Site icon Vistara News

Viral Video | ಪಾನ್‌ ಬನಾರಸ್‌ ವಾಲಾ ಹಾಡಿಗೆ ಮನಬಿಚ್ಚಿ ಕುಣಿದ ಅಂಕಲ್‌, ಎನರ್ಜಿಗೆ ಸೆಲ್ಯೂಟ್‌ ಎಂದ ಜನ

Viral Video

ನವದೆಹಲಿ: ಹೆಚ್ಚಿನ ಜನ ಇನ್ನೂ ಯುವಕರಾಗಿರುತ್ತಾರೆ. ಆದರೆ, ಅವರ ಮನಸ್ಸು, ಚಿಂತನೆ ಮಾತ್ರ ವಯಸ್ಸಾದವರಂತೆ ಇರುತ್ತವೆ. ಕೆಲವೇ ಕೆಲವು ಜನರಿಗೆ ಮಾತ್ರ ವಯಸ್ಸಾದರೂ ಮನಸ್ಸನ್ನು ಮಾತ್ರ 18 ಯುವಕನಂತೆ ಇಟ್ಟುಕೊಂಡಿರುತ್ತಾರೆ. ಈ ಮಾತಿಗೆ ನಿದರ್ಶನ ಎಂಬಂತೆ, ಅಂಕಲ್‌ ಒಬ್ಬರು ಅಮಿತಾಬ್‌ ಬಚ್ಚನ್‌ ನಟನೆಯ ಪಾನ್‌ ಬನಾರಸ್ ವಾಲಾ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದಾರೆ. ಈ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ಸಂಬಂಧಿಕರ ಮದುವೆಯಲ್ಲಿ ಅಂಕಲ್‌ ಒಬ್ಬರು ಬಚ್ಚನ್‌ ನಟನೆಯ ಡಾನ್‌ ಸಿನಿಮಾದ ಹಾಡಿಗೆ ಮನಸ್ಸು ಬಿಚ್ಚಿ ಕುಣಿದಿದ್ದಾರೆ. ವಯಸ್ಸಿನ ಹಂಗಿಲ್ಲದೆ, ಬದುಕಿನ ಚಿಂತೆಗಳ ಲವಲೇಶವೂ ಇಲ್ಲದೆ, ಯಾರು ಏನು ಅನ್ನುತ್ತಾರೋ ಎಂಬ ಯೋಚನೆಯನ್ನೇ ಮಾಡದೆ ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೊವನ್ನು ವೆಂಡಿಂಗ್‌ ಡಾನ್ಸ್‌ ಇಂಡಿಯಾ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ.

ಅಂಕಲ್‌ ಮಾಡಿದ ಡಾನ್ಸ್‌ ನೋಡಿದ ತುಂಬ ಜನ ಪ್ರತಿಕ್ರಿಯಿಸಿದ್ದಾರೆ. “ನಿಮ್ಮ ಎನರ್ಜಿ ಮೆಚ್ಚಬೇಕು”, “ನೀವು ಮನಸ್ಸಿನಿಂದಲೂ ಕುಣಿದಿದ್ದೀರಿ” ಎಂದೆಲ್ಲ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ವಿಡಿಯೊವನ್ನು 50 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ | Viral Video | ಮುಂದಿನ 2 ಚಕ್ರಗಳೇ ಇಲ್ಲದೆ ವೇಗವಾಗಿ ಓಡುವ ಟ್ರಕ್‌, ಇದೆಲ್ಲ ಭಾರತದಲ್ಲಿ ಮಾತ್ರ ಸಾಧ್ಯ

Exit mobile version