Site icon Vistara News

ಚಡ್ಡಿಯೊಳಗೆ 20 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ; ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಗಳ ಗುನ್ನ!

Gold paste in underwear

ನವದೆಹಲಿ: ವಿದೇಶಗಳಿಂದ ಚಿನ್ನವನ್ನು (Gold) ದೇಶದೊಳಕ್ಕೆ ತರಲು ಕಳ್ಳರು ನಾನಾ ದಾರಿಗಳನ್ನು ಶೋಧಿಸುತ್ತಲೇ ಇರುತ್ತಾರೆ. ಆದರೆ, ಅವರ ಎಲ್ಲ ಪ್ರಯತ್ನಗಳನ್ನು ವಿಮಾನನಿಲ್ದಾಣದಲ್ಲಿನ ಕಸ್ಟಮ್ಸ್ ಅಧಿಕಾರಿಗಳು (customs officers) ಫೇಲ್ ಮಾಡುತ್ತಾರೆ. ಈ ಕುರಿತಾದ ಅನೇಕ ಸುದ್ದಿಗಳನ್ನು ಓದಿರುತ್ತೀರಿ. ಆದರೆ, ಇಲ್ಲೊಬ್ಬ ತನ್ನ ಅಂಡರ್‌ವೇರ್‌ನಲ್ಲಿ (underwear) ಚಿನ್ನವನ್ನು ಸಾಗಣೆ ಮಾಡುತ್ತಿದ್ದ. ಆತನನ್ನು ಹಿಡಿದು ಚಿನ್ನವನ್ನು ವಶಪಡಿಸಿಕೊಂಡಿರುವ ಘಟನೆ ತೆಂಲಗಾಣದ ಹೈದ್ರಾಬಾದ್‌ನ (Hyderabad) ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ (Rajiv Gandhi international Airport) ನಡೆದಿದೆ.

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನಿಂದ 20 ಲಕ್ಷ ರೂ.ಗೂ ಅಧಿಕ ಮೌಲ್ಯದ 331 ಗ್ರಾಮ ಚಿನ್ನದ ಪೇಸ್ಟ್ ‌ವಶಪಡಿಸಿಕೊಂಡಿದ್ದಾರೆ. ಈ ಘಟನೆ ಬುಧವಾರ ನಡೆದಿದೆ. ಬಂಧಿತ ಪ್ರಯಾಣಿಕರ ಶಾರ್ಜಾದಿಂದ ಪ್ರಯಾಣಿಸುತ್ತಿದ್ದ.

ಈ ಪ್ರಯಾಣಿಕ ಚಿನ್ನದ ಪೇಸ್ಟ್‌ ಅನ್ನು ತನ್ನ ಒಳಉಡುಪಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಸಂದೇಹ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಈ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಕಳ್ಳತನದ ಹೊಸ ಉಪಾಯ ಬಯಲಾಗಿದೆ. ಒಟ್ಟು ಆತನಿಂದ 20 ಲಕ್ಷ ರೂ. ಮೌಲ್ಯದ ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ. ಈ ಒಟ್ಟು ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೋಚಲು ಬಂದವರು ದಾನಿಗಳಾದರು; ವಿಚಿತ್ರ ದರೋಡೆಕೋರರು ಇವರು!

ದಾರಿಯಲ್ಲಿ ಹೋಗುತ್ತಿದ್ದ ದಂಪತಿ ಬಳಿ ಇದ್ದ ಹಣ-ಒಡವೆಯನ್ನು ಕದಿಯಲು ಬಂದ ದರೋಡೆಕೋರರು, ಆ ಕ್ಷಣದಲ್ಲೇ ದಾನಿಗಳಾಗಿ ಬದಲಾಗಿದ್ದಾರೆ. ದೆಹಲಿಯಲ್ಲಿ ನಡೆದ ಒಂದು ವಿಚಿತ್ರ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ (Video Viral) ಆಗುತ್ತಿದೆ. ಗಂಡ-ಹೆಂಡತಿ, ರಾತ್ರಿ ಹೊತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಅಲ್ಲಿ ಸ್ಕೂಟರ್​​ನಲ್ಲಿ ಇಬ್ಬರು ಬರುತ್ತಾರೆ. ಅವರು ಆ ದಂಪತಿಯನ್ನು ದೋಚಲೆಂದೇ ಗಾಡಿ ನಿಲ್ಲಿಸುತ್ತಾರೆ. ಆದರೆ ಕೊನೆಯಲ್ಲಿ ಹೋಗುವಾಗ..?

ಈ ಸುದ್ದಿಯನ್ನೂ ಓದಿ: Viral video: ಈ ಚಿರತೆ ನಿಮ್ಮನ್ನು ತಿನ್ನಲ್ಲ, ಬದಲಾಗಿ, ನೀವು ಚಿರತೆಯನ್ನು ತಿನ್ನಬಹುದು!

ಆರಂಭದಲ್ಲಿ ಇದು ಗಂಭೀರ ಪ್ರಕರಣ. ಯಾಕೆಂದರೆ ಹೀಗೆ ಮಧ್ಯರಸ್ತೆಯಲ್ಲಿ ಕಳ್ಳರು ದಂಪತಿಯನ್ನು ಅಡ್ಡಗಟ್ಟಿ ಅವರಿಗೆ ಹೆದರಿಸುತ್ತಿದ್ದಾರೆ. ಆ ಪುರುಷ ತನ್ನ ಬಳಿ ಏನಿಲ್ಲ ಎಂದು ಜೇಬನ್ನೆಲ್ಲ ತೋರಿಸುತ್ತಾರೆ. ಸ್ಕೂಟರ್​​ನಿಂದ ಒಬ್ಬ ಇಳಿದು ಬಂದು ಆತನ ಜೇಬ್​ ಚೆಕ್​ ಮಾಡುತ್ತಾನೆ. ಅವನಿಗೆ ಏನೂ ಸಿಕ್ಕಿಲ್ಲ. ಅಂತಿಮವಾಗಿ ಆ ಕಳ್ಳರು ಅಲ್ಲಿಂದ ಹೋಗುವಾಗ ಆ ದಂಪತಿಯಲ್ಲಿ ಗಂಡನಿಗೆ ಏನನ್ನೋ ಕೊಡುತ್ತಾರೆ. AstroCounselKK ಎಂಬ ಟ್ವಿಟರ್​ ಅಕೌಂಟ್​ನಲ್ಲಿ ಈ ವಿಡಿಯೊ ಶೇರ್ ಆಗಿದೆ. ‘ದಂಪತಿಯನ್ನು ಸುಲಿಗೆ ಮಾಡಲು ಬಂದ ಕಳ್ಳರು ಅವರಿಗೇ 100 ರೂಪಾಯಿ ಕೊಟ್ಟು ಹೋದರು. ಆ ದಂಪತಿ ಬಳಿ 20 ರೂಪಾಯಿ ಅಷ್ಟೇ ಇತ್ತು..ಕುಡಿದು ದರೋಡೆಗೆ ಬಂದರೆ ಹೀಗೇ ಆಗುತ್ತದೆ’ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version