Site icon Vistara News

Suicide Case: ಸಂಗಾತಿ ನೀನು ದೂರಾದ ಮೇಲೆ… ಪತ್ನಿ ಓಡಿ ಹೋದಳು ಎಂದು ತಾಯಿ ಸಮಾಧಿ ಬಳಿ ವ್ಯಕ್ತಿ ಆತ್ಮಹತ್ಯೆ

Man Hangs After Wife Leaves Him

Man Commits Suicide At Mother's Grave After Escaping Wife From House

ಹೈದರಾಬಾದ್:‌ ‘ಪ್ರೀತಿ ಕುರುಡು’ ಎನ್ನುತ್ತಾರಲ್ಲ, ಅದು ಕೆಲ ಸಂದರ್ಭಗಳಲ್ಲಿ ನಿಜ ಎನಿಸುತ್ತದೆ. ಮನಸಾರೆ ಇಷ್ಟಪಟ್ಟವರನ್ನು ಕಳೆದುಕೊಂಡ ಯುವಕ ಅಥವಾ ಯುವತಿಯನ್ನು ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಪ್ರೀತಿ ಎಷ್ಟು ಕುರುಡು ಎಂಬುದನ್ನು ತೋರಿಸುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಹೆಂಡತಿ ಓಡಿ ಹೋದಳು ಎಂದು ಪತಿಯು ತಾಯಿಯ ಸಮಾಧಿ ಬಳಿ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೌದು, ಶಾದ್‌ ನಗರ ಮಂಡಲ ವ್ಯಾಪ್ತಿಯ ಕೊಂಡಣ್ಣಗುಡಮ್‌ ಗ್ರಾಮದಲ್ಲಿ ರಾಜು ಹಾಗೂ ಶ್ವೇತಾ ಬಾರ್ಯ ಎಂಬುವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ನಡುವೆ ಅನ್ಯೋನ್ಯ ಸಂಬಂಧವೂ ಇತ್ತು. ಆದರೆ, ಕೆಲ ತಿಂಗಳಿನಿಂದ ಶ್ವೇತಾ ಬಾರ್ಯ ಅವರು ಗಂಡನ ಮೇಲೆ ಆಸಕ್ತಿ ಕಳೆದುಕೊಂಡಿದ್ದರು. ಇಂದಲ್ಲ ನಾಳೆ ಸರಿ ಹೋಗುತ್ತಾಳೆ ಎಂದು ರಾಜು ಸುಮ್ಮನಾಗಿದ್ದರು. ಆದರೆ, ಶ್ವೇತಾ ಬಾರ್ಯ ಮನೆ ಬಿಟ್ಟು ಓಡಿ ಹೋಗುವ ಮೂಲಕ ರಾಜುಗೆ ಶಾಕ್‌ ನೀಡಿದ್ದಾರೆ.

ಹೆಂಡತಿ ಕಾಣೆಯಾಗುತ್ತಲೇ ರಾಜು ಅವರು ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶೋಧ ನಡೆಸಿದ್ದಾರೆ. ಎಷ್ಟು ಹುಡುಕಾಡಿದರೂ ಶ್ವೇತಾ ಬಾರ್ಯ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ತುಂಬ ಪ್ರೀತಿಸುತ್ತಿದ್ದ ಪತ್ನಿಯು ಕಾಣೆಯಾಗುತ್ತಲೇ ರಾಜು ತುಂಬ ಖಿನ್ನತೆಗೆ ಒಳಗಾಗಿದ್ದರು. ಮನೆಯಲ್ಲಿ ಒಬ್ಬರೇ ಅಳುತ್ತ ಕೂರುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Suicide Case : ಹೈವೋಲ್ಟೇಜ್ ಟವರ್ ಏರಿ ಆತ್ಮಹತ್ಯೆಗೆ ಯತ್ನ; ಸಾಲಬಾಧೆಗೆ ನೇಣಿಗೆ ಶರಣಾದ ರೈತ

ಯಾವಾಗ ಮನೆಯಿಂದ ಓಡಿ ಹೋದ ಹೆಂಡತಿ ಇನ್ನು ಬರುವುದಿಲ್ಲ, ಪೊಲೀಸರ ಕೈಗೂ ಸಿಗಲಿಲ್ಲ ಎಂಬುದು ಗೊತ್ತಾಯಿತೋ, ರಾಜು ಮತ್ತಷ್ಟು ಕುಗ್ಗಿದ್ದಾರೆ. ಇದೇ ದುಃಖದಲ್ಲಿ ತಾಯಿ ಸಮಾಧಿ ಬಳಿ ತೆರಳಿದ ರಾಜು, ಸೆಲ್ಫಿ ವಿಡಿಯೊ ಮಾಡುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ನನ್ನ ಹೆಂಡತಿ ನನ್ನನ್ನು ತೊರೆದು ಹೋಗಿದ್ದಾಳೆ. ಅವಳು ಎಲ್ಲಿದ್ದಾಳೋ ಚೆನ್ನಾಗಿರಲಿ. ನಾನು ತೀರಿಕೊಂಡ ಬಳಿಕ ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂಬುದಾಗಿ ಮನವಿ ಮಾಡುತ್ತೇನೆ” ಎಂದು ಸೆಲ್ಫಿ ವಿಡಿಯೊದಲ್ಲಿ ಹೇಳಿದ್ದಾರೆ. ಆ ಮೂಲಕ ಸಾವಿನಲ್ಲೂ ಹೆಂಡತಿ ಮೇಲಿನ ಪ್ರೀತಿಯು ಸೇಡಾಗಿ ಪರಿವರ್ತನೆಯಾಗದಂತಹ ದೊಡ್ಡ ಮನಸ್ಸು ಪ್ರದರ್ಶಿಸಿದ್ದಾರೆ. ರಾಜು ಆತ್ಮಹತ್ಯೆಯಿಂದ ಇಡೀ ಗ್ರಾಮ ಬೇಸರಗೊಂಡಿದೆ.

Exit mobile version