ ನಕಲಿ ಪ್ರೊಫೈಲ್ ಅನ್ನು ರಚಿಸಿದ್ದಾರೆ. ಆಕೆಯ ಮಾರ್ಫಿಂಗ್ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಗುರುಗ್ರಾಮ್ ನಿವಾಸಿಯೊಬ್ಬರು ಸೈಬರ್ ಕ್ರೈಮ್ (ಪಶ್ಚಿಮ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಪರ್ಮಾರ್ನನ್ನು ಹಿಡಿದಿದ್ದಾರೆ.
ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಕ್ಟೋಬರ್ 3 ರಂದು ಸೈಬರ್ ಕ್ರೈಮ್ (ಪಶ್ಚಿಮ) ಪೊಲೀಸ್ ಠಾಣೆಯಲ್ಲಿ ಅಪರಿಚಿತ ಶಂಕಿತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಮಹಿಳೆಯ ನಕಲಿ ಇನ್ಸ್ಟಾಗ್ರಾಮ್ನ ಪ್ರೊಫೈಲ್ ಅನ್ನು ರಚಿಸಿದ ಬಳಕೆದಾರರ ಬಗ್ಗೆ ಪೊಲೀಸರು ಮೆಟಾದಿಂದ ವಿವರಗಳನ್ನು ಕೋರಿದ್ದರು. ನಂತರ ಅವರು ಪರ್ಮಾರ್್ನ ಫೋನ್ ಸಂಖ್ಯೆಯನ್ನು ಪಡೆದು ಟ್ರೇಸ್ ಮಾಡಿ ಪತ್ತೆ ಮಾಡಿದ್ದರು.
ತನಿಖೆಗಾಗಿ ತಮ್ಮ ಮುಂದೆ ಹಾಜರಾಗುವಂತೆ ಪೊಲೀಸರು ಪರ್ಮಾರ್ ಅವರಿಗೆ ನೋಟಿಸ್ ನೀಡಿದರು. ನಂತರ ಆತ ಶುಕ್ರವಾರ ಮೊರೆನಾದಿಂದ ಸೈಬರ್ ಕ್ರೈಮ್ (ಪಶ್ಚಿಮ) ಪೊಲೀಸ್ ಠಾಣೆಗೆ ಆಗಮಿಸಿದರು. ವಿವರವಾದ ವಿಚಾರಣೆಯ ನಂತರ ಆತನನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಪ್ರೊಫೈಲ್ಗಳನ್ನು ರಚಿಸಲು ಬಳಸಿದ ಮೊಬೈಲ್ ಫೋನ್ ಪರ್ವಾರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಪಿ ಹೇಳಿದ್ದಾರೆ. ಪರ್ವಾರ್ ಸಾರ್ವಜನಿಕ ಪಬ್ಲಿಕ್ ಪ್ರೊಫೈಲ್ಗಳನ್ನು ಗುರಿಯಾಗಿಸಿಕೊಂಡಿದ್ದ. ಅವುಗಳಿಂದ ವೈಯಕ್ತಿಕ ಭಾವಚಿತ್ರಗಳು ಸುಲಭವಾಗಿ ಆತನಿಗೆ ದೊರಕುತ್ತಿತ್ತು.