Site icon Vistara News

ರೈಲಿನಿಂದ ಬಿದ್ದ ಕಾಲು ಕಳೆದುಕೊಂಡ ಪ್ರಯಾಣಿಕ, ಫೋಟೋ ಕ್ಲಿಕ್ಕಿಸಿದ್ರೆ ಹೊರತು ಯಾರೂ ಸಹಾಯ ಮಾಡಲಿಲ್ಲ

Man fell from train and loses his legs at Delhi Railway station

ನವದೆಹಲಿ: ಬ್ಯಾಗ್ ಕಸಿಯಲು ಪ್ರಯತ್ನಿಸಿದವನ (Bag Snatcher) ಜತೆ ಜಗಳಾಡಿದ 55 ವರ್ಷದ ಪ್ರಯಾಣಿಕರೊಬ್ಬರು ನಿಧಾನವಾಗಿ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡ (Man Loses his legs) ಘಟನೆ ಉತ್ತರ ದಿಲ್ಲಿಯ ದಯಾ ಬಸ್ತಿ ರೈಲ್ವೆ ಸ್ಟೇಷನ್‌ನಲ್ಲಿ ಸೋಮವಾರ ನಡೆದಿದೆ(Delhi Railway Station). ಈ ವ್ಯಕ್ತಿಯನ್ನು ಗಂಗಾಜಿ ಎಂದು ಗುರುತಿಸಲಾಗಿದ್ದು, ದಿಲ್ಲಿಯ ಶಾಸ್ತ್ರಿ ನಗರದ ವಾಸಿಯಾಗಿದ್ದಾರೆ.

ಜನವರಿ 17ರಿಂದ ರೈಲು ದಯಾ ಬಸ್ತಿ ರೈಲ್ವೆ ಸ್ಟೇಷನ್‌ಗೆ ಮಧ್ಯಾಹ್ನ 2.30ಕ್ಕೆ ಬಂದಿದೆ. ನಮ್ಮ ತಂದೆ ಗುಜರಾತ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದರು ಎಂದು ಸಂತ್ರಸ್ತ ವ್ಯಕ್ತಿಯ ಪುತ್ರ ಕೋಮಲ್ ಹೇಳಿದ್ದಾರೆ. ನಮ್ಮ ತಂದೆ ರೈಲು ನಿಲ್ದಾಣದಲ್ಲಿ ಇಳಿಯುವುದಕ್ಕಾಗಿ ಬೋಗಿಯ ಬಾಗಿಲಲ್ಲಿ ಬಂದು ನಿಂತಿದ್ದರು. ಆಗ ವ್ಯಕ್ತಿಯೊಬ್ಬ ಅವರ ಬ್ಯಾಗ್ ಕಸಿಯುವ ಪ್ರಯತ್ನ ಮಾಡಿದ್ದಾನೆ. ಇದಕ್ಕೆ ನಮ್ಮ ತಂದೆ ಪ್ರತಿರೋಧ ತೋರಿದ್ದಾರೆ. ಈ ಗಲಾಟೆಯಲ್ಲಿ ಅವರ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಆಗ ಅವರ ಕಾಲುಗಳ ಮೇಲೆ ರೈಲು ಹರಿದಿದೆ ಎಂದು ಹೇಳಿದ್ದಾರೆ.

ಈ ವೇಳೆ ನಾನು ರೈಲಿನ ವಾಶ್‌ರೂಮ್‌ನಲ್ಲಿದ್ದೆ. ನಾನು ಹೊರಗೆ ಬಂದು ನೋಡಿದಾಗ ಜನ ಸೇರಿದ್ದರು. ಪ್ರತಿಯೊಬ್ಬರು ಫೋಟೋ ಕ್ಲಿಕ್ ಮಾಡುತ್ತಿದ್ದರೇ ಹೊರತು ಯಾರೂ ಆಸ್ಪತ್ರೆಗೆ ಸಾಗಿಸುವ ಸಂಬಂಧ ಸಹಾಯ ಮಾಡಲು ಮುಂದಾಗಲಿಲ್ಲ ಎಂದು ಕೋಮಲ್ ಅವರು ಹೇಳಿದ್ದಾರೆ. ಆರೋಪಿ, ಸ್ಥಳದಿಂದ ಓಡಿ ಹೋಗಿದ್ದಾನೆ ಮತ್ತು ನನ್ನ ತಾಯಿ ಅಳಲು ಆರಂಭಿಸಿದರು ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಸಾಗಿಸಲು 10 ನಿಮಿಷ ತಡವಾಗಿದ್ದರೆ ನಮ್ಮ ತಂದೆಯ ಸ್ಥಿತಿ ಗಂಭೀರವಾಗಿರುತ್ತಿತ್ತು. ಗಾಯಗೊಂಡಿದ್ದರಿಂದ ಭಾರಿ ರಕ್ತಸ್ರಾವವಾಗಿದೆ. ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ತಂದೆ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಆದರೂ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಕೋಮಲ್ ಹೇಳಿದ್ದಾರೆ. ಈ ಮಧ್ಯೆ, ಬ್ಯಾಗ್ ಕದಿಯಲು ಪ್ರಯತ್ನಿಸಿದ 16 ವರ್ಷದ ಹುಡುಗನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Suicide Case | ಭದ್ರಾವತಿಯಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Exit mobile version