ಭೋಪಾಲ್: ಹಣೆಬರಹವೊಂದು ಗಟ್ಟಿಯಾಗಿದ್ದರೆ ಮನುಷ್ಯ ಎಂತಹ ಅಪಾಯದಿಂದಲೂ ಪಾರಾಗುತ್ತಾನೆ. ಯಾವ ಗಂಭೀರ ಕಾಯಿಲೆಯಿಂದಲೂ ಗುಣಮುಖನಾಗುತ್ತಾನೆ. ಅಷ್ಟೇ ಏಕೆ, ಚಿತೆಯ ಮೇಲಿಂದಲೂ ಎದ್ದುಬರುತ್ತಾರೆ. ಹೌದು, ಈ ಮಾತಿಗೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ಮೃತಪಟ್ಟಿದ್ದಾನೆ ಎಂದು ಯುವಕನ ಅಂತ್ಯಸಂಸ್ಕಾರ ಮಾಡುವಾಗ ಚಿತೆಯ ಮೇಲಿಂದಲೇ ಆತ ಎದ್ದು ಕೂತಿದ್ದಾನೆ. ಶವವೊಂದು ಎದ್ದು ಕೂತಿದ್ದನ್ನು (Viral News) ನೋಡಿ ಜನ ಪೇರಿಕಿತ್ತಿದ್ದಾರೆ.
ಹೌದು, ರಾಜಸ್ಥಾನದ ಮೊರೆನಾದಲ್ಲಿ ವಾಸವಾಗಿರುವ ಜೀತು ಪ್ರಜಾಪತಿ ಎಂಬ ಯುವಕನು ಕೆಲ ವರ್ಷಗಳಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಜೀತು ಪ್ರಜಾಪತಿ ಮೇ 30ರಂದು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ಕೂಡಲೇ ಜನ ಬಂದು ತಪಾಸಣೆ ಮಾಡಿ ನೋಡಿದಾಗ, ಆತ ಉಸಿರಾಟ ನಿಲ್ಲಿಸಿದ್ದಾನೆ. ಹೃದಯ ಬಡಿತ ನಿಂತು ಹೋಗಿದೆ. ಯುವಕ ಮೃತಪಟ್ಟಿದ್ದಾನೆ ಎಂದು ಮೇ 31ರಂದು ಮೊರೆನಾದ 47ನೇ ವಾರ್ಡ್‌ನಲ್ಲಿರುವ ಶಾಂತಿ ಧಾಮದಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ.
ಕೆಲವೇ ನಿಮಿಷಗಳಲ್ಲಿ ಜೀತು ಪ್ರಜಾಪತಿ ಮಲಗಿದ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿತ್ತು. ಇದೇ ವೇಳೆ, ಜೀತು ಪ್ರಜಾಪತಿ ಎದ್ದು ಕೂತಿದ್ದಾನೆ. ಈತನ ದೇಹ ಎದ್ದು ಕೂತಿದ್ದನ್ನು ನೋಡಿ ನೆರೆದಿದ್ದ ನೂರಾರು ಜನ ಓಡಿಹೋಗಿದ್ದಾರೆ. ಇದಾದ ಬಳಿಕ ಒಂದಷ್ಟು ಜನ ಬಂದು ನೋಡಿದಾಗ ಜೀತು ಪ್ರಜಾಪತಿ ಉಸಿರಾಡುತ್ತಿರುವುದನ್ನು ಗಮನಿಸಿದ್ದಾರೆ.
ಇದನ್ನೂ ಓದಿ: MS Dhoni : ಎಂ.ಎಸ್.ಧೋನಿ ಭಗವದ್ಗೀತೆಯೊಂದಿಗೆ ಕಾಣಿಸಿಕೊಂಡ ಫೋಟೋ ವೈರಲ್
ಜೀತು ಪ್ರಜಾಪತಿ ಉಸಿರಾಡುತ್ತಿರುವುದನ್ನು ಗಮನಿಸಿದ ಜನ ಕೂಡಲೇ ವೈದ್ಯರನ್ನು ಕರೆಸಿದ್ದಾರೆ. ವೈದ್ಯರು ಸ್ಥಳಕ್ಕೆ ಬಂದು ತಪಾಸಣೆ ಮಾಡಿದಾಗ, ಜೀತು ಪ್ರಜಾಪತಿ ಉಸಿರಾಡುತ್ತಿದ್ದಾನೆ ಎಂದು, ಆತನ ಹೃದಯ ಬಡಿತ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟಿನಲ್ಲಿ, ಚಿತೆಯ ಮೇಲೆ ಮಲಗಿದ್ದವ ಎದ್ದುಕೂತಿರುವ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಚ್ಚರಿ ಮೂಡಿಸಿದೆ.
ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ