Site icon Vistara News

Viral Video: ಕ್ಯಾಬ್​ ಚಾಲಕನನ್ನು ಬಾನೆಟ್​ ಮೇಲೆ 3 ಕಿಮೀ ದೂರ ಎಳೆದೊಯ್ದ ಕಾರು ಚಾಲಕ; ಅಡ್ಡಗಟ್ಟಿದ ಪೊಲೀಸ್​

Man drives car for 3 kms with after another Man hanging on its bonnet in Delhi

#image_title

ನವ ದೆಹಲಿ: ವ್ಯಕ್ತಿಯೊಬ್ಬ ಕಾರಿನ ಬಾನೆಟ್​ ಮೇಲೆ ಜೋತು ಬಿದ್ದು ಇದ್ದಂತೆ ಚಾಲಕ ಸುಮಾರು 3 ಕಿಮೀಗಳಷ್ಟು ದೂರ ಕಾರು ಚಲಾಯಿಸಿದ್ದಾನೆ. ದೆಹಲಿಯಲ್ಲಿ ನಡೆದ ಈ ಘಟನೆಯ ವಿಡಿಯೊ ವೈರಲ್ (Viral Video) ಆಗಿದೆ. ಕಾರು ಚಾಲಕ ತುಂಬ ದಾರ್ಷ್ಟ್ಯದಲ್ಲಿ ಕಾರು ಓಡಿಸುತ್ತಲೇ ಇದ್ದ. ಬಾನೆಟ್​ ಮೇಲಿದ್ದವ ಗಟ್ಟಿಯಾಗಿ ಹಿಡಿದು, ನೇತಾಡುತ್ತಿದ್ದ. ಬಳಿಕ ಪೊಲೀಸ್ ವಾಹನವೊಂದು ಕಾರಿಗೆ ಅಡ್ಡಬಂದು, ಆ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭಾನುವಾರ ರಾತ್ರಿ 11ಗಂಟೆಗೆ ಘಟನೆ ನಡೆದಿದೆ. ಕಾರು ಬಿಹಾರ ಸಂಸದ ಚಂದನ್​ ಸಿಂಗ್​​ಗೆ ಸೇರಿದ್ದು. ಆದರೆ ಅವರು ಇರಲಿಲ್ಲ. ಕಾರಿನ ಚಾಲಕ ರಾಮ್​ಚಾಂದ್ ಕುಮಾರ್​ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ದೆಹಲಿಯ ನಿಜಾಮುದ್ದೀನ್ ದರ್ಗಾದಿಂದ ಆಶ್ರಮ ಚೌಕ್​​ಗೆ ತೆರಳುತ್ತಿತ್ತು. ಇನ್ನು ಕಾರಿನ ಬಾನೆಟ್​ ಮೇಲೆ ಹತ್ತಿದ್ದ ವ್ಯಕ್ತಿಯ ಹೆಸರು ಚೇತನ್​ ಎಂದಾಗಿದ್ದು, ಇವನೂ ಕೂಡ ಕ್ಯಾಬ್​ ಚಾಲಕ. ತನ್ನ ಕ್ಯಾಬ್​ ಹತ್ತಿದ್ದ ಪ್ರಯಾಣಿಕನನ್ನು ಅವರು ಹೇಳಿದಲ್ಲಿ ಬಿಟ್ಟು, ಆಶ್ರಮ ಮಾರ್ಗದಲ್ಲಿ ವಾಪಸ್​ ಬರುತ್ತಿದ್ದರು.

ದೂರು ಕೊಟ್ಟ ಚೇತನ್​ ‘ನನ್ನ ಕಾರಿನಲ್ಲಿ ಇದ್ದ ಪ್ರಯಾಣಿಕನನ್ನು ಬಿಟ್ಟು ವಾಪಸ್ ಬರುತ್ತಿದ್ದೆ. ಆಶ್ರಮ ತಲುಪಿದಾಗ ಈ ಡ್ರೈವರ್ ತನ್ನ ಕಾರನ್ನು ನನ್ನ ವಾಹನಕ್ಕೆ ಮೂರು ಬಾರಿ ಡಿಕ್ಕಿ ಹೊಡೆಸಿದ. ಆಗ ನಾನು ನನ್ನ ಕಾರಿನಿಂದ ಇಳಿದು ಬಂದು ಅವನ ಕಾರಿನ ಎದುರು ನಿಂತೆ. ಆದರೆ ಆತ ಕಾರು ಚಾಲನೆ ಮುಂದುವರಿಸಿದ. ಆಗ ನಾನು ಕಾರಿನ ಬಾನೆಟ್​ಗೆ ಜೋತುಬಿದ್ದೆ. ಆದರೆ ಚಾಲಕ ನಿಲ್ಲಿಸಲೇ ಇಲ್ಲ. ನಿಜಾಮುದ್ದೀನ್​ವರೆಗೂ ಹೀಗೆ ಬಂದ. ಕಾರು ನಿಲ್ಲಿಸು ಎಂದು ಅವನಿಗೆ ಪದೇಪದೆ ಹೇಳುತ್ತಲೇ ಇದ್ದೆ. ಆದರೆ ಅವನು ನಿಲ್ಲಿಸಲೇ ಇಲ್ಲ. ಸಂಪೂರ್ಣವಾಗಿ ಕುಡಿದಿದ್ದ’ ಎಂದು ಹೇಳಿದ್ದಾನೆ.

ಇದನ್ನೂ ಓದಿ: Man Dragged By Car | ಕಾರಿನ ಬಾನೆಟ್‌ ಮೇಲೆ ಯುವಕನನ್ನು 1 ಕಿ.ಮೀ.ವರೆಗೆ ಎಳೆದೊಯ್ದ ಮಹಿಳೆ

ಆದರೆ ಕಾರು ಚಾಲಕ ರಾಮ್​ಚಾಂದ್ ಕುಮಾರ್ ಈ ಆರೋಪವನ್ನು ನಿರಾಕರಿಸಿದ್ದಾನೆ. ನನ್ನ ಕಾರು ಆತನ ವಾಹನಕ್ಕೆ ಡಿಕ್ಕಿಯಾಗಲಿಲ್ಲ. ನಾನು ನನ್ನ ಪಾಡಿಗೆ ಕಾರು ಡ್ರೈವ್ ಮಾಡುತ್ತಿದ್ದೆ. ಆತ ಉದ್ದೇಶ ಪೂರ್ವಕವಾಗಿಯೇ ಜಿಗಿದು, ಕಾರಿನ ಬಾನೆಟ್​ ಹತ್ತಿದ. ಕೆಳಗೆ ಇಳಿಯುವಂತೆ ಅದೆಷ್ಟೋ ಸಲ ಹೇಳಿದೆ. ಆದರೆ ಅವನು ಕೇಳಲಿಲ್ಲ. ಬಳಿಕ ನಾನೇ ಕಾರು ನಿಲ್ಲಿಸಿ, ಏನು ಮಾಡ್ತಿದ್ದೀಯಾ? ಎಂದು ಅವನನ್ನು ಕೇಳಿದೆ ಎಂದು ರಾಮ್​ಚಾಂದ್ ಕುಮಾರ್ ತಿಳಿಸಿದ್ದಾನೆ. ಪೊಲೀಸರು ಇಬ್ಬರ ವಿಚಾರಣೆ ನಡೆಸುತ್ತಿದ್ದಾರೆ.

Exit mobile version