ಚಂಡೀಗಢ: ಹೆಚ್ಚಾಗಿ ಚಾಟ್ಸ್‌ಗಳನ್ನು ತಿಂದರೆ, ಅಸಿಡಿಟಿ ಇದ್ದರೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೂಡಲೇ ವೈದ್ಯರ ಬಳಿ ಹೋಗಿ, ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡರೆ ನೋವು ಕಡಿಮೆಯಾಗುತ್ತದೆ. ಆದರೆ, ವರ್ಷಗಳಿಂದಲೂ ಹೊಟ್ಟೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಹೋದಾಗ ವೈದ್ಯರಿಗೇ ಅಚ್ಚರಿಯಾಗಿದೆ. ಹೊಟ್ಟೆ ನೋವು ಎಂದ ವ್ಯಕ್ತಿಯ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ನಟ್ಟು, ಬೋಲ್ಟು, ಕ್ಲಿಪ್ ಸೇರಿ ಒಂದ ಗ್ಯಾರೇಜ್‌ನಲ್ಲಿ ಇರಬೇಕಾದಷ್ಟು ವಸ್ತುಗಳು ಹೊಟ್ಟೆಯಲ್ಲಿಯೇ ಸಿಕ್ಕಿರುವುದು (Viral News) ವೈದ್ಯರನ್ನು ಬೆಚ್ಚಿಬೀಳಿಸಿದೆ.
ಹೌದು, ಪಂಜಾಬ್‌ನ ಮೋಗಾ ನಿವಾಸಿಯಾದ ವ್ಯಕ್ತಿಯು ಅಸಹನೀಯ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ತೆರಳಿದ್ದಾರೆ. ಹೆಚ್ಚು ಹೊಟ್ಟೆ ನೋವು ಇದ್ದ ಕಾರಣ ಎಕ್ಸ್‌ರೇ ಮಾಡಿದ್ದಾರೆ. ಎಕ್ಸ್‌ರೇ ವರದಿಯು ವೈದ್ಯರನ್ನು ಗಲಿಬಿಲಿಗೊಳಿಸಿದ್ದು, ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸತತ ಮೂರು ತಾಸು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಅವರ ಹೊಟ್ಟೆಯಲ್ಲಿ ಹತ್ತಾರು ವಸ್ತುಗಳು, ಉಪಕರಣಗಳು ಸಿಕ್ಕಿರುವುದು ವೈದ್ಯರನ್ನು ಅಚ್ಚರಿಯ ಮಡುವಿನಲ್ಲಿ ಮುಳುಗಿಸಿದೆ.
Shocking News : In Moga After a 3-hour operation, doctors found various items in the stomach of a 40-year-old man, including Earphones, Rakhi, Nuts & Bolts, Washers, Lockets, Screws, and much more. The doctor revealed that the person had been suffering from a stomach problem for… pic.twitter.com/lZyMrTIJEU
— Gagandeep Singh (@Gagan4344) September 27, 2023
ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳು ಯಾವವು?
ಮೋಗಾ ಮೆಡಿಸಿಟಿ ಆಸ್ಪತ್ರೆಯ ವೈದ್ಯರು ಮೂರು ಗಂಟೆ ಶಸ್ತ್ರಚಿಕಿತ್ಸೆ ಬಳಿಕ ವ್ಯಕ್ತಿಯ ಹೊಟ್ಟೆಯಲ್ಲಿ ನಟ್ಟು, ಬೋಲ್ಟು, ರಾಖಿಗಳು, ಸ್ಕ್ರ್ಯೂ, ಲಾಕೆಟ್‌ಗಳು, ಇಯರ್‌ಫೊನ್ ಸೇರಿ ಹತ್ತಾರು ವಸ್ತುಗಳು ಪತ್ತೆಯಾಗಿವೆ. ಜಿಪ್ಪರ್ ಟ್ಯಾಗ್, ಒಂದು ಮಾರ್ಬಲ್, ಒಂದು ಸೇಫ್ಟಿ ಪಿನ್, ವೈರ್‌ಗಳು ಕೂಡ ಇವರ ಹೊಟ್ಟೆಯಲ್ಲಿ ಪತ್ತೆಯಾಗಿವೆ. ಎಲ್ಲ ವಸ್ತುಗಳು ಈತನ ಹೊಟ್ಟೆಯಿಂದ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Kapil Dev Kidnap: ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕಿಡ್ನಾಪ್; ವಿಡಿಯೊ ವೈರಲ್
“ವ್ಯಕ್ತಿಯ ಹೊಟ್ಟೆಯಿಂದ ಎಲ್ಲ ವಸ್ತುಗಳನ್ನು ತೆಗೆಯಲಾಗಿದೆ. ಆದರೂ, ಇವರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ಕಳೆದ ಎರಡು ವರ್ಷದಿಂದ ಇವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಸುಮಾರು ವರ್ಷಗಳಿಂದ ಇವರ ಹೊಟ್ಟೆಯಲ್ಲಿ ಇಷ್ಟೆಲ್ಲ ವಸ್ತುಗಳು ಇರುವ ಕಾರಣ ಗಂಭೀರ ಪರಿಣಾಮ ಬೀರುತ್ತಿದೆ” ಎಂದು ಹೇಳಿದ್ದಾರೆ. ಇವರ ಹೊಟ್ಟೆಯಲ್ಲಿ ವಸ್ತುಗಳು ಪತ್ತೆಯಾಗಿರುವುದಕ್ಕೆ ಕುಟುಂಬಸ್ಥರು ಕೂಡ ಅಚ್ಚರಿ ವ್ಯಕ್ತಪಡಿಸಿದೆ. ಇಷ್ಟೆಲ್ಲ ವಸ್ತುಗಳನ್ನು ಏಕೆ ನುಂಗಿದ ಎಂಬುದರ ಕುರಿತು ಅವರಿಗೂ ಯಾವುದೇ ಮಾಹಿತಿ ಇಲ್ಲದಿರುವುದು ಮತ್ತೊಂದು ಅಚ್ಚರಿಯಾಗಿದೆ.